ಚುಟುಕು ಸುದ್ದಿಗಳು
ಇಂದು ದೇರಳಕಟ್ಟೆಯಲ್ಲಿ ತನ್‌ಶೀತ್ ಕ್ಯಾಂಪ್
ಉಳ್ಳಾಲ, ಎ.24: ದೇರಳಕಟ್ಟೆಯ ಹೆರಿಟೇಜ್ ಸ್ಕ್ಯಾರ್ ಸಿಟಿ ಗ್ರೌಂಡ್‌ನಲ್ಲಿ ಮೇ 1ರಂದು ನಡೆಯುವ ಡಿವಿಜನ್ ಕಾನ್ಫರೆನ್ಸ್‌ನ ಪ್ರಯುಕ್ತ ಕಾರ್ಯಕರ್ತರನ್ನು ಸಕ್ರಿಯಗೊಳಿಸಲು ತನ್‌ಶೀತ್ ಕ್ಯಾಂಪ್ ಎ.25ರಂದು ಸಂಜೆ 6 ಗಂಟೆಗೆ ಅಲ್ ಮದೀನಾ ಹಾಲ್ ತಿಬ್ಲೆಪದವುನಲ್ಲಿ ಡಿವಿಜನ್ ಅಧ್ಯಕ್ಷ ಉಮರ್ ಅಹ್ಸನಿ ಇನೋಳಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯೀಲ್ ಸಅದಿ ಉರುಮಣೆ ಕಾರ್ಯಕ್ರಮ ಉದ್ಘಾಟಿಸುವರು. ಇಸ್ಹಾಕ್ ಝುಹ್ರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ತರಗತಿಯನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ನೂತನ ಕಟ್ಟಡದ ಉದ್ಘಾಟನೆ
ಪುತ್ತೂರು, ಎ.24: ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಸತಿಯುತ ವಿದ್ಯಾಲಯದ ನೂತನ ಕಟ್ಟಡವನ್ನು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀಶೃಂಗೇರಿ ಶಾರದಾ ಪೀಠಾಧೀಶ್ವರ ಭಾರತೀತೀರ್ಥ ಎ.25ರಂದು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂದು ಅಹವಾಲು ಸ್ವೀಕಾರ
ಉಡುಪಿ, ಎ.24: ಶಾಸಕ ಹಾಗೂ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಎ.25 ರಂದು ಅಪರಾಹ್ನ 3ರಿಂದ 5ಗಂಟೆಯವರೆಗೆ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ದೇರಳಕಟ್ಟೆಯಲ್ಲಿ ‘ಏಕತೆಯೇ ಭದ್ರತೆ’ ಕಾರ್ಯಕ್ರಮ
ಉಳ್ಳಾಲ, ಎ.24: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಉಳ್ಳಾಲ ವಲಯ ವತಿಯಿಂದ ಏಕತಾ ಅಭಿಯಾನದ ಪ್ರಯುಕ್ತ ‘ಏಕತೆಯೇ ಭದ್ರತೆ’ ಎಂಬ ಜನಜಾಗೃತಿ ಕಾರ್ಯಕ್ರಮವು ಎ.25 ರಂದು ಸಂಜೆ 7:15ಕ್ಕೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸದಸ್ಯ ರಫೀಕ್ ದಾರಿಮಿ ವಹಿಸಲಿದ್ದಾರೆ. ಯೂಸುಫ್ ಮಿಸ್ಬಾಹಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಪೈಝಿ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ನಾಳೆ ಶಿರೂರು ಮೀನು ಮಾರುಕಟ್ಟೆಗೆ ಶಂಕುಸ್ಥಾಪನೆ
ಉಡುಪಿ, ಎ.24: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂಗ್ರಾಪಂ ಶಿರೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಶಿರೂರು ಗ್ರಾಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಎ.26ರಂದು ಅಪರಾಹ್ನ 12:30ಕ್ಕೆ ಶಿರೂರಿನ ಮೀನು ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶಪಾಲ್ ಎ.ಸುವರ್ಣ ಪ್ರಕಟಯಲ್ಲಿ ತಿಳಿಸಿದರು.
ಸ್ವಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಎ.24: ಬ್ರಹ್ಮಾವರದಲ್ಲಿರುವ ರುಡ್‌ಸೆಟ್ ಸಂಸ್ಥೆ, ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಅನುಮೋದಿಸಲ್ಪಟ್ಟ ವಿವಿಧ ರೀತಿಯ ಸ್ವಯಂ ಉದ್ಯೋಗ ಉಚಿತ ತರಬೇತಿಯನ್ನು ಮುಂದಿನ ತಿಂಗಳಿನಲ್ಲಿ ಆಯೋಜಿಸಲಿದೆ. ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ 18ರಿಂದ 45 ವರ್ಷ ವಯೋಮಿತಿಯೊಳಗಿರುವ, ಸ್ವ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತರಬೇತಿಯ ವೇಳೆ ಸಂಬಂಧಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ಈ ಸಂಸ್ಥೆಯ ಎಲ್ಲ ತರಬೇತಿಗಳು ಸಂಪೂರ್ಣ ಉಚಿತವಾಗಿದ್ದು, ವಸತಿ ಸಹಿತವಾಗಿದೆ. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ. ಮಾಹಿತಿಗೆ ಸಂಸ್ಥೆಯ ದೂ.ಸಂ:0820-2563455 ಸಂಪರ್ಕಿಸಬಹುದು. ಅಥವಾ ವೆಬ್‌ಸೈಟ್-ಡಿಡಿಡಿ.್ಟ್ಠಛಿಠಿಜಿಠ್ಟಿಜ್ಞಿಜ್ಞಿಜ.ಟ್ಟಜ- ಗೆ ಭೇಟಿ ನೀಡಬಹುದು ಎಂದು ರುಡ್‌ಸೆಟ್ ಪ್ರಕಟನೆ ತಿಳಿಸಿದೆ.
ದೂರದರ್ಶನ ಸ್ಟ್ರಿಂಜರ್: ಅರ್ಜಿ ಆಹ್ವಾನ
ಮಂಗಳೂರು, ಎ.24: ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‌ಗಳಾಗಿ ಕಾರ್ಯನಿರ್ವಹಿಸಲು ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಅರ್ಜಿಗಳನ್ನು ಆಹ್ವಾನಿಸಿದೆ. ಸುದ್ದಿ ದೃಶ್ಯಾವಳಿ ಚಿತ್ರೀಕರಣ ಹಾಗೂ ವರದಿಗಾರಿಕೆಯಲ್ಲಿ ಅನುಭವ ಮತ್ತು ಪರಿಣತಿ ಅಗತ್ಯ. ಅರ್ಹತೆ ಮಾನದಂಡ ಹಾಗೂ ಅರ್ಜಿ ನಮೂನೆ ಲಭ್ಯವಿರುವ ಜಾಲತಾಣ: ಡಿಡಿಡಿ.ಛ್ಚಚ್ಞಚ್ಞ.ಜಟ.ಜ್ಞಿ. ಅರ್ಜಿ ಸಲ್ಲಿಸಲು ಮೇ 13 ಕೊನೆಯ ದಿನ ಎಂದು ಪ್ರಕಟನೆ ತಿಳಿಸಿದೆ.
ಬೀಟ್ಸ್ ಗರ್ಲ್ಸ್ ಸಮ್ಮರ್ ಫೆಸ್ಟ್‌ಗೆ ಅವಕಾಶ
ಮಂಗಳೂರು, ಎ.24: ನ್ಯಾಷನಲ್ ವಿಮೆನ್ಸ್ ಫ್ರಂಟ್‌ನಿಂದ 14ರಿಂದ 20ರ ಒಳಗಿನ ಹೆಣ್ಣು ಮಕ್ಕಳಿಗೆ ಮೇ 4ರಿಂದ 6ರವರೆಗೆ ಪುತ್ತೂರು ತಾಲೂಕಿನ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಮಕ್ಕಳ ಪ್ರತಿಭೆಗಳನ್ನು ಬೆಳಗಿಸುವ ವಿವಿಧ ಸ್ಪರ್ಧೆಗಳು, ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಬೇಕಾದ ವಿವಿಧ ತರಬೇತಿ. ಆಟೋಟಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಶಿಬಿರದಲ್ಲಿವೆ. ಆಸಕ್ತರು ಮೊ.ಸಂ.ನ್ನು 9844927387/ 7353625280 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಉಡುಪಿ, ಎ.24: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ, ಗ್ರಾಪಂ ಹಾಗೂ ನಗರಸಭೆ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿದೆ.
ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಎ.27ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಡುಪಿ ಇವರಿಗೆ ಖುದ್ದು ಅಥವಾ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರ ಸೇವೆಗೆ ಲಭ್ಯ
ಉಡುಪಿ, ಎ.24: ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ‘ಬಿಇಎಲ್-ಲಯನ್ಸ್ ಸುಟ್ಟಗಾಯಗಳ ವಿಭಾಗ’ ಈ ತಿಂಗಳಿನಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದುಜಿಲ್ಲಾ ಸರ್ಜನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ
ಮಂಗಳೂರು, ಎ.24: ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್ ಕಾರ್ಯಾಲಯಕ್ಕೆ 2016-17ನೆ ಸಾಲಿಗೆ ಗ್ರೂಪ್ ಡಿ ಸಿಬ್ಬಂದಿ ಸೇವೆಯನ್ನು ಹೊರ ಸಂಪನ್ಮೂಲ ಏಜನ್ಸಿಯಿಂದ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಫಾರಂಗಳನ್ನು ಮೇ 2ರವರೆಗೆ ಮಾರಾಟ ಮಾಡಲಾಗುವುದು. ಮೇ 3ರ ಮಧ್ಯಾಹ್ನ 12 ಗಂಟೆಯೊಳಗೆ ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಸಲ್ಲಿಸಬೇಕು. ಮೇ 3ರ ಮಧ್ಯಾಹ್ನ 1ಕ್ಕೆ ಟೆಂಡರ್ ಫಾರಂಗಳನ್ನು ತೆರೆಯಲಾಗುವುದು. ಮಾಹಿತಿಗಾಗಿ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ದೂ.ಸಂ.: 0824-2478930ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಬಾಲಭವನದಲ್ಲಿ ಬೇಸಿಗೆ ಶಿಬಿರ
ಉಡುಪಿ, ಎ.24: ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ಬೇಸಿಗೆ ಶಿಬಿರ ಎ.28ರಿಂದ ಮೇ 7ರವರೆಗೆ ನಡೆಯಲಿದೆ. ಶಿಬಿರದಲ್ಲಿ 50 ಮಕ್ಕಳಿಗೆ ಪ್ರವೇಶವಿದೆ. ಸೃಜನಾತ್ಮಕ ಚಟುವಟಿಕೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಸಮೂಹ ನೃತ್ಯ, ಕರಾಟೆ ಮುಂತಾದ ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡ ಲಾಗುವುದು. ಸರಕಾರಿ ಶಾಲಾ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಆಸಕ್ತ ಮಕ್ಕಳು ಮಾಹಿತಿಗಾಗಿ ಜಿಲ್ಲಾ ಬಾಲಭವನದ ಕಾರ್ಯ ಕ್ರಮ ಸಂಯೋಜಕರು ಹಾಗೂ ವಿಷಯ ನಿರ್ವಾಹಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಅಥವಾ ದೂ.ಸಂ. 0820-2521942ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ತುಳುಚಿತ್ರದ ಧ್ವನಿ ಸುರುಳಿ ಬಿಡುಗಡೆ
ಮಂಗಳೂರು, ಎ.24: ಶ್ರೀ ಸಾಯಿ ಎಂಟರ್‌ಪ್ರೈಸಸ್ ಅರ್ಪಿಸುವ ‘ದೋಸ್ತಿಲು ಕತ್ತಲೆ ಲೋಕದ ವಿಚಿತ್ರೊಲು’ ಎಂಬ ತುಳು ಚಿತ್ರದ ಧ್ವನಿಸುರುಳಿ ನಗರದ ಕಾವೂರು ಮುಲ್ಲಕಾಡುವಿನಲ್ಲಿ ಮುಲ್ಲಕಾಡು ಫ್ರೆಂಡ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ಮಂದಾರಬೈಲು ಬ್ರಹ್ಮಶ್ರೀ ಹರಿಭಟ್, ಚಿತ್ರದ ಸಹನಿರ್ಮಾಪಕ ಜ್ಯೋತಿ ಜೈನ್, ಸಂಗೀತ ನಿರ್ದೇಶಕ ಹುಸೈನ್ ಕಾಟಿಪಳ್ಳ, ತುರವೇ ಗೌರವಾಧ್ಯಕ್ಷ ಯೋಗಿಶ್‌ಶೆಟ್ಟಿ ಜೆಪ್ಪು, ಚಿತ್ರದ ನಾಯಕ, ನಾಯಕಿಯರಾದ ವಿಘ್ನೇಶ್ ಕುಮಾರ್, ದೀಪಕ್, ಸಂತೋಷ್ ಕುಮಾರ್, ವಿದ್ಯಾಶ್ರೀ, ಚೈತ್ರಾ ಅಂಚನ್, ಪ್ರಿಯಾಂಕಾ ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕ ತರಬೇತಿ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ
ಮಂಗಳೂರು, ಎ.24: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ ಬೆಂಗಳೂರು ವತಿಯಿಂದ ಹಿಂದಿ ಶಿಕ್ಷಕ್ ಟ್ರೈನಿಂಗ್ ಕೋರ್ಸ್ ಪರೀಕ್ಷೆಯು ಮೇ 11ರಿಂದ ಪ್ರಾರಂಭವಾಗಲಿದ್ದು, ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣತೆಯೊಂದಿಗೆ ಹಿಂದಿ ರತ್ನ, ಪ್ರವೀಣ್, ವಿದ್ವಾನ್ ಪದವಿಯಲ್ಲಿ ಶೇ.50 ರಷ್ಟು ಉತ್ತೀರ್ಣತೆ ಹೊಂದಿರುವ 18-40 ವರ್ಷ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಪ್ರಾಂಶುಪಾಲರು, ಹಿಂದಿ ಶಿಕ್ಷಕ್ ಟ್ರೈನಿಂಗ್ ಕಾಲೇಜ್, ಹಿಂದಿ ಭವನ, ಜಿಪಂ ಕಚೆೇರಿ ಎದುರು, ಮಂಡ್ಯ, ದೂ. ಸಂ. 08232- 226667 /9448268114 ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.
‘ರಾಷ್ಟ್ರೀಯ ಯುವಪಡೆ’ಗೆ ಅರ್ಜಿ ಆಹ್ವಾನ
ಉಡುಪಿ, ಎ.24: ಭಾರತ ಸರಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಕ-ಯುವತಿಯರಿಗಾಗಿ ‘ರಾಷ್ಟ್ರೀಯ ಯುವಪಡೆ (ದಳ)’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಯುವಜನರನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಇದರಡಿ ದೇಶಾದ್ಯಂತ 20,000 ಯುವಜನರನ್ನು ‘ರಾಷ್ಟ್ರೀಯ ಯುವಪಡೆ’ ಪೂರ್ಣ ಪ್ರಮಾಣದಲ್ಲಿ ಎರಡು ವರ್ಷಗಳ ಅವಧಿಗೆ ನಿಯೋಜಿಸಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಕ್ತ ಗೌರವಧನ, ವಿಶೇಷ ತರಬೇತಿ ಹಾಗೂ ಸಮವಸ್ತ್ರವನ್ನು ನೀಡಲಾಗುತ್ತದೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 3 ತಾಲೂಕುಗಳಿಂದ 6 ಮಂದಿ ಯುವಕ ಯುವತಿಯರನ್ನು ತಾಲೂಕಿಗೆ ಇಬ್ಬರಂತೆ ಜೊತೆಗೆ ಕಂಪ್ಯೂಟರಿನಲ್ಲಿ ಕೆಲಸ ನಿರ್ವಹಿಸಲು ಇಬ್ಬರು ‘ರಾಷ್ಟ್ರೀಯ ಯುವಪಡೆ’ಯ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಮಾರ್ಚ್‌ಗೆ ಕನಿಷ್ಠ 18ವರ್ಷದಿಂದ ಗರಿಷ್ಠ 25 ವರ್ಷದೊಳಗಿರಬೇಕು. ಕನಿಷ್ಠ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರಬೇಕು. ಈಗಾಗಲೇ ರಾಷ್ಟ್ರೀಯ ಸ್ವಯಂಸೇವಕರಾಗಿ ಹಿಂದಿನ ಯೋಜನೆಗಳಲ್ಲಿ ಸೇವೆ ಸಲ್ಲಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ, ಯುವಕ/ಯುವತಿ/ ಮಹಿಳಾ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವವರಿಗೆ, ರಾಷ್ಟ್ರ ಸೇವಾ ಯೋಜನೆ ಹಾಗೂ ಎನ್‌ಸಿಸಿಯಲ್ಲಿ ಪಾಲ್ಗೊಂಡವರಿಗೆ ವಿಶೇಷ ಆದ್ಯತೆ ಇರುತ್ತದೆ.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವಕೆಂದ್ರ, ಡಿ.ಸಿ ಸಂಕೀರ್ಣ, ‘ರಜತಾದ್ರಿ’ ಬಿ ಬ್ಲಾಕ್ ಮಣಿಪಾಲ- 576104 ಉಡುಪಿ ಅಥವಾ ವೆಬ್‌ಸೈಟ್- ಡಿಡಿಡಿ.್ಞ.ಟ್ಟಜ ಟ್ಟ ಡಿಡಿಡಿ..್ಞಜ್ಚಿ.ಜ್ಞಿ-ನಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಮೇ 5ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸ ಬಹುದು. ಮಾಹಿತಿಗೆ ದೂ.ಸಂ:0820-2574992ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಹಿರಾ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ
ಮಂಗಳೂರು, ಎ.24: ಬಬ್ಬುಕಟ್ಟೆ ಹಿರಾ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಶಾಂತಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಹಿರಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತೆಕ್ಕಿಲ್ ಅಹ್ಮದ್ ಅಲಿ ಟ್ರಸ್ಟ್ ಅಧ್ಯಕ್ಷ ಅಹ್ಮದ್ ಅಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್‌ನ ನಿರ್ದೇಶಕ ಕೆ.ಎಂ. ಶರೀಫ್, ಸಂಚಾಲಕ ರಹ್ಮತುಲ್ಲಾಹ್, ಸದಸ್ಯರಾದ ಎ.ಎಚ್.ಮೆಹಮೂದ್, ಅಬ್ದುಲ್ ಖಾದರ್, ಉಮರ್ ಬಾವ, ವ್ಯವಸ್ಥಾಪಕರಾದ ಸಮೀರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಹಕ್ ಮತ್ತು ಸದಸ್ಯರು, ಹಿರಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೌಜನ್ಯಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್. ವಾರ್ಷಿಕ ವರದಿ ವಾಚಿಸಿದರು ಕಾಲೇಜಿನ ನಾಯಕಿ ಝಬೀನಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಮಯ್ಯಾ ಕಾರ್ಯಕ್ರಮ ನಿರೂಪಿಸಿದರು. ಫಾತಿಮಾ ರೂಬಿ ನಹಾನ ವಂದಿಸಿದರು.
ಸಮಾರಂಭದಲ್ಲಿ 2014-15ನೆ ಸಾಲಿನ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ರಕ್ಷಕ ಶಿಕ್ಷಕರ ವತಿಯಿಂದ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ಕೈಗಾರಿಕೆ, ಉದ್ದಿಮೆಗಳಿಗೆ ನೀರು ಸ್ಥಗಿತಗೊಳಿಸಲು ಡಿವೈಎಫ್‌ಐ ಆಗ್ರಹ
ಮಂಗಳೂರು, ಎ.24: ಮಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ತುರ್ತು ಸ್ಥಿತಿ ಘೋಷಿಸುವ ಸಂದರ್ಭ ಬಂದಿದೆ. ಎಂಆರ್‌ಪಿಎಲ್, ಸೆಝ್ ಸೇರಿದಂತೆ ಬೃಹತ್ ಉದ್ದಿಮೆಗಳಿಗೆ ನೇತ್ರಾವತಿ ನೀರಿನ ಪೂರೈಕೆ ಸ್ಥಗಿತ ಗೊಳಿಸಬೇಕು. ಆ ಉದ್ದಿಮೆಗಳ ನೀರನ್ನು ವಶಪಡಿಸಿ ಜನತೆಗೆ ನಿಯಮಿತವಾಗಿ ವಿತರಿಸಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಒತ್ತಾ ಯಿಸಿದೆ.
ತುಂಬೆ ಡ್ಯಾಮ್‌ನಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಕುಡಿಯುವ ನೀರಿಗೂ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಈ ಗಂಭೀರ ಸಂದರ್ಭವನ್ನು ನಿಭಾ ಯಿಸಲು ಜಿಲ್ಲಾಡಳಿತ ಎಂಆರ್‌ಪಿಎಲ್, ಸೆಝ್ ಸೇರಿದಂತೆ ಘನ ಕೈಗಾರಿಕೆಗಳಿಗೆ ಪೂರೈಕೆಯಾಗುವ ನೀರನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ವಿತರಿಸಬೇಕು. ಹಾಗೆಯೇ ಹೊಸ ಮಠ ಪವರ್ ಪ್ರಾಜೆಕ್ಟ್ ನಡಿಯಿಟ್ಟಿರುವ ನೀರಿನ ಸಂಗ್ರಹವನ್ನೂ ಪಡೆದು ಸಾರ್ವಜನಿಕ ವಿತರಣೆಗೆ ಮೀಸಲಿಡಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಲಿಗ್ರಾಮದಲ್ಲಿ ಆಧಾರ್ ನೋಂದಣಿ
ಉಡುಪಿ, ಎ.24: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ, ಪಾರಂಪಳ್ಳಿ, ಕಾರ್ಕಡ ಮತ್ತು ಗುಂಡ್ಮಿ ಗ್ರಾಮಗಳಿಗೆ ಸಂಬಂಧಿಸಿ ದಂತೆ ಆಧಾರ್ ಗುರುತಿನ ಚೀಟಿ ನೋಂದಣಿಗಾಗಿ ಬಯೋಮೆಟ್ರಿಕ್ ಕಾರ್ಯಕ್ರಮವನ್ನು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಪಟ್ಟಣ ಪಂಚಾಯತ್ ವಾಣಿಜ್ಯ ಸಂಕೀರ್ಣ ಕಚೇರಿಯಲ್ಲಿ ನಡೆಸಲಾಗುವುದು. ಈವರೆಗೆ ಆಧಾರ್ ಗುರುತಿನ ಚೀಟಿ ನೋಂದಣಿ ಮಾಡ ದಿದ್ದವರು ಗುರುತು ಚೀಟಿಗಾಗಿ ನೋಂದಣಿ ಮಾಡಿಸಬಹುದಾಗಿದೆ. ಈ ಗುರುತು ಚೀಟಿ ನೋಂದಣಿಗೆ ಮತದಾರರ ಚೀಟಿ ನಕಲು/ ಡ್ರೈವಿಂಗ್ ಲೈಸನ್ಸ್ ನಕಲು/ ಪಾನ್‌ಕಾರ್ಡ್ ನಕಲು/ಬ್ಯಾಂಕ್ ಪಾಸ್ ಪುಸ್ತಕದ ನಕಲು/ಮನೆ ತೆರಿಗೆ ರಶೀದಿ ನಕಲುಗಳನ್ನು ಅಗತ್ಯವಾಗಿ ಹಾಜರುಪಡಿಸಬೇಕಾಗಿದೆ.
ಈಗಾಗಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿ, ಈವರೆಗೂ ಕಾರ್ಡ್ ಸಿಗದಿದ್ದವರು ಸಂಬಂಧಿಸಿದ ಸೈಬರ್ ಸೆಂಟರ್‌ನಲ್ಲಿ ಮರುಪರಿಶೀಲಿಸಿಕೊಂಡು, ಒಂದು ವೇಳೆ ತಿರಸ್ಕೃತಗೊಂಡಿದ್ದಲ್ಲಿ ಪುನ: ಆಧಾರ್ ಗುರುತಿನ ಚೀಟಿ ತೆಗೆಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳ ಪ್ರಕಟನೆ ತಿಳಿಸಿದೆ.







