ರಾಜ್ಯಮಟ್ಟದ ದಫ್ ಸ್ಪರ್ಧೆ
ಮುಲ್ಕಿ, ಎ.24: ಹಳೆಯಂಗಡಿ ಸಾಗ್ ಅಲ್ ಬದ್ರಿಯಾ ಯೂತ್ ಅಸೋಸಿಯೇಶನ್‌ನ ಬೆಳ್ಳಿಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕೂಟ ಹಾಗೂ ಜಲಾಲಿಯ್ಯಿ ವಾರ್ಷಿಕ ಸಮಾರಂಭ ಎ.27ರಿಂದ ನಡೆಯಲಿದೆ.
ಎ.27ರಂದು ಜಲಾಲಿಯ್ಯ ವಾರ್ಷಿಕ ನಡೆಯಲಿದ್ದು, ಅಸೈಯದ್ ಜಾಫರ್ ಸ್ವಾದಿಖ್ ತಂಙಳ್ ದುಆಶೀರ್ವಚನ ನೀಡಲಿದ್ದಾರೆ. ಎ.28ರಿಂದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಗಳು ನಡೆಯಲಿದ್ದು, ಎ.30ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಪಂದ್ಯಾಕೂಟ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





