ಪತಿಯ ನಿಧನದ ಬಳಿಕ ಪತ್ನಿಗೆ ಒತ್ತಡ ಕಡಿಮೆ....!
ಅಧ್ಯಯನ ವರದಿ
ಮದುವೆಯನ್ನು ಬಹಳ ಲಾಭಕರ ಎಂದು ಪರಿಗಣಿಸಲಾಗಿದೆ. ಆದರೆ ಹೊಸ ಅಧ್ಯಯನವೊಂದರ ಪ್ರಕಾರ ಪತಿ ಜೀವಂತವಾಗಿರುವ ಮಹಿಳೆಯರಿಗೆ ಹೋಲಿಸಿದರೆ ವಿಧವೆಯರು ಕಡಿಮೆ ಒತ್ತಡವನ್ನು ಅನುಭವಿಸುತ್ತಾರೆ.
ಮದುವೆಯು ಆರೋಗ್ಯ, ಹೃದಯ ರೋಗ, ಖಿನ್ನತೆ ಮತ್ತು ಕ್ಯಾನ್ಸರಿನಿಂದ ರಕ್ಷಣೆ ನೀಡುತ್ತದೆ ಎನ್ನುವ ಹಿಂದಿನ ಸಂಶೋಧನೆಗೆ ಇದು ತದ್ವಿರುದ್ಧವಾಗಿದೆ. ಪಡೋವ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಹೇಳಿರುವ ಪ್ರಕಾರ ತಮ್ಮ ಪತ್ನಿಯ ಮರಣದ ನಂತರ ವಿಧುರರು ನಕಾರಾತ್ಮಕ ಪರಿಣಾಮ ಅನುಭವಿಸುತ್ತಾರೆ. ಏಕೆಂದರೆ ಅವರು ಬಹುತೇಕ ಪತ್ನಿಯರನ್ನೇ ಅವಲಂಭಿಸಿರುತ್ತಾರೆ. ಆದರೆ ಪತಿ ಕಳೆದುಕೊಂಡ ಮೇಲೆ ಪತ್ನಿಯರು ಹೆಚ್ಚು ಆರೋಗ್ಯವಂತರಾಗಿರುವುದು ತಿಳಿದು ಬಂದಿದೆ.
ಮುಖ್ಯ ಸಂಶೋಧಕಿ ಕ್ಯಾಥರೀನಾ ಟ್ರೆವಿಸನ್ ಹೇಳಿರುವಂತೆ ಪತ್ನಿಯ ಅಸ್ತಿತ್ವವು ಮನೆ ನಿರ್ವಹಣೆ ಮತ್ತು ಆರೋಗ್ಯ ಸೇವೆಯಲ್ಲಿ ಪುರುಷರಿಗೆ ಲಾಭ ತರಬಹುದಾದರೂ, ಮಹಿಳೆಯರು ಹೆಚ್ಚು ಹತಾಶರಾಗಬಹುದು ಮತ್ತು ತಮ್ಮ ಪಾತ್ರ ಸೀಮಿತವೆಂದು ನಿರಾಶೆ ಹೊಂದುವ ಸಾಧ್ಯತೆಯಿರಬಹುದು. ಮಹಿಳೆಯರಿಗೆ ಪುರುಷರಿಗಿಂತ ಧೀರ್ಘ ಆಯುಸ್ಸು ಇರುವ ಕಾರಣದಿಂದ ವಿವಾಹಿತ ಮಹಿಳೆಯರು ಸೇವೆ ಮಾಡಬೇಕಾದ ವ್ಯಕ್ತಿಯ ಹೊರೆಯನ್ನು ಅನುಭವಿಸುತ್ತಾರೆ. ಏಕೆಂದರೆ ಅವರು ಸಾಮಾನ್ಯವಾಗಿ ಜೀವನಪೂರ್ತಿ ಪತಿಯ ಸೇವೆಯಲ್ಲಿ ಕಳೆದಿರುತ್ತಾರೆ ಎಂದು ಕ್ಯಾಥರೀನಾ ಹೇಳಿದ್ದಾರೆ.
ಏಕಾಂಗಿಯಾಗಿ ನೆಲೆಸಿರುವ ಮಹಿಳೆಯರು ಅವಿವಾಹಿತ ಯುವಕರಿಗಿಂತ ಕಡಿಮೆ ಒತ್ತಡ ಎದುರಿಸುತ್ತಾರೆ. ಉತ್ತಮ ಉದ್ಯೋಗ, ತೃಪ್ತಿ, ಕೆಲಸದಲ್ಲಿ ಉತ್ತಮ ಚಟುವಟಿಕೆ ಮಟ್ಟ ಮತ್ತು ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಉತ್ತಮ ಬಲಿಷ್ಠ ಸಂಬಂಧಗಳನ್ನು ಹೊಂದಿರುವ ಕಾರಣ ಸಾಮಾಜಿಕ ಏಕಾಂಗಿತನ ಭಯ ಅವರಿಗೆ ಕಡಿಮೆ ಇರುತ್ತದೆ. ಸಂಗಾತಿಯನ್ನು ಕಳೆದುಕೊಂಡ ನೋವನ್ನು ವಿಧವೆಯರು ವಿಧುರರಿಗೆ ಹೋಲಿಸಿದಲ್ಲಿ ಉತ್ತಮವಾಗಿ ನಿಭಾಯಿಸುತ್ತಾರೆ.
ವಿಧುರರಲ್ಲಿ ಸಾಮಾನ್ಯವಾಗಿ ಖಿನ್ನತೆಯ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧಕಿ ಅಭಿಪ್ರಾಯಪಡುತ್ತಾರೆ. ವಿವಾಹಿತ ಮಹಿಳೆಯರಿಗೆ ಹೋಲಿಸಿದರೆ ವಿಧವೆಯರು ಶೇ 23ರಷ್ಟು ಕಡಿಮೆ ದುರ್ಬಲರು ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನಕ್ಕಾಗಿ 733 ಇಟಲಿ ಪುರುಷರು ಮತ್ತು 1,154 ಮಹಿಳೆಯನ್ನು ನಾಲ್ಕೂವರೆ ವರ್ಷ ಅಧ್ಯಯನ ಮಾಡಲಾಗಿದೆ. ವಿವಾಹಿತರಿಗೆ ಹೋಲಿಸಿದರೆ ಅವಿವಾಹಿತರು ಬಹುತೇಕ ನಾಲ್ಕು ಪಟ್ಟು ಮತ್ತು ವಿಧವೆಯರು ಒಂದೂವರೆ ಪಟ್ಟು ಕಡಿಮೆ ದುರ್ಬಲರಾಗಿರುತ್ತಾರೆ. ಈ ಹೊಸ ಸಂಶೋಧನೆಯು ಹಿಂದಿನ ಸಂಶೋಧನೆಗಳಿಗೆ ಸ್ವಲ್ಪ ಬದಲಾಗಿದ್ದರೂ ಮದುವೆಯಿಂದ ಸಂತಾನ, ಆರೋಗ್ಯ ಸ್ಥಿತಿ ಮತ್ತು ಖಿನ್ನತೆ ಮಹಿಳೆ ಮತ್ತು ಪುರುಷರಲ್ಲಿ ರಕ್ಷಣಾತ್ಮಕ ಪರಿಣಾಮವಾಗಿರುವುದೂ ತಿಳಿದು ಬಂದಿದೆ.
ಕೃಪೆ: deccanherald.com