ಇಸ ವೀಸಾ ರದ್ದು ಮಾಡಿದ ಭಾರತ

ಹೊಸದಿಲ್ಲಿ, ಎ. 25: ಹಿಮಾಚಲಪ್ರದೇಶದ ಧರ್ಮಶಾಲೆಯಲ್ಲಿ ಮುಂದಿನ ವಾರ ನಡೆಯಲಿರುವ ಚೀನಾ ಪ್ರತ್ಯೇಕತವಾದಿಗಳ ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಉಯಿಗುರ್ ಮುಖಂಡ ಡೋಲ್ಕನ್ ಇಸಗೆ ನೀಡಲಾಗಿದ್ದ ವೀಸವನ್ನು ಭಾರತ ರದ್ದುಪಡಿಸಿದೆ. ಚೀನಾದ ವಿರೋಧದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಡೋಲ್ಕನ್ ಇಸ ಚೀನಾದ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವಾದ ಷೀನ್‌ಜಾಂಗ್ ಪ್ರಾಂತ್ಯದ ಉಯಿಗುರ್ ಪ್ರತ್ಯೇಕತಾವಾದಿಗಳ ಸಂಘಟನೆ ವರ್ಲ್ಡ್ ಉಯಿಗುರ್ ಕಾಂಗ್ರೆಸ್‌ನ ಮುಖಂಡನಾಗಿದ್ದಾರೆ. ತುರ್ಕಿ ವಂಶಜರಾದ ಉಯಿಗುರ್‌ಗಳು ಸ್ವಾಯತ್ತತೆಗೆ ಆಗ್ರಹಿಸಿ ಸಶಸ್ತ್ರ ಹೋರಾಟದಲ್ಲಿ ನಿರತರಾಗಿದ್ದಾರೆ.
ಇಂಟರ್‌ಪೋಲ್ ಹಾಗೂ ಚೀನಾ ಪೊಲೀಸರು ರೆಡ್‌ಕಾರ್ನರ್ ನೋಟಿಸ್ ನೀಡಿದ ಉಗ್ರ ಡೋಲ್ಕನ್ ಇಸ ಎಂಬುದು ಚೀನಾದ ವಾದವಾಗಿದೆ. ಪ್ರತ್ಯೇಕತಾವಾದಿಯನ್ನು ಆಂತ್ರಿಸಿದ್ದಕ್ಕೆ ಚೀನಾ ವಿದೇಶಾಂಗ ಸಚಿವಾಲಯ ವಿರೋಧ ವ್ಯಕ್ತಪಡಿಸಿತ್ತು.
Next Story





