ಬಿಜೆಪಿಯಿಂದ ಕುದುರೆ ವ್ಯಾಪಾರ: ಖರ್ಗೆ ಆಕ್ರೋಶ

ಹೊಸದಿಲ್ಲಿ, ಎ. 25: ಉತ್ತರಖಂಡದಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯು ಚುನಾಯಿತ ಸರಕಾರಗಳನ್ನು ಇಳಿಸಲು ನೋಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಪ್ರಕರಣವು ಇಂದು ಸಂಸತ್‌ನಲ್ಲಿ ತೀವ್ರವಾಗಿ ಪ್ರತಿಧ್ವನಿಸಿತು. ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಬಾವಿಗಿಳಿದು ಧರಣಿ ಕುಳಿತರು.
ಕೇಂದ್ರದ ಎಂಟು ಪ್ರಕರಣಗಳ ಬೊಟ್ಟು ಮಾಡಿದ ಕಾಂಗ್ರೆಸ್ ಅಧಿವೇಶನದಲ್ಲಿ ಬಿಜೆಪಿ ಮೇಲೆ ದಾಳಿ ನಡೆಸಿತು. ಪ್ರಥಮವಾಗಿ ಉತ್ತರಾಖಂಡದ ಹರೀಶ್ ರಾವತ್ ಸರಕಾರವನ್ನು ಉರುಳಿಸಿದ ಬಗ್ಗೆ ಕಾಂಗ್ರೆಸ್ ಮುಖಂಡ ಗುಲಾಂನಬಿ ಆಝಾದ್ ಲೋಕಸಭೆಯಲ್ಲಿ ಪ್ರಶ್ನಿಸಿದರು.
ಪ್ರತಿಪಕ್ಷಗಳ ಧರಣಿಯ ಹಿನ್ನೆಲೆಯಲ್ಲಿ ಅಧಿವೇಶನವನ್ನು 2 ಗಂಟೆಯವರಿಗೆ ಮುಂದೂಡಲಾಯಿತು.
Next Story





