ನೇಪಾಳದಲ್ಲಿ ಐವರು ಭಾರತೀಯ ಪೊಲೀಸರ ಬಂಧನ!

ಕಾಠ್ಮಂಡು, ಎಪ್ರಿಲ್,25: ಕೇಸು ತನಿಖೆ ಮಾಡಲಿಕ್ಕಾಗಿ ನೇಪಾಳಕ್ಕೆ ಬಂದ ಭಾರತೀಯ ಪೊಲೀಸ್ ತಂಡವನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇನ್ಸ್‌ಪೆಕ್ಟರ್ ಸಹಿತ ಐವರು ಪೊಲೀಸರನ್ನು ನಿನ್ನೆ ಸಂಗೋಣ್‌ನಲ್ಲಿ ನೇಪಾಳ ಪೊಲೀಸ್ ಬಂಧಿಸಿತ್ತು.
ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ವೈದ್ಯರ ಕೊಲೆಪಾತಕಕ್ಕೆ ಸಂಬಂಧಿಸಿದ ಆರೋಪಿಯನ್ನು ಹುಡುಕುತ್ತಾ ಇಲ್ಲಿಗೆ ಬಂದಿದ್ದೇವೆ ಎಂದು ಭಾರತೀಯ ಪೊಲೀಸರು ತಿಳಿಸಿದರೂ ನೇಪಾಳ ಪೊಲೀಸರು ಅದನ್ನು ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ. ಯಾಕೆಂದರೆ ಭಾರತೀಯ ಪೊಲೀಸರು ಅಧಿಕೃತ ಯೂನಿಫಾರಂ ನಲ್ಲಿರಲಿಲ್ಲ. ಇವರ ಕೈಯಲ್ಲಿದ್ದ ಏಕೆ47 ಪಿಸ್ತೂಲ್, ಗುಂಡುಗಳನ್ನು ನೇಪಾಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
Next Story





