ಭಟ್ಕಳ: ಕಸಾಪ ಅಜೀವ ಸದಸ್ಯರ ಸಮಾಲೋಚನ ಸಭೆ

ಭಟ್ಕಳ :ತಾಲೂಕು ಕಸಾಪ ಘಟಕದ ಅದ್ಯಕ್ಷರ ನೇಮಕಕ್ಕೆ ಸಂಬಂಧ ಪಟ್ಟಂತೆ ಉತ್ತರಕನ್ನಡ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಭಟ್ಕಳದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಸಾಪ ಆಜೀವ ಸದಸ್ಯರ ಸಮಾಲೋಚನ ಸಭೆ ನಡೆಸಿದರು.
ಈ ಸಂದರ್ಬದಲ್ಲಿ ಭಟ್ಕಳ ಸಾಹಿತ್ಯಬಳಗದ ವತಿಯಿಂದ ನೂತನ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿ ಕೋಡಿಯವರನ್ನು ಸನ್ಮಾನಿಸಲಾಯಿತು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದಅವರುಜಿಲ್ಲೆಯಲ್ಲಿಕನ್ನಡ ಸಾಹಿತ್ಯ ಪರಿಷತ್ ನ್ನು ಕ್ರಿಯಾಶೀಲವಾಗಿಸಲು ಮತ್ತು ಇನ್ನಷ್ಟುಕರ ಹತ್ತಿರಕ್ಕೆ ಪರಿಷತ್ತನ್ನುಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಮಾತ್ರವಲ್ಲ ಸಾಹಿತ್ಯ ಪರಿಷತ್ತಿನ ಸದಸ್ಯರು ಇನ್ನಷ್ಟು ಕ್ರಿಯಾಶೀಲರಾಗಿ ಕನ್ನಡದ ಕೆಲಸ ಮಾಡಲು ತೊಡಗಿಸಿಕೊಳ್ಳುವಂತೆ ಪ್ರತ್ನಿಸುತ್ತೇನೆ ಎಂದು ನುಡಿದರು. ಭಟ್ಕಳದ ನೆಲ ನಾನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮಾತ್ರವಲ್ಲ ಸಾಹಿತ್ಯ ಪರಿಷತ್ ನ ಅದ್ಯಕ್ಷನನ್ನಾಗಿಸುವಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ನುಡಿದರು.ಇಲ್ಲಿನ ಸಾಹಿತ್ಯ ಕ್ಷೇತ್ರದ ಹಿರಿಯರು ಮತ್ತು ಸ್ನೇಹಿತರು ನೀಡಿದ ಗೌರವಕ್ಕೆ ಕೃತಜ್ಞತೆ ತಿಳಿಸಿದರಲ್ಲದೇ ಕನ್ನಡದ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿ ಸಾಹಿತ್ಯ ಪರಿಷತ್ತನ್ನುಇನ್ನಷ್ಟು ಸಶಕ್ತಗೊಳಿಸುವ ಮೂಲಕ ನನ್ನನ್ನು ಜಿಲ್ಲಾಧ್ಯಕ್ಷನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಗೌರವ ತಂದು ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ಆ ದಿಸೆಯಲ್ಲಿ ಕಾರ್ಯ ನಿರ್ವಹಿಸಲು ಎಲ್ಲಿಯೂ ಗುಂಪುಗಾರಿಕೆಗೆ ಅವಕಾಶ ನೀಡದೆ ಎಲ್ಲರನ್ನು ಪ್ರೀತಿಯಿಂದ ಜೊತೆಗೆ ಕೊಂಡೊಯ್ಯುವುದಾಗಿ ತಿಳಿಸಿದರು.
ಹಿರಿಯ ಸಾಹಿತಿಗಳಾದ ಡಾ.ಸೈಯ್ಯದ್ ಝಮೀರುಲ್ಲಾ ಷರೀಫ್ ಮಾತನಾಡಿಯುವ ಹಾಗೂ ಕ್ರಿಯಾಶೀಲ ಸಾಹಿತಿ ಅರವಿಂದ್ ಅವರ ನೇತ್ರತ್ವದಲ್ಲಿ ಕಸಾಪ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಇನ್ನೋರ್ವ ಹಿರಿಯ ಸಾಹಿತಿ ವೈದ್ಯರಮೇಶ್ ಸರಾಫ್ ಮಾತನಾಡಿ ಕಸಾಪ ಜಿಲ್ಲಾಧ್ಯಕ್ಷರಾದ ಅರವಿಂದ ಅವರು ಬಾಲ್ಯದಿಂದಲೂ ಭಟ್ಕಳದ ನೆಲ ಇಲ್ಲಿನಜನರೊಂದಿಗೆ ನಂಟನ್ನು ಹೊಂದಿದವರು.ಜಿಲ್ಲಾಧ್ಯಕ್ಷರಾಗಿ ಅವರು ಭಟ್ಕಳದಲ್ಲಿ ಇನ್ನಷ್ಟುಕನ್ನಡಪರಕಾರ್ಯನಡೆಯಲುಕಾರಣರಾಗುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದರು.
ಸಮಾಲೋಚನ ಸಭೆಯ ವೇದಿಕೆಯಲ್ಲಿಕಸಾಪದ ಸದಸ್ಯರಾದಎಸ್ಸೈಯ್ಯದ್ ಅಬ್ದುಲ ಅಜಿಮ್ ಅಂಬಾರಿ ಹಾಗೂ ಕವಿ ಮಾನಾಸುತ ಉಪಸ್ಥಿತರಿದ್ದರು.ನಂತರತಾಲೂಕಾಅದ್ಯಕ್ಷರ ನೇಮಕಕ್ಕೆ ಸಂಬಧಿಸಿದಂತೆ ಎಲ್ಲರ ಅಭಿಪ್ರಾಯವನ್ನು ಪಡೆದರು.ಕಾರ್ಯಕ್ರಮವನ್ನುಉಪನ್ಯಾಸಕ ಗಂಗಾಧರ ನಾಯ್ಕ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನಕಸಾಪದಆಜೀವ ಸದಸ್ಯರು ಭಾಗವಹಿಸಿದ್ದರು







