ಚೀನಾದಿಂದ ಹಾಲು,ಕೆಲವು ಮೊಬೈಲ್ ಫೋನ್‌ಗಳ ಆಮದಿಗೆ ನಿಷೇಧ

ಹೊಸದಿಲ್ಲಿ,ಎ.25: ಕಳಪೆ ಗುಣಮಟ್ಟಕ್ಕಾಗಿ ಅಥವಾ ಸುರಕ್ಷಾ ಸಂಹಿತೆಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು,ಕೆಲವು ಮೊಬೈಲ್ ಫೋನ್‌ಗಳು ಮತ್ತು ಇತರ ಕೆಲವು ಸರಕುಗಳ ಆಮದನ್ನು ಭಾರತವು ನಿಷೇಧಿಸಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಚೀನಾದಿಂದ ಆಮದು ಹಾಲು ಮತ್ತು ಹಾಲಿನ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲವು ಮೊಬೈಲ್ ಫೋನಗಳು ಐಎಂಎಸ್‌ಇಐ ಸಂಖ್ಯೆ ಮತ್ತು ಇತರ ಕೆಲವು ಭದ್ರತಾ ಅಂಶಗಳನ್ನು ಹೊಂದಿಲ್ಲ. ಕೆಲವು ಉಕ್ಕು ಉತ್ಪಾದನೆಗಳ ಆಮದನ್ನೂ ನಿಷೇಧಿಸಲಾಗಿದೆ ಎಂದ ಅವರು, ನಾವು ರಾಜತಾಂತ್ರಿಕ,ಪ್ರಾದೇಶಿಕ ಅಥವಾ ಮಿಲಿಟರಿ ಸಮಸ್ಯೆಗಳನ್ನು ಹೊಂದಿದ್ದರೂ ಜಾಗತಿಕ ವಾಣಿಜ್ಯ ಸಂಘಟನೆ(ಡಬ್ಲೂಟಿಒ)ಯ ನಿಯಮಗಳಿಂದಾಗಿ ಯಾವುದೇ ರಾಷ್ಟ್ರದಿಂದ ಆಮದನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದರು.
Next Story





