ಪ್ರವಾಸೋದ್ಯಮದಿಂದ 40,411 ಕೋ.ರೂ. ವಿದೇಶಿ ವಿನಿಮಯ ಗಳಿಕೆ:ಸಚಿವ ಶರ್ಮಾ

ಹೊಸದಿಲ್ಲಿ,ಎ.25: ಪ್ರಸಕ್ತ ಸಾಲಿನ ಮೊದಲ ಮೂರು ತಿಂಗಳುಗಳಲ್ಲಿ ಪ್ರವಾಸೋದ್ಯಮದ ಮೂಲಕ 40,411 ಕೋ.ರೂ.ವಿದೇಶಿ ವಿನಿಮಯವನ್ನು ಗಳಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ ಶರ್ಮಾ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.
ಪ್ರವಾಸೋದ್ಯಮದ ಮೂಲಕ ಭಾರತವು 2015ರಲ್ಲಿ 1,35,193 ಕೋ.ರೂ. ಮತ್ತು 2014ರಲ್ಲಿ 1,23,320 ಕೋ.ರೂ.ಗಳ ವಿದೇಶಿ ವಿನಿಮಯ ಗಳಿಸಿತ್ತು ಎಂದ ಅವರು, 2012,2013 ಮತ್ತು 2014ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗಳ ಸಂಖ್ಯೆ ಅನುಕ್ರಮವಾಗಿ 1.82 ಕೋ,1.99 ಕೋ. ಮತ್ತು 2.25 ಕೋ.ಆಗಿತ್ತು ಎಂದರು.
2014ರಲ್ಲಿ 46.57 ಲಕ್ಷದಷ್ಟು ಗರಿಷ್ಠ ಸಂಖ್ಯೆಯ ಪ್ರವಾಸಿಗಳು ತಮಿಳುನಾಡಿಗೆ ಭೇಟಿ ನೀಡಿದ್ದು,ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ(43.89 ಲ) ಮತ್ತು ಉತ್ತರ ಪ್ರದೇಶ(29.09ಲ) ಇವೆ ಎಂದು ಅವರು ತಿಳಿಸಿದರು.
Next Story





