ಶಿವಮೊಗ್ಗ ನಗರದಲ್ಲಿ ಸದ್ದುಲ್ಲದೆ ಕಣ್ಮರೆಯಾಗುತ್ತಿರುವ ಕೆರೆಗಳು
ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು

<ಬಿ. ರೇಣುಕೇಶ್
ಶಿವಮೊಗ್ಗ, ಎ. 25: ಶಿವಮೊಗ್ಗ ನಗರದಲ್ಲಿ ಸದ್ದುಗದ್ದಲವಿಲ್ಲದೆ ಸಾಲುಸಾಲು ಕೆರೆಗಳು ಕಣ್ಮರೆಯಾಗುತ್ತಿವೆ. ಕೆರೆ ಜಾಗದಲ್ಲಿ ಬಡಾವಣೆ, ದೊಡ್ಡ ದೊಡ್ಡ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು ಸೇರಿದಂತೆ ಸರಕಾರಿ ಕಟ್ಟಡಗಳು ಕೂಡ ನಿರ್ಮಾಣವಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕೆರೆ ಒತ್ತುವರಿ ಪ್ರಕ್ರಿಯೆ ಜೋರಾಗಿದ್ದು ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದೆ.
ಮತ್ತೊಂದೆಡೆ ಕೆರೆ ಸಂರಕ್ಷಣೆಯ ಗುರುತರ ಜವಾಬ್ದಾರಿ ಹೊತ್ತಿರುವ ಸ್ಥಳೀಯಾಡಳಿತವು ಕೆರೆ ಒತ್ತುವರಿ ತೆರವು ಹಾಗೂ ಸಂರಕ್ಷಣೆಗೆ ಯಾವುದೇ ಕಠಿಣ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ. ತನಗೂ ಇದಕ್ಕು ಸಂಬಂಧವೇ ಇಲ್ಲದಂತೆ ಸಂಬಂಧಿಸಿದ ಇಲಾಖೆಗಳು ವರ್ತಿಸುತ್ತಿವೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ನಗರದಲ್ಲಿ ಕೆರೆಗಳೇ ಇಲ್ಲದಂತಹ ಸ್ಥಿತಿ ಉದ್ಭವವಾದರೂ ಅಚ್ಚರಿಯಿಲ್ಲವಾಗಿದೆ ಎಂದು ಪರಿಸರ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. *ಅಸಮರ್ಪಕ ಮಾಹಿತಿ: ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸಂರಕ್ಷಣೆಗೆ ಹೋರಾಟ ನಡೆಸುತ್ತಿರುವ ಹಾಗೂ ಅಣ್ಣಾ ಹಝಾರೆ ಹೋರಾಟ ವೇದಿಕೆಯ ಮುಖಂಡ ಅಜಯ್‌ಕುಮಾರ್‌ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ಅನುಸರಿಸುತ್ತಿರುವ ನಿ
ೀತಿಗೆ ತೀವ್ರ ಅಸಮಾಧಾನ ವ್ಯಕ್ತಪ ಡಿಸುತ್ತಾರೆ. ಕೆರೆ ಸಂರಕ್ಷಣೆಗೆ ಯಾವುದೇ ಕನಿಷ್ಠ ಕ್ರಮಗಳನ್ನು ಕೈಗೊಂಡಿಲ್ಲ. ಇದುನಿಜಕ್ಕೂದುರಂತದ ಸಂಗತಿಯಾಗಿದೆ’ ಎಂದು ದೂರಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇದಿಕೆಯ ವತಿ ಯಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಬಗ್ಗೆ ಮಾಹಿತಿ ಕೇಳಲಾಗಿತ್ತು. ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ 109 ಕೆರೆಗಳಿರಬೇಕಾಗಿತ್ತು. 77 ಕೆರೆಗಳಿವೆ. ಉಳಿದ 32 ಕೆರೆಗಳನ್ನು ವಿವಿಧ ಕಾರಣಗಳಿಗಾಗಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ಕೊಡಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಕಡತದಲ್ಲಿರುವ ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವಾಂಶವೆನೆಂದರೆ 77 ಕೆರೆಗಳಲ್ಲಿ ಪ್ರಸ್ತುತ ಉಳಿದುಕೊಂಡಿರುವುದು ಸುಮಾರು 20 ರಿಂದ 25 ಕೆರೆಗಳು ಮಾತ್ರವಾಗಿವೆ. ಉಳಿದ ಕೆರೆಗಳ ಬಡಾವಣೆಗಳಾಗಿ, ಕಟ್ಟಡಗಳಾಗಿ, ನಿವೇಶನಗಳಾಗಿ ಪರಿವರ್ತಿತವಾಗಿವೆ. ಆಡಳಿತ
್ಯವಸ್ಥೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಈಗಿರುವ ಕೆರೆಗಳು ಕಣ್ಮರೆಯಾಗಿ ಹೋಗಲಿವೆ ಎಂದು ಅಜಯಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ ಗಾಡಿಕೊಪ್ಪದಲ್ಲಿ ಐದು ಕೆರೆಗಳಿವೆ ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ಒಂದೂ ಕೆರೆಯೂ ಅಲ್ಲಿ ಕಾಣ ಸಿಗುವುದಿಲ್ಲ. ಅಲ್ಲಿರುವ ಕೆರೆಯೊಂದನ್ನು ಜಿಲ್ಲಾಡಳಿತವೇ ಖಾಸಗಿ ಸಿಟಿ ಕ್ಲಬ್‌ಗೆ ಲೀಸ್ ಆಧಾರದ ಮೇಲೆ ಕೊಟ್ಟಿದೆ. ಮತ್ತೊಂದು ಕೆರೆಯಲ್ಲಿ ಸರಕಾರಿ ಸಂಸ್ಥೆಯ ಕಟ್ಟಡಗಳು ನಿರ್ಮಾಣವಾಗಿವೆ. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. *ಒತ್ತುವರಿ ಅವ್ಯಾಹತ: ಪ್ರಸ್ತುತ ಉಳಿದುಕೊಂಡಿರುವ ಸೀಮಿತ ಸಂಖ್ಯೆಯ ಕೆರೆಗಳೂ ಒತ್ತುವರಿಯಾಗುತ್ತಿವೆ. ಈ ಕೆರೆಗಳನ್ನಾದರೂ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈ ಕೆರೆಗಳನ್ನೂ ಕಳೆದುಕೊಂಡರೆ ನಾಗರಿಕರು ತಮ್ಮದಲ್ಲದ ತಪ್ಪಿಗೆ ನಾನಾ ರೀತಿಯ ಪ್ರಾಕೃತಿಕ ಏರುಪೇರುಗಳನ್ನೆದುರಿಸಬೇಕಾಗುತ್ತದೆ ಎಂದು ಅಜಯ್‌ಕುಮಾರ್ ಸಲಹೆ ನೀಡುತ್ತಾರೆ. ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಸಾಲು ಸಾಲು ಕೆರೆಗಳು ಕಣ್ಮರೆಯಾಗುತ್ತಿವೆ. ಮತ್ತೊಂದೆಡೆ ಆಡಳಿತ ವ್ಯವಸ್ಥೆ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲವಾಗಿದೆ. ಇನ್ನಾದರೂ ಜಿಲ್ಲಾಡಳಿತ ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸಂರಕ್ಷಣೆಗೆ ಗಮನಹರಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ. ಉಳಿದಿರುವುದು ಅತ್ಯಲ್ಪ ಕೆರೆಗಳು ಮಾತ್ರ: ಶಿವಮೊಗ್ಗ ನಗರದಲ್ಲಿ 77 ಕೆರೆಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡುತ್ತದೆ. ಆದರೆ ವಾಸ್ತವವಾಗಿ ಅಷ್ಟೊಂದು ಕೆರೆಗಳೇ ಇಲ್ಲವಾಗಿದೆ. ಜಿಲ್ಲಾಡಳಿತ ನೀಡುವ ಮಾಹಿತಿಯನುಸಾರ ಹಲವೆಡೆ ಕೆರೆ ಹುಡುಕಿಕೊಂಡು ಹೋದರೆ, ಕೆರೆ ಜಾಗದಲ್ಲಿ ದೊಡ್ಡ ದೊಡ್ಡ ಬಡಾವಣೆ - ಕಟ್ಟಡಗಳು ನಿರ್ಮಾಣವಾಗಿರುವುದು ಕಂಡುಬರುತ್ತದೆ.
ಅಧಿಕಾರಿಗಳು ಬರೀ ಕಡತದಲ್ಲಿರುವ ಮಾಹಿತಿ ಕೊಡುತ್ತಾರೆ. ಆದರೆ ಕೆರೆಗಳ ವಾಸ್ತವ ಸ್ಥಿತಿಗತಿ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಪ್ರಸ್ತುತ ನಗರದಲ್ಲಿ 20 ರಿಂದ 25 ಕೆರೆಗಳು ಮಾತ್ರ ಇದೆ. ಇದರಲ್ಲಿ ಹಲವು ಕೆರೆಗಳು ಒತ್ತುವರಿಯಗಿವೆ.
<
ಅಜಯ್‌ಕುಮಾರ್, ಹೋರಾಟಗಾರ







