ರಿಯಾದ್ ಮೆಹ್ರಾಝ್‌ಗೆ ವರ್ಷದ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಪ್ರಶಸ್ತಿ

ಲಂಡನ್, ಎ.25: ಲೆಸೆಸ್ಟರ್ ಸಿಟಿಯ ವಿಂಗರ್ ರಿಯಾದ್ ಮೆಹ್ರಾಝ್ ವರ್ಷದ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ಆಯ್ಕೆಯಾದ ಆಫ್ರಿಕದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
25ರ ಹರೆಯದ ಫ್ರೆಂಚ್ ಸಂಜಾತ, ಅಲ್ಜ್ಜೀರಿಯಾದ ಅಂತಾರಾಷ್ಟ್ರೀಯ ಆಟಗಾರ ಮೆಹ್ರಾಝ್ ಪ್ರೀಮಿಯರ್ ಲೀಗ್‌ನಲ್ಲಿ ಲೆಸೆಸ್ಟರ್ ಶೈರ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಸಮಾರಂಭದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘‘ನನ್ನ ಮ್ಯಾನೇಜರ್ ಹಾಗೂ ಸಿಬ್ಬಂದಿ ವರ್ಗಕ್ಕೆ ಪ್ರಶಸ್ತಿಯ ಶ್ರೇಯಸ್ಸನ್ನು ಸಮರ್ಪಿಸುವೆ. ಅವರಿಲ್ಲದಿದ್ದರೆ ನಾನು ಈ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಇದೊಂದು ಟೀಮ್ ಸ್ಪಿರಿಟ್. ನಾನು ಈ ಪ್ರಶಸ್ತಿಯನ್ನು ತನ್ನ ತಂಡಕ್ಕೆ ಅರ್ಪಿಸುವೆ’’ ಎಂದು ಮೆಹ್ರಾಝ್ ಹೇಳಿದ್ದಾರೆ. ಮೆಹ್ರಾಝ್ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಆಫ್ರಿಕದ ಮೊದಲ ಆಟಗಾರ. ಎರಡನೆ ಯುರೋಪೇತರ ಆಟಗಾರ.
ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸುಯರೆಝ್ 2014ರಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಆಗ ಅವರು ಲಿವರ್‌ಪೂಲ್ ತಂಡವನ್ನು ಪ್ರತಿನಿಧಿಸುತ್ತಿದ್ದರು





