ಬಾರ್ಸಿಲೋನ ಓಪನ್: ನಡಾಲ್ ಚಾಂಪಿಯನ್

ಬಾರ್ಸಿಲೋನ, ಎ.25: ಜಪಾನ್‌ನ ಕೀ ನಿಶಿಕೊರಿ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ರಫೆಲ್ ನಡಾಲ್ ಬಾರ್ಸಿಲೋನ ಓಪನ್ ಪ್ರಶಸ್ತಿಯನ್ನು ಜಯಿಸುವ ಮೂಲಕ ತನ್ನ ಭರ್ಜರಿ ಫಾರ್ಮ್‌ನ್ನು ಕಾಯ್ದುಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನಡಾಲ್ ಅವರು ನಿಶಿಕೊರಿ ಅವರನ್ನು 6-4, 7-5 ಸೆಟ್‌ಗಳ ಅಂತರದಿಂದ ಮಣಿಸಿ ಆವೆ ಮಣ್ಣಿನ ಅಂಗಳದಲ್ಲಿ 49 ಪ್ರಶಸ್ತಿಗಳನ್ನು ಜಯಿಸಿದ್ದ ಅರ್ಜೆಂಟೀನದ ದಂತಕತೆ ಗುಲೆರ್ಮೊ ವಿಲಾಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕಳೆದ ವಾರ ಮಾಂಟೆ ಕಾರ್ಲೊ ಓಪನ್ ಕಿರೀಟವನ್ನು ಧರಿಸಿದ್ದ 29ರ ಹರೆಯದ ನಡಾಲ್ ತನ್ನ ಫೇವರಿಟ್ ಟೆನಿಸ್ ಅಂಗಳದಲ್ಲಿ ನಿಶಿಕೊರಿ ಅವರನ್ನು ಸುಲಭವಾಗಿ ಮಣಿಸಿದರು. ಸತತ ಎರಡು ವರ್ಷಗಳಿಂದ ಪ್ರಶಸ್ತಿ ಗೆದ್ದುಕೊಂಡಿರುವ ನಿಶಿಕೊರಿಗೆ ನಡಾಲ್ ಶಾಕ್ ನೀಡಿದರು.
2013ರ ನಂತರ ಸತತ ಪ್ರಶಸ್ತಿಯನ್ನು ಜಯಿಸಿರುವ ನಡಾಲ್ ಮುಂದಿನ ತಿಂಗಳು ಫ್ರಾನ್ಸ್‌ನಲ್ಲಿ 10ನೆ ರೊಲ್ಯಾಂಡ್ ಗ್ಯಾರೊಸ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
Next Story





