Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ25 April 2016 11:26 PM IST
share

ಪೊಲೀಸ್ ಆಯುಕ್ತರ ಘಟಕದಲ್ಲಿ ದೂರು ಪ್ರಾಧಿಕಾರ ರಚನೆ
ಮಂಗಳೂರು, ಎ.25: ಮಂಗಳೂರು ಪೊಲೀಸ್ ಆಯುಕ್ತರ ಘಟಕದಲ್ಲಿ ಕರ್ನಾಟಕ ಪೋಲಿಸ್ ಕಾಯ್ದೆ ತಿದ್ದುಪಡಿ 2012ರ ಪ್ರಕಾರ ದೂರು ಪ್ರಾಧಿಕಾರವನ್ನು ರಚಿಸಲಾಗಿದೆ.
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಎ.ಎಂ.ಕುಂಜಪ್ಪ, ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಹೈವ್ಯೆ, ವಿನೋಬ ರಸ್ತೆ, ಮೈಸೂರು. ದೂ.ಸಂ. 0821-2516300, ಟೋಲ್ ಫ್ರೀ ಸಂಖ್ಯೆ 1800-425-1078. ಸದಸ್ಯ ಕಾರ್ಯ ದರ್ಶಿಗಳು ಎಂ. ಚಂದ್ರಶೇಖರ್, ಪೊಲೀಸ್ ಆಯುಕ್ತರು, ಮಂಗಳೂರು ನಗರ, ಎ.ಬಿ.ಶೆಟ್ಟಿ ವೃತ್ತ, ಮಂಗಳೂರು. ದೂರವಾಣಿ. 0824 - 2220801. ಪ್ರಾಧಿಕಾರದ ಸಹ ಸದಸ್ಯರು, ಡಾ.ಎಸ್‌ಡಿ ಶರಣಪ್ಪ, ಪೊಲೀಸ್ ಅಧೀಕ್ಷಕರು, ಮಂಗಳೂರು. ದ.ಕ.ಜಿಲ್ಲೆ. ಪುಟ್ಟ ಮಾದಯ್ಯ, ನಿವೃತ್ತ ಕೆಎಎಸ್ ಅಧಿಕಾರಿ ಮೈಸೂರು. ದೂರ ವಾಣಿ. 0821 -2414086, 9481674999, ಅಬ್ರಹಾಂ ವರ್ಗಿಸ್, ನೆಲ್ಯಾಡಿ, ಪುತ್ತೂರು, ಮೊಸಂ. 9448437798. ಸಾರ್ವಜನಿಕರು ತಮ್ಮ ದೂರುಗಳನ್ನು ಇವರಿಗೆ ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಕಲಾವಿದರಿಗೆ ಸನ್ಮಾನ
ಮುಲ್ಕಿ, ಎ.25: ಯಕ್ಷಗಾನ ಲೋಕದ ಹಾಸ್ಯಕಲಾವಿದ ಸೀತಾರಾಮ ಕುಮಾರ್‌ರ ಷಷ್ಟಿ ಸಂಭ್ರಮದ ಪ್ರಯುಕ್ತ ಯಕ್ಷಗಾನಕ್ಕಾಗಿ ಜೀವನ ಮುಡಿಪಾಗಿಟ್ಟಿರುವ 60 ಮಂದಿ ಸಾಧಕರು, ಪೋಷಕರು ಹಾಗೂ ಕಲಾವಿದರನ್ನು ಎ.30 ಮತ್ತು ಮೇ.1 ರಂದು ಹಳೆಯಂಗಡಿ ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಶಾರದ್ವತ ಯಜ್ಞಾಂಗಣದಲ್ಲಿ ಸನ್ಮಾನಿಸಲಾಗುವುದು ಎಂದು ಹರಿಕೃಷ್ಣ ಪುನರೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್. ನಿತ್ಯಾನಂದ, ಡಾ.ಯಾಜಿ ಎಚ್. ನಿರಂಜನ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದು, ವೇ.ಮೂ. ಕೆ. ಲಕ್ಷ್ಮಿನಾರಾಯಣ ಆಸ್ರಣ್ಣ ಕಟೀಲು ಆಶೀರ್ವಚನ ಗೈಯಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಇಂದಿನಿಂದ ಅರಸ್ತಾನ ದರ್ಗಾ 41ನೆ ವಾರ್ಷಿಕ ಉರೂಸ್
ಮಂಗಳೂರು, ಎ.25: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿ ಮತ್ತು ಅಲ್ ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ 41ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಈ ರಾತೀಬ್ ಮತ್ತು ಧಾರ್ಮಿಕ ಉಪನ್ಯಾಸ, ಬುರ್ದಾ ಮಜ್ಲಿಸ್, ಅರಸ್ತಾನ ದರ್ಗಾ ಉರೂಸ್ ಕಾರ್ಯಕ್ರಮವು ಎ.26ರಿಂದ ಮೇ 1ರವರೆಗೆ ನಡೆಯಲಿದೆ.
ಎ.26ರಂದು ಕೆ.ಪಿ.ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್‌ರ ದುಆದೊಂದಿಗೆ ಖತೀಬ್ ಎಂ.ಎಸ್.ಮುಹಮ್ಮದ್ ರಿಯಾಝ್ ಫೈಝಿ ಕಾರ್ಯಕ್ರಮ ಉದ್ಘಾ ಟಿಸಲಿದ್ದಾರೆ. ಎ.27ರಂದು ಬುರ್ದಾ ಮಜ್ಲಿಸ್, ಎ.28ರಂದು ಕೂಟು ಝಿಯಾರತ್ ನಡೆಯಲಿದೆ. ಮುಹಮ್ಮದ್ ಸ್ವಾದಿಖ್ ಸಖಾಫಿ ಕರಂಬಿಲ್ ಮತ ಪ್ರವಚನ ನೀಡಲಿದ್ದಾರೆ. ಎ.29ರಂದು ಅಬ್ದುಲ್ ಕರೀಂ ಫೈಝಿ ಕುಂತೂರು, ಎ.30 ರಂದು ಅಬೂಬಕರ್ ಸಿದ್ದೀಕ್ ಅಲ್-ಜಲಾಲಿಯ್ಯ ಕೂರ್ನಡ್ಕ ಮತಪ್ರವಚನ ನೀಡಲಿದ್ದಾರೆ. ಮೇ1ರಂದು ಮಸೀದಿ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಸೈಯದ್ ಶಫೀಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುಆ ಮಾಡಲಿದ್ದಾರೆ. ಅಲ್‌ಹಾಜ್ ಎನ್.ಎಚ್.ಆದಂ ಫೈಝಿ ಮತಪ್ರವಚನ ನೀಡಲಿದ್ದಾರೆ. ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿ ಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಐವರ್ನಾಡು ಸರಕಾರಿ ಶಾಲೆಯ ಶತಮಾನೋತ್ಸವ
ಸುಳ್ಯ, ಎ.25: ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಮೇ 7ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಮಡ್ತಿಲ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ನೂತನ ತರಗತಿ ಕೊಠಡಿಗಳನ್ನು ಹಾಗೂ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗ ಮಂದಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನೆಗೈದ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳನ್ನು ಗೌರವಿಸಲಾಗುತ್ತದೆ. ಬಳಿಕ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.


ಬಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ
ಉಳ್ಳಾಲ, ಎ.25: ಕುತ್ತಾರು ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿಯ 31ನೆ ವರ್ಷದ ನೆನಪಿಗಾಗಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಸಹಯೋಗದಲ್ಲಿ ಕುತ್ತಾರು ಜಂಕ್ಷನ್‌ನಲ್ಲಿ ನಿರ್ಮಿಸಲಾದ ಬಸ್ ಪ್ರಯಾ ಣಿಕರ ತಂಗುದಾಣವನ್ನು ಕಣಚೂರು ಆಸ್ಪತ್ರೆಯ ಅಧ್ಯಕ್ಷ ಹಾಜಿ ಕಣಚೂರು ಮೋನು ಉದ್ಘಾಟಿಸಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೆ. ಕೃಷ್ಣಪ್ಪಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುನ್ನೂರು ಗ್ರಾಪಂ ಅಧ್ಯಕ್ಷೆ ರೂಪಾ ಆರ್.ಶೆಟ್ಟಿ, ಸೋಮೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉದ್ಯಮಿ ಗುಣನಾತ್ ಜಿ. ಬಂಗೇರ, ಮುನ್ನೂರು ಗ್ರಾಪಂ ಸದಸ್ಯರಾದ ಗಣೇಶ್ ಟೈಲರ್, ಭಾಸ್ಕರ್ ಮುಂಡೋಳಿ, ಚಂದ್ರಾವತಿ ಕುತ್ತಾರು, ಸೋಮೇಶ್ವರ ಗ್ರಾಪಂ ಸದಸ್ಯರಾದ ಬಶೀರ್ ಮುಂಡೋಳಿ, ಶ್ಯಾಮರಾಜ್ ಸಿ.ಎಸ್, ‘ಸೌಹಾರ್ದ ಕಲಾವಿದೆರ್’ನ ಸಂಚಾಲಕ ಜೀವನ್ ರಾಜ್ ಕುತ್ತಾರ್, ಶ್ರೀಧರ್ ಸಾಲ್ಯಾನ್ ಉಪಸ್ಥಿತರಿದ್ದರು. ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿಯ ಅಧ್ಯಕ್ಷ ಚಂದ್ರಹಾಸ್ ಬಿ. ಪ್ರಾಸ್ತಾವಿ ಸಿದರು. ಮಿಥುನ್‌ರಾಜ್ ಕುತ್ತಾರ್ ಸ್ವಾಗತಿಸಿದರು. 

ಕುಂಪಲ: ಪದಾಧಿಕಾರಿಗಳ ಆಯ್ಕೆ
ಉಳ್ಳಾಲ, ಎ.25: ಕುಂಪಲ ಕೇಸರಿ ಮಿತೃ ವೃಂದದ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಸೈಟ್, ಹರೀಶ್ಚಂದ್ರ ಕುಜುಮಗದ್ದೆ, ಕಾರ್ಯ ದರ್ಶಿಯಾಗಿ ಸಂದೀಪ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸೈಟ್, ಶಶಿಧರ್, ಕೋಶಾಧಿಕಾರಿಯಾಗಿ ವಿನ್ಯಾಸ್ ಪಿ ಬೋಳಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್, ಗೌತಮ್, ಕ್ರೀಡಾ ನಾಯಕನಾಗಿ ಜ್ಞಾನೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಗಿ ನಿತಿನ್ ಜಿ, ನಿತಿ್ ಎನ್., ಸಂಘಟನಾ ಕಾರ್ಯದರ್ಶಿಯಾಗಿ ಸುಮೇಶ್ ಕುಂಪಲ ಆಯ್ಕೆಯಾದರು.


ಕಂಡತ್‌ಪಳ್ಳಿ: ಬುರ್ದಾ ಮಜ್ಲಿಸ್
ಮಂಗಳೂರು, ಎ.25: ಇಸ್ಲಾಮಿಕ್ ದಅ್ವಾ ಸೆಂಟರ್ ಕಂಡತ್‌ಪಳ್ಳಿ ಇದರ ನೂತನ ಸಮಿತಿಯ ಉದ್ಘಾಟನಾ ಸಮಾರಂಭವು ಕಂಡತ್‌ಪಳ್ಳಿ ಜುಮಾ ಮಸೀದಿ ವಠಾರ ದಲ್ಲಿ ಇತ್ತೀಚೆಗೆ ನಡೆಯಿತು. ಮಾಜಿ ಮೇಯರ್ ಕೆ.ಅಶ್ರಫ್ ಅಧ್ಯಕ್ಷತೆಯಲ್ಲಿ ಪಿ.ಎ. ಮುಹಮ್ಮದ್ ರಫಿಕ್ ಮದನಿ ಉದ್ಘಾಟಿಸಿದರು.ಎಸ್ ಎಂ ಆರ್ ರಶೀದ್ ಹಾಜಿ, ಶಂಸುದ್ದೀನ್ ಎಚ್‌ಬಿಟಿ., ಲತೀಫ್ ಕಂದಕ್ ಅತಿಥಿಗಳಾಗಿ ಭಾಗವಹಿಸಿದ್ದರು.


ವೈಜ್ಞಾನಿಕ ಮನೋವೃತ್ತಿ ಸಂಚಾಲಕರ ಸಬಲೀಕರಣ ಶಿಬಿರ
 ಮಂಗಳೂರು, ಎ.25: ಕರ್ನಾಟಕ ವೈಜ್ಞ್ಞಾನಿಕ ಮನೋವೃತ್ತಿ ಆಂದೋಲನವು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋವೃತ್ತಿ ಯನ್ನು ಬೆಳೆಸುವ ಕಾರ್ಯಕ್ರಮದ ಮೊದಲ ಹಂತವಾಗಿ ವೈಜ್ಞಾನಿಕ ಮನೋವೃತ್ತಿ ಸಂಚಾಲಕರನ್ನು ಸಜ್ಜುಗೊಳಿಸುವ ಎರಡು ದಿನಗಳ ಅವಧಿಯ ಸಂಚಾಲಕರ ಸಬಲೀಕರಣ ಶಿಬಿರ ಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.
ಮಂಗಳೂರು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಹಭಾಗಿತ್ವದಲ್ಲಿ ಮೇ 14,15ರಂದು ಬಿಜೈಯಲ್ಲಿರುವ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ಶಿಬಿರ ಏರ್ಪಡಿಸಲಾಗಿದೆ. ಶಿಬಿರಾರ್ಥಿಗಳ ಸಂಖ್ಯೆಯನ್ನು 25ಕ್ಕೆ ಸೀಮಿತಗೊಳಿಸಲಾಗಿದೆ. ಯಶಸ್ವಿಯಾಗಿ ತರಬೇತಿ ಪಡೆದವರಿಗೆ ಮಾತ್ರ ತರಬೇತಿ ಸಾಮಗ್ರಿ ಮತ್ತು ಪ್ರಮಾಣಪತ್ರವನ್ನು ಕೊಡ ಲಾಗುವುದು ಎಂದು ಆಂದೋಲನದ ಕಾರ್ಯದರ್ಶಿ ಎಂ. ಅಬ್ದುರ್ರಹ್ಮಾನ್ ಪಾಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 ಸಂಚಾಲಕ ತರಬೇತಿ ಪಡೆಯಲು ಆಸಕ್ತರಿದ್ದವರು ತಮ್ಮ ಹೆಸರು, ವಯಸ್ಸು, ವಿಳಾಸ, ಉದ್ಯೋಗ, ಮೊಬೈಲ್ ಸಂಖ್ಯೆ, ಸಂಬಂಧ ಹೊಂದಿರುವ ಸಂಘಟನೆ ಇತ್ಯಾದಿ ವಿವರಗಳೊಂದಿಗೆ ಅರ್ಜಿಯನ್ನು ವಾಸುದೇವ ಉಚ್ಚಿಲ, ಸಮುದಾಯ ವಲಯ ಸಂಚಾಲಕರು, ವಿಕಾಸ, ಹ್ಯಾಮಿಲ್ಟನ್ ಕಟ್ಟಡ, ಸ್ಟೇಟ್ ಬ್ಯಾಂಕ್ ಬಳಿ, ಮಂಗಳೂರು - 1, ಮೊ.ಸಂ: 9632095219ಕ್ಕೆ ಮೇ 7ರ ಒಳಗಾಗಿ ತಲುಪುವಂತೆ ಕಳುಹಿಸಲು ಸೂಚಿಸಿದ್ದಾರೆ.

ಗಮಕ ಕಲಾ ಪರಿಷತ್ ಉಡುಪಿ ಘಟಕ ಉದ್ಘಾಟನೆ
ಉಡುಪಿ, ಎ.25: ಕರ್ನಾಟಕ ಗಮಕ ಕಲಾ ಪರಿಷತ್ತಿನ ಉಡುಪಿ ತಾಲೂಕು ಘಟಕದ ಉದ್ಘಾಟನಾ ಸಮಾರಂಭವು ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿತು.
ಘಟಕವನ್ನು ನಿವೃತ್ತ ಶಿಕ್ಷಕ ಯು.ಆರ್. ಮಧ್ಯಸ್ಥ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದೇವಳದ ಆಡಳಿತ ಮೊಕ್ತೇಸರ ರಮೇಶ್ ಶೆಟ್ಟಿ, ಮಧುರ ಧ್ವನಿ ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಗಮಕ ವಾಚನವನ್ನು ಆಕಾಶವಾಣಿ ಕಲಾವಿದೆ ಉಷಾ ಎಚ್.ಮಣಿಪಾಲ , ಹಾಗೂ ವ್ಯಾಖ್ಯಾನವನ್ನು ಡಾ.ಗಣಪತಿ ಜೋಯಿಸ್ ನಡೆಸಿದರು. ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಉಪ್ಪಂಗಳ ರಾಮಭಟ್ ಸ್ವಾಗತಿ ಸಿದರು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X