ಹೆಜಮಾಡಿ: ಅಂತಾರಾಜ್ಯ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ

ಪಡುಬಿದ್ರೆ, ಎ.25: ಹೆಜಮಾಡಿ ಶ್ರೀ ನಾರಾಯಣ ಗುರು ಫುಟ್ಬಾಲ್‌ಕ್ಲಬ್ ಆಶ್ರಯದಲ್ಲಿ ಹೆಜಮಾಡಿ ಬಸ್ತಿಪಡ್ಪುಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ಅಂತಾರಾಜ್ಯ ಪುಟ್ಬಾಲ್ ಪಂದ್ಯಾಟ ‘ಎನ್‌ಜಿಎಫ್‌ಸಿ ಟ್ರೋಫಿ- 2016’ಕ್ಕೆ ಮಾಜಿ ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ಶೀಲಾ ಕೆ. ಶೆಟ್ಟಿ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಯು ಪುತ್ರನ್, ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷ ದಯಾನಂದ್ ಹೆಜಮಾಡಿ, ನಾಗೇಶ್ ಎರ್ಮಾಳ್, ತಾಪಂ ಮಾಜಿ ಸದಸ್ಯ ಸಚಿನ್ ಜಿ. ನಾಯಕ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಜಿನರಾಜ್ ಬಂಗೇರ, ಪಲಿಮಾರು ಸೀತಾರಾಮ ಭಜನಾ ಮಂದಿ ರದ ಅಧ್ಯಕ್ಷ ವಿನೋದ್ ಕೋಟ್ಯಾನ್, ಉದ್ಯಮಿ ಗಳಾದ ಜಾರ್ಜ್ ಅಲ್ಮೇಡಾ, ಕನ್ನಂಗಾರು ಮಿಲಾಫ್ ಅಬ್ದುಲ್ ಹಮೀದ್, ಸಂದೇಶ್ ಶೆಟ್ಟಿ, ಸುರೇಶ್ ಶೆಣೈ, ದೇವಾ ಡಿಗ ಸಂಘದ ಅಧ್ಯಕ್ಷ ವಿನೋದ್ ಕುಮಾರ್, ಕ್ಲಬ್ ಗೌರವಾಧ್ಯಕ್ಷ ರವಿ ಹೆಜಮಾಡಿ, ಅಧ್ಯಕ್ಷ ಪವನ್‌ರಾಜ್, ಕಾರ್ಯದರ್ಶಿ ಮನೋಜ್ ಸುವರ್ಣ, ಕೋಶಾಧಿಕಾರಿ ಕಾರ್ತಿಕ್ ಸಾಲ್ಯಾನ್, ಮ್ಯಾನೇಜರ್ ದಿನೇಶ್ ಹೆಜಮಾಡಿ, ವೇಣುಗೋಪಾಲ್ ಹೆಜಮಾಡಿ ಮುಖ್ಯ ಅತಿಥಿಗಳಾಗಿದ್ದರು.
ಕ್ರೀಡಾ ಸಂಚಾಲಕ ಕೇಶವ ಸಿ. ಸಾಲ್ಯಾನ್ ಸ್ವಾಗತಿಸಿದರು. ಸಹ ಸಂಚಾಲಕ ದಿವಾಕರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ಶರಣ್ ಕುಮಾರ್ ಮಟ್ಟು ವಂದಿಸಿದರು.





