ತ.ನಾ.ಚುನಾವಣೆ; ಡಿಎಂಕೆ ಅಧ್ಯಕ್ಷ ಕರುಣಾನಿಧಿ ನಾಮಪತ್ರ ಸಲ್ಲಿಕೆ
ತಿರುವರೂರು,ಎ.25: ಮೇ.16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿಯವರು ಸೋಮವಾರ ಇಲ್ಲಿ ನಾಮಪತ್ರ ಸಲ್ಲಿಸಿದರು.
ಐದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ(93) ತಿರುವರೂರಿನಿಂದ ಪುನರಾಯ್ಕೆಯನ್ನು ಬಯಸಿದ್ದಾರೆ.
1957ರಲ್ಲಿ ಕುಳಿಥಲೈ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಕರುಣಾನಿಧಿ ಅಲ್ಲಿಂದೀಚೆಗೆ ತಾನು ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲೂ ಜಯಭೇರಿ ಬಾರಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ಅವರು ಇಲ್ಲಿಗೆ ಸಮೀಪದ ಕತ್ತೂರಿಗೆ ತೆರಳಿ ತನ್ನ ತಾಯಿ ಅಂಜುಗದಮ್ಮಾಳ್ ಸ್ಮಾರಕಕ್ಕೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.
Next Story





