ಸಂಸತ್ತಿನಿಂದ ಮಲ್ಯ ಉಚ್ಚಾಟನೆಗೆ ನಿರ್ಧಾರ

ಹೊಸದಿಲ್ಲಿ, ಎ.25: ಸಾಲಬಾಕಿ ಹಾಗೂ ಹಣ ಚೆಲುವೆ ಆರೋಪಗಳನ್ನೆದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯರನ್ನು ಸಂಸತ್ತಿನಿಂದ ಉಚ್ಚಾಟಿಸಲು ರಾಜ್ಯಸಭೆಯ ನೈತಿಕ ಸಮಿತಿಯು ಬಯಸಿದೆ.
ಮಲ್ಯರಿಗೆ ತನ್ನ ನಿಲುವನ್ನು ವಿವರಿಸಲು ಹಾಗೂ ಉತ್ತರಿಸಲು ಒಂದು ವಾರದ ಅವಕಾಶವನ್ನು ಅದು ನೀಡಿದೆ. ಮಲ್ಯರ ಸದಸ್ಯತ್ವ ರದ್ದುಗೊಳಿಸಲು ನಿರ್ಧರಿಸಲಾಗಿದೆ.ಇದಕ್ಕೆ ಎಲ್ಲ ಸದಸ್ಯರು ಸಹಮತ ವ್ಯಕ್ತ ಪಡಿಸಿದ್ದಾರೆಂದು ಸಮಿತಿಯ ಸದಸ್ಯ,ಜೆಡಿಯು ನಾಯಕ ಶರದ್ ಯಾದವ್ ತಿಳಿಸಿದ್ದಾರೆ.
Next Story





