ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಕುಂದಾಪುರ, ಎ.25: ಪಿಟ್ಸ್ ಕಾಯಿ ಲೆಯಿಂದ ಬಳಲುತ್ತಿದ್ದ ಕೋಟೇಶ್ವರ ಗ್ರಾಮದ ಕಲ್ಪತರು ಇಂಡಸ್ಟ್ರಿಯ ಬಳಿಯ ನಿವಾಸಿ ಬೋನಿಪಾಸ ಪಾಸನ್ನಾ (54) ಎಂಬವರು ಎ.22ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಮೇಸ್ತ್ರಿ ಕೆಲಸ ಮಾಡುತ್ತಿದ್ದ ಚೇರ್ಕಾಡಿ ಗ್ರಾಮದ ಪೇತ್ರಿಯ ಕುದ್ಕುಂಜೆ ನಿವಾಸಿ ಗೋವಿಂದ ನಾಯ್ಕ ಎಂಬವರು ಎ.14ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ಯಾಂಟು, ಶರ್ಟ್ ಹಾಗೂ 1,000 ರೂ. ತೆಗೆದುಕೊಂಡು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story