ಎರ್ನಾಕುಳಂ: ಬಾಲಕನ ಇರಿದು ಕೊಲೆ
ಕೊರಳಿನ ಸುತ್ತ 17 ಬಾರಿ ಇರಿತ

ಕೊಚ್ಚಿ, ಎ. 26: ಹತ್ತು ವರ್ಷದ ಬಾಲಕನನ್ನು ಇರಿದು ಕೊಲೆ ಮಾಡಿರುವ ಘಟನೆ ಎರ್ನಾಕುಳಂ ಪುಲ್ಲೇಪ್ಪಡಿಯಲ್ಲಿ ಇಂದು ನಡೆದಿದೆ.
ಪುಲ್ಲೇಪ್ಪಡಿ ನಿವಾಸಿ ರಿಟ್ಸಿ ಕೊಲೆಯಾದ ಬಾಲಕ. ಈತನ ನೆರೆಮನೆಯ ಪೊನ್ನಾಶೇರಿ ಅಜಿ ದೇವಸ್ಯ (40) ಕೊಲೈದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಬಾಲಕ ರಿಟ್ಸಿ ಹಾಲು ತರಲೆಂದು ಅಂಗಡಿಗೆ ಹೋಗಿ ಮರಳುತ್ತಿದ್ದಾಗ ಆರೋಪಿ ಅಜಿ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ರಿಟ್ಸಿಯ ಕೊರಳಿನ ಸುತ್ತ 17 ಬಾರಿ ಇರಿಯಲಾಗಿದೆ. ಅಜಿ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.
Next Story





