ಸಾರ್ವಜನಿಕ ಸ್ಥಳದಲ್ಲಿ ಯುವಕನ ತಾಯಿಯನ್ನು ನಗ್ನ ಮಾಡಿ ಥಳಿತ
ಹುಡುಗಿಯೊಂದಿಗೆ ಯುವಕ ಪರಾರಿ

ಲಕ್ನೊ, ಎ. 26: ಯುವಕ ಹುಡುಗಿಯೊಂದಿಗೆ ಓಡಿ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಗ್ನ ಮಾಡಿ ಥಳಿಸಿದ ಹೇಯ ಘಟನೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಸೋಮವಾರ ನಡೆದಿದೆ.
ಹುಡುಗಿ ಓಡಿ ಹೋದ ಕಾರಣಕ್ಕೆ ರೊಚ್ಚಿಗೆದ್ದ ಆಕೆಯ ಮನೆಯವರು ಯುವಕನ 60 ವರ್ಷ ಪ್ರಾಯದ ತಾಯಿಯ ಮುಖಕ್ಕೆ ಮಸಿ ಬಳಿದು ಗುಪ್ತಾಂಗಗಳಿಗೆ ಮೆಣಸಿನಪುಡಿ ಎರಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದರು. ಘಟನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಯುವಕ ಹುಡುಗಿಯೊಂದಿಗೆ ರವಿವಾರ ಓಡಿ ಹೋಗಿದ್ದ ಎನ್ನಲಾಗಿದೆ. ದೂರಿನ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





