Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವೈದ್ಯರ ಸಲಹೆಯಿಲ್ಲದ ಮೆಡಿಕಲ್‌ನಲ್ಲಿ...

ವೈದ್ಯರ ಸಲಹೆಯಿಲ್ಲದ ಮೆಡಿಕಲ್‌ನಲ್ಲಿ ತೆಗೆದುಕೊಳ್ಳುವ ಮದ್ದು ನಿಮ್ಮ ಮೆದುಳಿಗೆ ಮಾರಕ !

ವಾರ್ತಾಭಾರತಿವಾರ್ತಾಭಾರತಿ26 April 2016 12:13 PM IST
share
ವೈದ್ಯರ ಸಲಹೆಯಿಲ್ಲದ ಮೆಡಿಕಲ್‌ನಲ್ಲಿ ತೆಗೆದುಕೊಳ್ಳುವ ಮದ್ದು ನಿಮ್ಮ ಮೆದುಳಿಗೆ ಮಾರಕ !

ಅಲರ್ಜಿಗಳಿಂದ ಇನ್ಸೋಮ್ನಿಯವರೆಗೆ ನಮ್ಮ ಎಲ್ಲಾ ಸಮಸ್ಯೆಗಳಿಗೂ ಔಷಧಿಗಳು ಸಿಗುತ್ತವೆ. ಸಮಸ್ಯೆ ಎಂದರೆ ಅವುಗಳಲ್ಲಿ ಏನಾದರೂ ಒಂದು ಅಡ್ಡಪರಿಣಾಮಗಳು ಇರುವುದು. ನಮ್ಮ ರೋಗಗಳನ್ನು ಆದಷ್ಟು ಬೇಗನೇ ನಿವಾರಿಸಿಕೊಳ್ಳಲು ಆ ಎಚ್ಚರಿಕೆಯನ್ನು ನಾವು ಸಾಮಾನ್ಯವಾಗಿ ಗಣಿಸುವುದೇ ಇಲ್ಲ. ಹೊಸ ಅಧ್ಯಯನವೊಂದು ದಶಕಗಳಿಂದ ವಿಜ್ಞಾನಿಗಳಿಗೆ ಗೊತ್ತಿರುವ ವಿಷಯಕ್ಕೆ ಖಚಿತ ಪುರಾವೆ ಒದಗಿಸಿದೆ. ಆಂಟಿಕೊಲಿನರ್ಜಿಕ್ ಔಷಧಿಗಳಿಂದ ನಡವಳಿಕೆಯ ನ್ಯೂನತೆ ಮತ್ತು ಮರೆವು ರೋಗದ ಸಮಸ್ಯೆ ಹೆಚ್ಚಾಗಲಿದೆ. ಈರೀತಿಯ ಔಷಧಿಯ ಬಗ್ಗೆ ನೀವು ತಿಳಿದಿರದೆ ಇರಬಹುದು. ಆದರೆ ಕೆಲವು ಚಿಕಿತ್ಸೆಯನ್ನು ಸ್ವತಃ ಪಡೆದುಕೊಂಡಿರಬಹುದು. ಬೆನಡ್ರಿಲ್, ಡೆಮರಲ್, ಡೈಮೆಟಪ್, ಡ್ರಾಮಮೈನ್, ಪ್ಯಾಕ್ಸಿಲ್, ಯುನಿಸಮ್ ಮತ್ತು ವೆಸಿಕೇರ್ ಮೊದಲಾದ ಔಷಧಿಗಳನ್ನು ಸ್ವತಃ ತೆಗೆದುಕೊಳ್ಳುವ ಹಲವರು ನಮ್ಮ ನಡುವೆ ಇದ್ದಾರೆ. ಇವೆಲ್ಲವನ್ನೂ ವೈದ್ಯರ ಸೂಚನೆ ಇಲ್ಲದೆಯೇ ಔಷಧಾಲಯಗಳಲ್ಲಿ ಮಾರಲಾಗುತ್ತದೆ. ಬಿಪಿ, ಹೃದಯ ರೋಗ ಮತ್ತು ಮಾರಕ ಪಲ್ಮನರಿ ರೋಗಗಳಿಗೆ ಕೂಡ ಇವನ್ನು ಕೊಡಲಾಗುತ್ತದೆ. ಹೊಸ ಅಧ್ಯಯನವು ಕೊಗ್ನಿಟಿವ್ ಕುಸಿತಕ್ಕೆ ವೇಗವರ್ಧಕವಾಗಿ ಇರುವ ದೈಹಿಕ ಬದಲಾವಣೆಗಳನ್ನು ಪರೀಕ್ಷಿಸಿದೆ. ಮೆದುಳು ಇಮೇಜಿಂಗ್ ತಂತ್ರಗಳ ಮೂಲಕ ಇಂಡಿಯಾನ ವಿಶ್ವವಿದ್ಯಾನಿಲಯದ ವೈದ್ಯಕೀಯ ಶಾಲೆ ಕಂಡುಕೊಂಡಿರುವಂತೆ ಆಂಟಿ ಕೊಲಿನರ್ಜಿಕ್ ಔಷಧಿ ಪಡೆದುಕೊಂಡರವಲ್ಲಿ ಚಯಾಪಚಯ ಕಡಿಮೆ ಮತ್ತು ಮೆದುಳಿನ ಗಾತ್ರಗಳು ಕಡಿಮೆಯಾಗಿರುವುದು ಪತ್ತೆಯಾಗಿದೆ. ಅಧ್ಯಯನವು ಸುಮಾರು 73 ಸರಾಸರಿ ವಯಸ್ಸಿನ 451 ಮಂದಿಯನ್ನು ಪರೀಕ್ಷಿಸಿದೆ. ಅವರಲ್ಲಿ 60 ಮಂದಿ ಕನಿಷ್ಠ ಒಂದು ವೈದ್ಯಕೀಯ ಚಿಕಿತ್ಸೆಯನ್ನು ಮಧ್ಯಮ ಅಥವಾ ಅಧಿಕ ಆಂಟಿ ಕೊಲಿನರ್ಜಿಕ್ ಇರುವ ಔಷಧಿಗಳಲ್ಲಿ ಪಡೆದುಕೊಳ್ಳುತ್ತಿದ್ದರು. ಅವರ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅಧ್ಯಯನ ಮಾಡಲು ಮೆದುಳು ಮತ್ತು ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಯಿತು. ಮುಖ್ಯವಾಗಿ ಅವರು ಮೌಖಿಕವಾಗಿ ಕಾರಣಗಳನ್ನು ಕೊಡುವ ರೀತಿ, ಯೋಜನೆ ರೂಪಿಸುವುದು ಮತ್ತು ಸಮಸ್ಯೆ ಪರಿಹರಿಸುವ ರೀತಿಯನ್ನು ಕೂಡ ಪರಿಗಣಿಸಲಾಗಿದೆ. ಆಂಟಿ ಕೊಲಿನರ್ಜಿಕ್ ಔಷಧಿ ಬಳಕೆದಾರರಲ್ಲಿ ಕಡಿಮೆ ಮಟ್ಟದ ಗ್ಲುಕೋಸ್ ಚಯಾಪಚಯವನ್ನು ತೋರಿಸಿದೆ. ಮೆದುಳಿನಲ್ಲಿ ಒಟ್ಟಾರೆಯಾಗಿ ಮತ್ತು ಮೆದುಳಿನ ನೆನಪಿಗೆ ಸಂಬಂಧಿಸಿದ ಭಾಗ ಹಿಪ್ಪೊಕ್ಯಾಮಸ್ ಮಟ್ಟ ಕಡಿಮೆ ಇರುವುದು ತಿಳಿದು ಬಂದಿದೆ. ನೆನಪಿನ ಭಾಗದ ಮೇಲಿನ ಪರಿಣಾಮವು ವಯಸ್ಸನ್ನು ಮೀರಿ ಬೇಗನೇ ಅಲ್ಜೀಮರ್ ರೋಗ ಬರುವುದೂ ತಿಳಿದಿದೆ. ಆಂಟಿ ಕೊಲಿನರ್ಜಿಕ್ ಔಷಧಿಗಳನ್ನು ಬಳಸುವವರಲ್ಲಿ ಮೆದುಳಿನ ಗಾತ್ರವೇ ಕಡಿಮೆಯಾಗಿರುವುದು ಪತ್ತೆಯಾಗಿದೆ. ಮೆದುಳಿನ ಒಳಗೆ ಕುಳಿಗಳೂ ಕಂಡಿವೆ.

2013ರಲ್ಲಿ ಇದೇ ವಿಶ್ವವಿದ್ಯಾನಿಲದಯ ವಿಜ್ಞಾನಿಗಳು ನಡೆಸಿದ್ದ ಅಧ್ಯಯನದಲ್ಲಿ 60 ದಿನಗಳಿಗೆ ಸತತವಾಗಿ ಆಂಟಿ ಕೊಲಿನರ್ಜಿಕ್ ಔಷಧಿ ಪಡೆದವರಲ್ಲಿ ಕೊಗ್ನಿಟಿವ್ ಸಮಸ್ಯೆಗಳಿರುವುದು ತಿಳಿದಿತ್ತು. ಸ್ವಲ್ಪ ದುರ್ಬಲ ಪರಿಣಾಮ ಬೀರುವ ಔಷಧಿಗಳು 90 ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಅಧ್ಯಯನದ ವಿವರಗಳ ಬಳಿಕ ವೈದ್ಯರು ಆಂಟಿ ಕೊಲಿನರ್ಜಿಕ್ ಔಷಧಿಗಳಿಗೆ ಪರ್ಯಾಯವನ್ನು ಬಳಸಬೇಕು. ಆದರೆ ಮುಖ್ಯವಾಗಿ ವೈದ್ಯರನ್ನು ಕೇಳದೇ ಔಷಧಿ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ.

ಕೃಪೆ: http://edition.cnn.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X