ಈ ಸೂಪರ್ ಮಾರ್ಕೆಟಲ್ಲಿ ಎಲ್ಲಾ ಪ್ಯಾಕೆಟುಗಳು, ಬಾಟಲಿಗಳು ಖಾಲಿ ಖಾಲಿ! ಏಕೆ ಗೊತ್ತೆ?

ಸೂಪರ್ ಮಾರ್ಕೆಟ್ ಒಂದಕ್ಕೆ ಹೋಗಿ ಸೋಡಾದ ಖಾಲಿ ಕ್ಯಾನನ್ನು ಖರೀದಿಸುವ ಮುನ್ನ ನಾವೆಲ್ಲ ಮತ್ತೊಮ್ಮೆ ಯೋಚಿಸದೆ ಇರಲಾರೆವು. ಹಾಗಿದ್ದರೆ ಷಾಂಗೈನ ಜನರು ಕ್ಸುಷೆನ್ ಸೂಪರ್ ಮಾರ್ಕೆಟಿಗೆ ಹೋಗಿ ಒಳಗೆ ಖಾಲಿ ಇರುವ ಉತ್ಪನ್ನಗಳನ್ನು ಖರೀದಿಸುತ್ತಿರುವುದು ಏಕೆ?
ಇದು ಷಾಂಗೈ ಮೂಲದ ಕಲಾವಿದ ಕ್ಸು ಷೆನ್ ಮೆದುಳಿನ ಕೂಸು. ಅವರ ಕಂಟೆಂಪ್ರರಿ ಕಲೆ ಸೃಷ್ಟಿ ತಂಡವಾದ ಮಾಡ್ಲೆನ್ ಕಂಪೆನಿ ಜಾಗತೀಕರಣ ಮತ್ತು ಬಳಕೆಯನ್ನು ವಿರೋಧಿಸುವ ಸೂಪರ್ ಮಾರ್ಕೆಟನ್ನು ಸ್ಥಾಪಿಸಿದೆ. ಕ್ಸು ಷೆನ್ ಸೂಪರ್ ಮಾರ್ಕೆಟಿನಲ್ಲಿ ಸಾಮಾನ್ಯ ಉತ್ಪಾದನೆಯ ಮಾದರಿಯಲ್ಲಿಯೇ ಪ್ಯಾಕ್ ಮಾಡಿದ ವಸ್ತುವನ್ನು ಒಳಗೆ ಖಾಲಿಯಾಗಿದ್ದುಕೊಂಡು ಮರಳಿ ಸೃಷ್ಟಿಮಾಡಿರುತ್ತಾರೆ. ನಂತರ ಅವರು ಭೇಟಿ ನೀಡಿದವರನ್ನು ಅವುಗಳನ್ನು ಖರೀದಿಸಲು ಅಥವಾ ಅದರ ನಿಜ ಬೆಲೆಯನ್ನು ತಿಳಿಸಲು ಹೇಳುತ್ತಾರೆ.
ಸಾಮೂಹಿಕ ಗ್ರಾಹಕೀಕರಣದ ವಿರುದ್ಧ ಜನರ ಮೌಢ್ಯವನ್ನು ದೂರ ಮಾಡುವುದು ಅವರ ಉದ್ದೇಶವಾಗಿದೆ. ಆ ಮೂಲಕ ಕಲೆ ಮತ್ತು ಉದ್ಯಮದ ನಡುವಿನ ಅಂತರವನ್ನು ದೂರ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಬಂಡವಾಳಶಾಹಿಯು ನಮ್ಮ ಸಮಾಜದ ಮೇಲೆ ಬೀರಿದ ಪರಿಣಾಮಕ್ಕೆ ಅದು ಪ್ರಭಾವೀ ಅಣಕವಾಗಿದೆ.
ಉತ್ಪನ್ನಗಳನ್ನು ಖರೀದಿಸಲು ಬರುವ ಗ್ರಾಹಕರು ಕೇವಲ ಆಕರ್ಷಕ ಪ್ಯಾಕೇಜಿಂಗಿಗಾಗಿ ಕುರುಡಾಗಿ ವಸ್ತುಗಳನ್ನು ಖರೀದಿಸುತ್ತಾರೆ ಎಂದು ಅರ್ಥಮಾಡಿಕೊಳ್ಳುತ್ತಾರೆ. ಗ್ರಾಹಕೀಕರಣದ ಹುಚ್ಚನ್ನು ವಿರೋಧಿಸುವುದು ನಮ್ಮ ಉದ್ದೇಶ. ಎಲ್ಲರೂ ಹೊರಗಿನ ಪವಾಡವನ್ನು ನೋಡುತ್ತಾರೆ. ಆದರೆ ಒಳಗೆ ಏನಿದೆ ಎನ್ನುವ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ನಮ್ಮ ಸಮಾಜ ಈಗ ಶ್ರೀಮಂತವಾಗಿದೆ. ಹೀಗಾಗಿ ಪ್ಯಾಕೇಜಿಂಗ್ ಕೂಡ ಅದ್ದೂರಿಯಾಗಿದೆ. ಆದರೆ ಜನರನ್ನು ಒಳಗೆ ಇರುವ ಉತ್ಪನ್ನದ ಕಡೆಗೆ ಗಮನ ಹರಿಸುವಂತೆ ಮಾಡುವುದು ನಮ್ಮ ಉದ್ದೇಶ ಎನ್ನುತ್ತಾರೆ ಮೈಡನ್ ಕಂಪೆನಿಯ ಜನರಲ್ ಮ್ಯಾನೇಜರ್ ವಿಜಿ ಜಿನ್.
ಕೃಪೆ: http://indiatoday.intoday.in







