ಯುರೋಪ್‌ನಲ್ಲಿ ಮುಸ್ಲಿಂ ರಾಜಕಾರಣಿಗಳ ವಿರುದ್ಧ ಅಸಹಿಷ್ಣುತೆ ರಾರಾಜಿಸುತ್ತಿದೆ!

ಪ್ಯಾರಿಸ್, ಎಪ್ರಿಲ್ 26: ಯುರೋಪ್‌ನಲ್ಲಿ ಮುಸ್ಲಿಂ ರಾಜಕೀಯ ನಾಯಕರ ವಿರುದ್ಧ ಕಟು ತಾರತಮ್ಯ , ಅಪಪ್ರಚಾರ ಪ್ರಬಲಗೊಳ್ಳುತ್ತಿದೆ ಎಂದು ರಾಜಕೀಯ ನಿರೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಟು ಜನಾಂಗೀಯತೆ ಇರುವ ಬೆಲ್ಜಿಯಂ, ನೆದರ್‌ಲೆಂಡ್, ಸ್ವೀಡನ್, ಡೆನ್ಮಾರ್ಕ್ ಮುಂತಾದ ದೇಶಗಳ ಮುಸ್ಲಿಂ ರಾಜಕಾರಣಿಗಳು ವಿರೋಧಿ ಗಳಿಂದ ತೀಕ್ಷ್ಮ ಬೆದರಿಕೆ, ಆಕ್ರಮಣ, ಒತ್ತಡಗಳನ್ನು ಎದುರಿಸುತ್ತಿರುವುದರಿಂದ ರಾಜಕೀಯವನ್ನೇ ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ವೀಡನ್ ಮತ್ತು ಜರ್ಮನಿಯಲ್ಲಿ ಮುಸ್ಲಿಂ ರಾಜಕಾರಣಿಗಳು ಎನ್‌ಜಿಒಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬ ಹೆಸರಿನಲ್ಲಿ ಭಾರೀ ಒತ್ತಡ ಅನುಭವಿಸುತ್ತಿದ್ದಾರೆ. ಆದರೆ ಈ ನಡುವೆ ಮತ್ತೆ ವಿವಾದವಾದ ಆರ್ಮೇನಿಯನ್ ನರಹತ್ಯೆ ವಾದದ ನೆಪದಲ್ಲಿ ನೆದರ್‌ಲೆಂಡ್ ಮತ್ತು ಬೆಲ್ಜಿಯಂನಲ್ಲಿ ಮುಸ್ಲಿಂ ರಾಜಕೀಯ ಕಾರ್ಯಕರ್ತರ ವಿರುದ್ಧ ದಾಳಿ ನಡೆದಿದೆ. ಸ್ವೀಡನ್‌ನಲ್ಲಿ ಮುಹಮ್ಮದ್ ಕಪ್ಲಾನ್ ಎಂಬ ವಸತಿ ಸಚಿವರಿಗೆ ಐಸಿಸ್‌ನೊಂದಿಗೆ ಸಂಬಂಧವಿದೆಎಂದು ಮಾಧ್ಯಮಗಳು ಆರೊಪಿಸಿದ್ದರಿಂದ ಸಚಿವ ಸ್ಥಾನವನ್ನೇ ತೊರೆಯಬೇಕಾಗಿ ಬಂತು. ಅದೇವೇಳೆ ಗ್ರೀನ್‌ಪಾರ್ಟಿ ಸದಸ್ಯ ಯಸ್ರಿ ಶಂಸುದ್ದೀನ್ ಖಾನ್ ಮಹಿಳಾ ಪತ್ರಕರ್ತೆಗೆ ಶೇಕ್ ಹ್ಯಾಂಡ್ ನೀಡಿಲ್ಲ ಎಂಬ ಕಾರಣಕ್ಕಾಗಿ ರಾಜಕೀಯವನ್ನೇ ತೊರೆಯಬೇಕಾಗಿ ಬಂದಿದೆ ಎಂದು ವರದಿಗಳು ತಿಳಿಸಿವೆ.





