ಮಂಜೇಶ್ವರ: ಎಡನೀರು ಮಠಕ್ಕೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭೇಟಿ
ಅಭೂತಪೂರ್ವ ಸ್ವಾಗತ-ಗಡಿನಾಡ ಸಮಸ್ಯೆ ಕುರಿತು ಶ್ರೀಗಳೊಡನೆ ಚರ್ಚೆ

ಮಂಜೇಶ್ವರ: ಕಾಸರಗೋಡಿನ ರಾಜಕೀಯ ಸಂಚಲನ ಮೂಡಿಸಿದ ಉಮ್ಮನ್ ಚಾಂಡಿಯವರ ಎಡನೀರು ಶ್ರೀಗಳ ಭೇಟಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಏರ್ಪಡಿಸಿದ ಚುನಾವಣ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಸೋಮವಾರ ತಡರಾತ್ರಿ ರೈಲಿನಲ್ಲಿ ಆಗಮಿಸಿದ ಉಮ್ಮನ್ ಚಾಂಡಿ ಅವರು ಮಂಗಳವಾರ ಬೆಳಿಗ್ಗೆ ಐಕ್ಯರಂಗದ ಮುಖಂಡರು ಗಳೊಂದಿಗೆ ಎಡನೀರು ಮಠಕ್ಕೆ ಬೇಟಿ ನೀಡಿ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮಿಜಿಗಳ ಆಶೀರ್ವಾದ ಪಡೆದರು.
ಹಿಂದೂ ಸಮಾಜದಲ್ಲಿ ಶಿಷ್ಠತೆಯನ್ನು ಹೊಂದಿದ ತಂತ್ರಿ ಸ್ಥಾನವನ್ನು ಹೊಂದಿದ ರವೀಶ ತಂತ್ರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ರಾಜಕೀಯ ವಿಶ್ಲೇಶಕರಲ್ಲಿ ಕುತೂಹಲ ಕೆರಳಿಸಿದೆ.ಸುಮಾರು ಅರ್ಧಗಂಟೆಗಳ ಕಾಲ ಎಡನೀರು ಮಠದಲ್ಲಿ ಐಕ್ಯರಂಗದ ಮುಖಂಡರೊಂದಿಗೆ ಉಮ್ಮನ್ ಚಾಂಡಿಯವರು ಶ್ರೀಗಳೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.ಕಾಸರಗೋಡಿನ ಕನ್ನಡಿಗರಿಗೆ ಕೇರಳ ಸರಕಾರದಿಂದ ಯಾವುದೇ ಅನ್ಯಾಯ ಆಗಬಾರದು,ಕನ್ನಡಿಗರ ಹಕ್ಕುಗಳನ್ನು ಸಂರಕ್ಷಿಸಬೇಕು ,ಕನ್ನಡಿಗರ ಮೇಲೆ ಹೇರಿಕೆ ಮಲೆಯಾಳ ಆಗಬಾರದು ಕಾಂಗ್ರೆಸ್ ಮುಖಂಡರಾದ ನ್ಯಾಯವಾದಿ ಬಿ ಸುಬ್ಬಯ್ಯ.ರೈ ಕೇಶವ ಪ್ರಸಾದ ನಾಣಿತ್ತಿಲು,ಬಾಲಕೃಷ್ಣ ವೊರ್ಕೋಡಲ್ಲಿ ,ಕೆ.ನೀಲಕಂಠನ್ ,ನ್ಯಾಯವಾದಿ ಗೋವಿಂದನ್ ನಾಯರ್,ಪಿ.ಎ ಆಶ್ರಫಲಿ,ನ್ಯಾಯವಾದಿ ಸಿ.ಕೆ ಶ್ರೀಧರನ್,ಹಕೀಂ ಕುನಿಲ್ ,ಕರುಣ್ ಥಾಪ್,ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ,ಸಿ.ವಿ ಜೀಮ್ಸ್ ,ಹಕೀಂ ಕುನ್ನಿಲ್ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿಎನ್.ಎ ನೆಲ್ಲಿಕುನ್ನು , ಶಾಂತಾ ಟೀಚರ್ ಎಡನೀರು,ನಾಸಿರ್ ಮೊಗ್ರಾಲ್,ಮುಖ್ಯಮಂತ್ರಿಯವರ ಜೊತೆಗಿದ್ದರು ಮಠಕ್ಕೆ ಆಗಮಿಸಿದ ಉಮ್ಮನ್‌ಚಾಂಡಿಯವರನ್ನು ಎಡನೀರು ಮಠದ ಪ್ರಬಂಧಕರಾದ ಜಯರಾಮ ಎಡನೀರು ಹೂಹಾರ ಹಾಕಿ ಸ್ವಾಗತಿಸಿದರು.ಬಳಿಕ ಉಮ್ಮನ್‌ಚಾಂಡಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಕೇಶವನಾಂದ ಭಾರತೀ ಸ್ವಾಮೀಜಿ ಗೌರವಿಸಿದರು.
ಬಳಿಕ ಮುಖ್ಯಮಂತ್ರಿ ಪೆರ್ಲ ಹಾಗೂ ಬದಿಯಡ್ಕದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು.





