ಶುಕ್ರವಾರದ ನಮಾಜಿನ ಬಳಿಕ ಮಳೆಗಾಗಿ ಪ್ರಾರ್ಥನೆ : ಬೆಂಗಳೂರಿನ ಧರ್ಮಗುರುವಿನಿಂದ ಎಲ್ಲಾ ಜಮಾಅತ್ ಗಳಿಗೆ ಮನವಿ

ಬೆಂಗಳೂರು.ಏ.26: ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಆಯೋಜಿಸಲು ಉದ್ದೇಶಿಸಿದ್ದಾರೆ.ಶುಕ್ರವಾರದಂದು ನಗರದ ವಿವಿಧೆಡೆ ಮಳೆಗಾಗಿ ಅಲ್ಲಾನನ್ನು ಪ್ರಾರ್ಥಿಸುವುದಾಗಿ ಧರ್ಮಗುರುಗಳಾದ ಶಿವಾಜಿನಗರದ ಜುಮಾ ಮಸೀದಿಯ ಸೂಫಿ ಅಬ್ದುಲ್ ಖಾದರ್ ಶಾ ವಾಜಿದ್ ಖಾದ್ರಿ ಈ ವಿಷಯ ತಿಳಿಸಿದ್ದು, ಶುಕ್ರವಾರದ ನಮಾಜಿನ ನಂತರ ಮಳೆಗಾಗಿ ಪ್ರಾರ್ಥನೆ ಮಾಡುವಂತೆ ಎಲ್ಲಾ ಮಸೀದಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಅತಿವೃಷ್ಟಿ, ಅನಾವೃಷ್ಟಿ ನಮ್ಮ ಕೈಯಲ್ಲಿಲ್ಲ. ಎಲ್ಲವೂ ದೇವರ ಕೈಯಲ್ಲಿದೆ. ವಿಶೇಷ ಪ್ರಾರ್ಥನೆಯಿಂದಲಾದರೂ ಮಳೆಯಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
Next Story





