Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಚೆರ್ನೋಬಿಲ್ ಅಣು ದುರಂತಕ್ಕೆ 30 ವರ್ಷ

ಚೆರ್ನೋಬಿಲ್ ಅಣು ದುರಂತಕ್ಕೆ 30 ವರ್ಷ

ವಾರ್ತಾಭಾರತಿವಾರ್ತಾಭಾರತಿ26 April 2016 8:00 PM IST
share
ಚೆರ್ನೋಬಿಲ್ ಅಣು ದುರಂತಕ್ಕೆ 30 ವರ್ಷ

ಕೀವ್, ಎ. 26: ಮಂಗಳವಾರ ಇತಿಹಾಸ ಕಂಡ ಭೀಕರ ಚೆರ್ನೋಬಿಲ್ ಅಣು ದುರಂತದ 30ನೆ ವಾರ್ಷಿಕ ದಿನ. ದುರಂತವು ಪೂರ್ವ ಯುರೋಪ್‌ನ ಹಲವು ಭಾಗಗಳನ್ನು ಶಾಶ್ವತವಾಗಿ ವಿಷಮಯವಾಗಿಸಿತು ಹಾಗೂ ನಿಗೂಢ ಸೋವಿಯತ್ ಒಕ್ಕೂಟದ ಕೊರತೆಗಳನ್ನು ಜಗತ್ತಿಗೆ ಪರಿಚಯಿಸಿತ್ತು.

 1986ರ ಎಪ್ರಿಲ್ 26ರ ಮುಂಜಾನೆಯ ಅವಧಿಯಲ್ಲಿ ಆಗಿನ ಸೋವಿಯತ್ ಯುಕ್ರೇನ್‌ನ ಪರಮಾಣು ಸ್ಥಾವರದಲ್ಲಿ ನಡೆಸಿದ ಪ್ರಯೋಗವೊಂದು ನಿಯಂತ್ರಣವನ್ನು ಮೀರಿತು. ಇದರ ಪರಿಣಾಮವಾಗಿ ರಿಯಾಕ್ಟರ್‌ಗಳು ಕರಗಿ ಮಾರಕ ಪರಮಾಣು ಪದಾರ್ಥಗಳ ಮೋಡಗಳು ಆಕಾಶಕ್ಕೆ ಚಿಮ್ಮಿದವು. ಲಕ್ಷಾಂತರ ಜನರು ಉಟ್ಟ ಬಟ್ಟೆಯಲ್ಲೇ ಸುರಕ್ಷಿತ ಸ್ಥಳಗಳಿಗೆ ಓಡಿದರು.

30ನೆ ವಾರ್ಷಿಕ ದಿನದ ಸ್ಮರಣೆಯಂದು ಒಂದು ವಿಶೇಷವಿದೆ. ಇಲ್ಲಿನ ರಿಯಾಕ್ಟರ್ ಸ್ಥಾವರಕ್ಕೆ 1.7 ಬಿಲಿಯ ಡಾಲರ್ (ಸುಮಾರು 11,315 ಕೋಟಿ ರೂಪಾಯಿ) ವೆಚ್ಚದಲ್ಲಿ ಉಕ್ಕಿನ ಕವಚವನ್ನು ಹೊದಿಸಲಾಗಿದೆ. ಇದು ಇನ್ನು 100 ವರ್ಷಗಳವರೆಗೆ ಇಲ್ಲಿಂದ ವಿಕಿರಣ ಹೊರಸೂಸುವುದನ್ನು ತಡೆಯುತ್ತದೆ.

40ಕ್ಕೂ ಹೆಚ್ಚು ಸರಕಾರಗಳ ದೇಣಿಗೆಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಚೆರ್ನೋಬಿಲ್‌ನಿಂದ ಕಲಿಸಿದ ಪಾಠ ಜಗತ್ತಿನ ಎಲ್ಲರಿಗೂ ಪಾಠವಾಗಬೇಕು ಎಂದು ಯುಕ್ರೇನ್ ಪ್ರಧಾನಿ ವೊಲೊಡಿಮಿರ್ ಗ್ರೋಯ್ಸೋಮನ್ ಹೇಳಿದರು.

ಪರಮಾಣು ದುರಂತದ ಬಳಿಕ ಅದರ ಪರಿಣಾಮವನ್ನು ನಿಯಂತ್ರಿಸಲು ಹಾಗೂ ಸ್ಥಳವನ್ನು ಸ್ವಚ್ಛಗೊಳಿಸಲು ಆಗಿನ ಸೋವಿಯತ್ ಒಕ್ಕೂಟದ ಎಲ್ಲೆಡೆಯಿಂದ 6 ಲಕ್ಷ ಅಧಿಕ ನಾಗರಿಕ ಮತ್ತು ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ದುರಂತದ ತಕ್ಷಣದ ಪರಿಣಾಮವಾಗಿ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ 31 ಕೆಲಸಗಾರರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರು. ಅವರ ಪೈಕಿ ಹೆಚ್ಚಿನವರು ಅತಿ ವಿಕಿರಣದ ಪರಿಣಾಮಗಳಿಗೆ ಒಳಗಾಗಿದ್ದರು.

ಮೂರು ದಶಕಗಳ ಅವಧಿಯಲ್ಲಿ ಕ್ಯಾನ್ಸರ್ ಮುಂತಾದ ವಿಕಿರಣ ಸಂಬಂಧಿ ಕಾಯಿಲೆಗಳಿಂದಾಗಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ.

►ಪರಮಾಣು ವಿಕಿರಣ ಪ್ರಸರಣದಿಂದಾಗಿ 4,762 ಚದರ ಕಿಲೋಮೀಟರ್ ಪ್ರದೇಶವನ್ನು ಖಾಲಿ ಬಿಡಲಾಗಿತ್ತು. ಇದರ ಅರ್ಧದಷ್ಟು ಭಾಗ ಸ್ಥಾವರವಿರುವ ಯುಕ್ರೇನ್‌ನಲ್ಲಿದೆ. ಉಳಿದ ಪ್ರದೇಶ ಬೆಲಾರುಸ್‌ನಲ್ಲಿದೆ.

►ಬೆಂಕಿಯನ್ನು ನಿಯಂತ್ರಿಸಲು ಹಾಗೂ ಪರಿಸರವನ್ನು ಶುದ್ಧೀಕರಿಸಲು ಸುಮಾರು 6 ಲಕ್ಷ ನಾಗರಿಕ ಮತ್ತು ಸೇನಾ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

►ಒಟ್ಟು 3.5 ಲಕ್ಷ ಜನರನ್ನು ಅಪಘಾತದ ಆರಂಭದ ದಿನಗಳಲ್ಲಿ ಸ್ಥಳಾಂತರಿಸಲಾಗಿತ್ತು. ಇದರಲ್ಲಿ ಸ್ಥಾವರವಿರುವ ಪಟ್ಟಣ ಪ್ರಿಪ್ಯತ್‌ನ 45,000 ನಿವಾಸಿಗಳು ಸೇರಿದ್ದಾರೆ.

►ಸ್ಥಾವರದ 31 ಕೆಲಸಗಾರರು ತಕ್ಷಣ ಪ್ರಾಣ ಕಳೆದುಕೊಂಡರು. ಚೆರ್ನೊಬಿಲ್ ಸಂಬಂಧಿ ಕ್ಯಾನ್ಸರ್ ಮತ್ತು ಲುಕೇಮಿಯದಿಂದಾಗಿ 9,000 ಮಂದಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ದುರಂತದಿಂದ ಸಾಯುವವರ ಒಟ್ಟು ಸಂಖ್ಯೆ 90,000 ಎಂದು ಗ್ರೀನ್‌ಪೀಸ್ ಲೆಕ್ಕಹಾಕಿದೆ.

►ದುರಂತದ ಸುದ್ದಿ ಹೊರಜಗತ್ತಿಗೆ ತಿಳಿಯಲು ಎರಡು ದಿನಗಳು ಬೇಕಾಯಿತು. ಇಂಥ ಒಂದು ಘಟನೆ ನಡೆದಿರುವುದನ್ನು ಖಚಿತ ಪಡಿಸಲು ಸರಕಾರಿ ನಿಯಂತ್ರಣದ ಸೋವಿಯತ್ ನ್ಯೂಸ್ ಮಾಧ್ಯಮ ಮೂರು ದಿನಗಳ ಕಾಲ ಕಾಯಿತು. ಆಗಲೂ, ದುರಂತದ ತೀವ್ರತೆಯನ್ನು ಮುಚ್ಚಿಟ್ಟಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X