ಜೆಎನ್‌ಯು ವಿದ್ಯಾರ್ಥಿಗಳಿಗೆ ದಂಡನೆ ಸೇಡಿನ ಕ್ರಮ:ಎಡರಂಗ

ಹೊಸದಿಲ್ಲಿ,ಎ.26: ಮೂವರು ಜೆಎನ್‌ಯು ವಿದ್ಯಾರ್ಥಿಗಳ ಅಮಾನತು ಮತ್ತು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್‌ಗೆ ದಂಡ ಹೇರಿಕೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಎಡಪಕ್ಷಗಳು,ಇದು ಸೇಡಿನ ಕ್ರಮವಾಗಿದೆ ಎಂದು ಬಣ್ಣಿಸಿದವು.
ಜೆಎನ್‌ಯು ಅಧಿಕಾರಿಗಳ ‘ಧಿಮಾಕಿನ’ ಮತ್ತು ‘ಪ್ರಜಾಪ್ರಭುತ್ವ ವಿರೋಧಿ’ ಕ್ರಮಗಳ ‘ಗಂಭೀರ ವಿಷಯ’ವನ್ನು ಪ್ರಸ್ತಾಪಿಸಲು ಕಲಾಪವನ್ನು ಅಮಾನತುಗೊಳಿಸುವಂತೆ ನಿಯಮ 267ರಡಿ ತಾನು ನೋಟಿಸನ್ನು ನೀಡಿದ್ದೇನೆ ಎಂದು ತಿಳಿಸಿದ ತಪನ ಕುಮಾರ ಸೇನ್(ಸಿಪಿಎಂ) ಅವರು ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರಲ್ಲದೆ,ಇದು ನಾಗರಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಸರಕಾರದ ಯೋಜನೆಯ ಭಾಗವಾಗಿದೆ. ಸಂವಿಧಾನದ ಹೆಸರಿನಲ್ಲಿ ಅವರು ಸಂವಿಧಾನವನ್ನೇ ಕೆಡಿಸುತ್ತಿದ್ದಾರೆ ಎಂದರು. ಸಿಪಿಐ ನಾಯಕ ಡಿ.ರಾಜಾ ಅವರೊಂದಿಗೆ ಕಾಂಗ್ರೆಸ್ ಸದಸ್ಯರೂ ಸೇನ್ ಜೊತೆ ಧ್ವನಿಗೂಡಿಸಿದರು.
Next Story





