ಪುತ್ತೂರು: ಈಜುಕೊಳದಲ್ಲಿ ಬಾಲಕ ಮೃತ್ಯು
ಪುತ್ತೂರು: ಈಜುಕೊಳವೊಂದಕ್ಕೆ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಪುತ್ತೂರು ನಗರದ ದರ್ಬೆ ಎಂಬಲ್ಲಿ ನಡೆದಿದೆ.
ದೇವಿಪ್ರಸಾದ್(11) ಮೃತಪಟ್ಟ ಬಾಲಕ. ಈತ ಮರ್ದಾಳ ನಿವಾಸಿಯಾಗಿದ್ದು, ಶಾಲೆ ರಜೆಯ ಕಾರಣ ಪುರುಷರಕಟ್ಟೆ ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದ್ದು, ಅಲ್ಲಿಂದ ತನ್ನ ಸ್ನೇಹಿತರೊಂದಿಗೆ ದರ್ಬೆಯಲ್ಲಿರುವ ಎ.ಎಸ್.ಆರ್ ಈಜುಕೊಳಕ್ಕೆ ಈಜಲೆಂದು ಆಗಮಿಸಿದ್ದು, ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Next Story





