ನೌಕಾಯಾನ ಹಕ್ಕುಗಳಿಗಾಗಿ ಭಾರತ, ಚೀನಾ ವಿರುದ್ಧ ಅಮೆರಿಕ ಅಭಿಯಾನ
ವಾಶಿಂಗ್ಟನ್, ಎ. 26: ಅಮೆರಿಕ ಸೇನೆ ಕಳೆದ ವರ್ಷ 13 ದೇಶಗಳ ವಿರುದ್ಧ ''ನೌಕಾಯಾನ ಸ್ವಾತಂತ್ರ'' ಅಭಿಯಾನವನ್ನು ನಡೆಸಿತ್ತು ಹಾಗೂ ಭಾರತವೂ ಈ ಪಟ್ಟಿಯಲ್ಲಿ ಸೇರಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ವಾರ್ಷಿಕ ವರದಿಯೊಂದು ತಿಳಿಸಿದೆ.
ಅಮೆರಿಕದ ಸೇನೆ ಅಭಿಯಾನ ನಡೆಸಿದ ದೇಶಗಳ ಪಟ್ಟಿಯಲ್ಲಿ ಚೀನಾ, ಭಾರತ, ಇಂಡೋನೇಶ್ಯ, ಇರಾನ್, ಲಿಬಿಯ, ಮಲೇಶ್ಯ, ಮಾಲ್ದೀವ್ಸ್, ಒಮನ್, ಫಿಲಿಪ್ಪೀನ್ಸ್ ಮತ್ತು ವಿಯೆಟ್ನಾಂಗಳು ಸೇರಿವೆ.
ಈ ದೇಶಗಳ ವಿರುದ್ಧ ಎಷ್ಟು ಬಾರಿ ಅಭಿಯಾನಗಳನ್ನು ನಡೆಸಲಾಗಿದೆ ಎಂಬುದನ್ನು ವರದಿ ತಿಳಿಸಿಲ್ಲ. ಆದರೆ, ತೈವಾನ್, ನಿಕಾರಗುವ ಮತ್ತು ಅರ್ಜೆಂಟೀನಗಳ ವಿರುದ್ಧ ಒಂದು ಬಾರಿ ಅಭಿಯಾನ ನಡೆಸಿದೆ. ಹೀಗೆ ಒಟ್ಟು 13 ದೇಶಗಳ ವಿರುದ್ಧ ಅದು ನೌಕಾಯಾನ ಸ್ವಾತಂತ್ರ ಅಭಿಯಾನ ನಡೆಸಿದೆ.
Next Story





