ಇಖ್ರಾ ಅರಬಿಕ್ ಸ್ಕೂಲ್‌ನ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಮಂಗಳೂರು, ಎ. 26: ಇಖ್ರಾ ಅರಬಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಹಾಗೂ ಬೇಸಿಗೆ ಶಿಬಿರ ಮತ್ತು ಸಂಧ್ಯಾ ತರಗ ತಿಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ನಗರದ ಪುರಭವನದಲ್ಲಿ ನಡೆಯಿತು.
ಮಂಗಳೂರಿನ ಅಬುಲ್ ಹಸನ್ ಅಲಿ ನದ್ವಿ ಎಜುಕೇಶನ್ ಆ್ಯಂಡ್ ಚಾರಿಟೇ ಬಲ್ ಟ್ರಸ್ಟ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಕ್ನೋ ರಾಯ್‌ಬರೇಲಿಯ ಝಿಯಾ ಉಲ್ ಉಲೂಂ ಹದೀ್ ಮತ್ತು ತಫ್ಸೀರ್ ಮದ್ರಸದ ಉಪನ್ಯಾಸಕ ವೌಲಾನಾ ಅಬ್ದುಲ್ ಸುಭಾನ್ ನಾಖುದಾ ನದ್ವಿ ಮದನಿ, ನಗರದ ಮಸ್ಜಿದುನ್ನೂರ್‌ನ ಇಮಾಮ್ ಹಾಗೂ ಖತೀಬ್ ವೌಲಾನಾ ಮುಹಮ್ಮದ್ ಯೂಸುಫ್ ಸಾಹೇಬ್ ಖಾಸಿಮಿ, ಇಖ್ರಾ ಅರಬಿಕ್ ಸ್ಕೂಲ್‌ನ ಪ್ರಾಂಶುಪಾಲ ವೌಲಾನ ಸಾಲಿಂ ನದ್ವಿ ಮೊದಲಾದವರು ಉಪಸ್ಥಿತರಿದ್ದರು.
Next Story





