Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಟಿಟ್ಲಾನಗರ ದೇಶದಲ್ಲೇ ಅತ್ಯಧಿಕ ಬಿಸಿ

ಟಿಟ್ಲಾನಗರ ದೇಶದಲ್ಲೇ ಅತ್ಯಧಿಕ ಬಿಸಿ

ತಾಪಮಾನ 48.5 ಡಿಗ್ರಿ ಸೆಂ.ಗೆ ಏರಿಕೆ

ವಾರ್ತಾಭಾರತಿವಾರ್ತಾಭಾರತಿ26 April 2016 11:45 PM IST
share

 ಟಿಟ್ಲಾಗಡ (ಒಡಿಶಾ), ಎ.26: ಪಶ್ಚಿಮ ಒಡಿಶಾದ ಬೊಲಾಂಗಿರ್ ಜಿಲ್ಲೆಯ 60 ಸಾವಿರ ಜನ ಸಂಖ್ಯೆಯ ಟಿಟ್ಲಾಗಡ ಪಟ್ಟಣದ ಬೀದಿಗಳಲ್ಲಿ ಹಗಲು 11 ಗಂಟೆಗೆ ಒಂದೇ ಒಂದು ಮನುಷ್ಯ ಪ್ರಾಣಿ ಕಣ್ಣಿಗೆ ಬಿದ್ದರೆ, ಅದು ನಿಮ್ಮ ಅದೃಷ್ಟ. ಇಲ್ಲಿನ ಜನರು ಹಗಲು 10 ಗಂಟೆಯೊಳಗೆ ಮನೆಯೊಳಗೆ ಸೇರಿಕೊಂಡರೆ ಸಂಜೆ 6ರವರೆಗೆ ಹೊರಗೆ ತಲೆ ಹಾಕುವುದಿಲ್ಲ. ಏರುತ್ತಿರುವ ತಾಪಮಾನದಿಂದ ತಲೆ ಒಡೆಸಿಕೊಳ್ಳಲು ಅಥವಾ ಕಾದ ಕಾವಲಿಯಂತಿರುವ ರಸ್ತೆಗಳಲ್ಲಿ ಕಾಲು ಸುಡಿಸಿಕೊಳ್ಳಲು ಇಲ್ಲಿನವರು ತಯಾರಿಲ್ಲ!.

ಬೇಗೆಯಿಂದ ರಕ್ಷಿಸಿಕೊಳ್ಳಲು ಜನರು ತಮ್ಮ ಮನೆಗಳೊಳಗೆ ಹವಾ ನಿಯಂತ್ರಣ, ತಂಪುಕಾರಕ, ಫ್ಯಾನ್‌ಗಳಿಂದ ತೊಡಗಿ ದೇಹ ತಂಪಾಗಿಸುವ ಆಹಾರದವರೆಗೆ ಸಾಧ್ಯವಿರುವುದನ್ನೆಲ್ಲ ಮಾಡುತ್ತಾರೆ. ಸೂರ್ಯ ನೆತ್ತಿಗೇರುತ್ತಿರುವಂತೆ ಜನರು ಬಿಡಿ, ಬೀದಿ ನಾಯಿಗಳು, ಬೀಡಾಡಿ ಜಾನುವಾರುಗಳೂ ರಸ್ತೆಯಲ್ಲಿ ಕಾಣಿಸುವುದಿಲ್ಲ.
 ಹಗಲು 10ರ ಬಳಿಕ ಟಿಟ್ಲಾಗಡದಲ್ಲಿ ಅಘೋಷಿತ ಕರ್ಫ್ಯೂ ರೀತಿಯ ವಾತಾವರಣವಿರುತ್ತದೆ. ಆ ಸಮಯ ನೀವು ರಸ್ತೆಯಲ್ಲಿದ್ದೀರಾದರೆ ನೀವೊಬ್ಬ ಭಾರೀ ಧೈರ್ಯಶಾಲಿಯಿರಬೇಕು ಅಥವಾ ಪರ ಊರಿನವರಿರಬೇಕು. ಟಿಟ್ಲಾಗಡದಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿಪರೀತ ಧಗೆಯೇ ಇದ್ದರೂ, ಈ ಬಾರಿ ಕುಲುಮೆಯಲ್ಲಿ ಬದುಕುತ್ತಿರುವ ಅನುಭವವಾಗುತ್ತಿದೆಯೆಂದು ಸ್ಥಳೀಯ ಕಾಂಗ್ರೆಸ್‌ನಾಯಕ ಉಪೇಂದ್ರ ಬಾಗ್ ಎಂಬವರು ಹೇಳಿದ್ದಾರೆ.
ಕಳೆದ 3 ದಿಗಳಿಂದ ಟಿಟ್ಲಾಗಡ ದೇಶದಲ್ಲೇ ಅತಿ ಹೆಚ್ಚು ಉಷ್ಣತೆಯ ಪ್ರದೇಶವಾಗಿದೆ. ರವಿವಾರ ಇಲ್ಲಿನ ತಾಪಮಾನ 48.5ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಎಪ್ರಿಲ್‌ನಲ್ಲಿ ಒಡಿಶಾದ ಸಾರ್ವಕಾಲಿಕ ಅತ್ಯಧಿಕ ತಾಪಮಾನವಾಗಿದೆ. ಕಳೆದ ವಾರದಿಂದ ಇಲ್ಲಿ ಪಾದರಸರ ಮಟ್ಟ 45 ಡಿಗ್ರಿ ಸೆಂಟಿಗ್ರೇಡ್‌ನಿಂದ ಮೇಲಕ್ಕೇರಲಾರಂಭಿಸಿದೆ.
ಕಚೇರಿಯಲ್ಲಿ ಹವಾನಿಯಂತ್ರಣವಿದ್ದರೂ ಸೆಕೆ ತಡೆಯಲಾಗುತ್ತಿಲ್ಲವೆಂದು ಟಿಟ್ಲಾಗಡ ಉಪ-ವಿಭಾಗಾಧಿಕಾರಿ ಕೈಲಾಸ್ ಸಾಹು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X