ಯೆನೆಪೊಯ ವಿವಿಯಲ್ಲಿ ಎಂಬಿಬಿಎಸ್, ಬಿಡಿಎಸ್ ಶಿಕ್ಷಣಕ್ಕೆ ಪ್ರಾಯೋಜಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಎ.26: ಯೆನೆಪೊಯ ವಿಶ್ವವಿದ್ಯಾನಿಲಯದ ವತಿಯಿಂದ ಕಳೆದ ಹಲವು ವರ್ಷಗಳಿಂದ ಎಂಬಿಬಿಎಸ್ ಹಾಗೂ ಬಿಡಿಎಸ್ ಪದವಿ ಕೋರ್ಸ್‌ಗಳಿಗೆ ಪ್ರಾಯೋಜಿತ ಪ್ರವೇಶ ನೀಡುತ್ತಿದ್ದು, 2016-17ನೆ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯೆನೆಪೊಯ ಪ್ರತಿಷ್ಠಾನ, (ಯೆನೆಪೊಯ ಮೊದಿನ್ ಕುಂಞಿ ಸ್ಮಾರಕ ವಿದ್ಯಾ ಮತ್ತು ದಾನಶೀಲ ಸಂಸ್ಥೆಯ ಅಂಗ) ಇವರ ಸಹಯೋಗದೊಂದಿಗೆ ಕೆಲವು ಅಭ್ಯರ್ಥಿಗಳಿಗೆ ಪ್ರಾಯೋಜಿತ ಪ್ರವೇಶ ನೀಡಲಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಬಡ ವಿದ್ಯಾರ್ಥಿಗಳು ಹಾಗೂ ಅರ್ಹತೆಯ ಆಧಾರದ ಮೇಲೆ ಮಾಡಲಾಗುವುದು. ಅಪೇಕ್ಷಿತ ಅಭ್ಯರ್ಥಿಗಳು ್ಗಖಿ ಉ್ಞಠ್ಟಿಚ್ಞ್ಚಛಿ ಛಿಠಿ ಹಾಜರಾಗುವುದು ಕಡ್ಡಾಯ.
ಅಭ್ಯರ್ಥಿಗಳು ಭೌತ, ರಸಾಯನ ಮತ್ತು ಜೀವಶಾಸ್ತ್ರಗಳಲ್ಲಿ ಅರ್ಹತಾ ಪರೀಕ್ಷೆಯಲ್ಲಿ (ಪಿಯುಸಿ ಅಥವಾ ತತ್ಸಮಾನ) ಶೇ. 90 ಅಂಕಗಳನ್ನು ಪಡೆದವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲದೆ ಅಭ್ಯರ್ಥಿಗಳು ಕರ್ನಾಟಕ ಅಥವಾ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯವರಾಗಿರಬೇಕು. ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಪ್ರವೇಶದಲ್ಲಿ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಸಾದಾ ಕಾಗದದಲ್ಲಿ ಅರ್ಜಿಯನ್ನು ಸಂಚಾಲಕರು ಯೆನೆಪೊಯ ವಿಶ್ವವಿದ್ಯಾನಿಲಯ ರಸ್ತೆ, ದೇರಳಕಟ್ಟೆ , ಮಂಗಳೂರು 575 018 ಇವರಿಗೆ ಕಳುಹಿಸಬಹುದು. ಅರ್ಜಿಯೊಂದಿಗೆ ಯೆನೆಪೊಯ ಪ್ರವೇಶ ಪರೀಕ್ಷೆಯ ಅರ್ಜಿ ಮತ್ತು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ನಕಲನ್ನು ಲಗತ್ತಿಸಬೇಕು.
ಯೆನೆಪೊಯ ಪ್ರವೇಶ ಪರೀಕ್ಷೆಯ ಅರ್ಜಿ ನಮೂನೆಯನ್ನು ಕುಲಸಚಿವರು ಕಾರ್ಯಾಲಯ, ಯೆನೆಪೊಯ ವಿಶ್ವವಿದ್ಯಾನಿಲಯ 1,000 ರೂ. ಪಾವತಿಸಿ ಪಡೆಯಬಹುದು ಅಥವಾ ವಿಶ್ವವಿದ್ಯಾನಿಲಯದ ಅಂತರ್ಜಾಲ ಡಿಡಿಡಿ.ಛ್ಞಿಛಿಟ.ಛಿಛ್ಠ.ಜ್ಞಿ ನಿಂದ ಪಡೆಯಬಹುದು. ಪ್ರಾಯೋಜಿತ ಪ್ರವೇಶಕ್ಕೆ ಅರ್ಜಿಯನ್ನು ಮೇ 16ರೊಳಗೆ ಸಲ್ಲಿಸಬೇಕು. 2016ನೆ ವರ್ಷದಲ್ಲಿ 10+2/ಪಿ.ಯು.ಸಿ ಪರೀಕ್ಷೆ ಬರೆದವರು ಮಾತ್ರ ಪ್ರಾಯೋಜಿತ ಪ್ರವೇಶಕ್ಕೆ ಅರ್ಹರು ಎಂದು ಪ್ರಕಟನೆ ತಿಳಿಸಿದೆ.





