ಕಿನ್ನಿಗೋಳಿ ಮಾರುಕಟ್ಟೆ ಹಿಂಭಾ ಗದಲ್ಲಿರುವ ಮಸೀದಿಯ ಬಳಿ ಜಮೀ ನೊಂದರಲ್ಲಿ ಅಗ್ನಿ ಆಕಸ್ಮಿಕ ಉಂಟಾದ ಪರಿಣಾಮ ಜಮೀನಿನಲ್ಲಿದ್ದ ಗಿಡ ಮರಗಳು ಬೆಂಕಿಗಾಹುತಿಯಾಗಿವೆ.   ಮಧ್ಯಾಹ್ನ 12 ಗಂಟೆಯ ವೇಳೆಗೆ ಈ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯರು ಪಂಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿ ಸಲು ಯತ್ನಿಸಿದರು. ಬಳಿಕ ಟ್ಯಾಂಕರ್ ನೀರಿನ ಮೂಲಕ ಬೆಂಕಿಯನ್ನು ಸಂಪೂ ರ್ಣವಾಗಿ ಹತೋಟಿಗೆ ತರಲಾಯಿತು.