ಇಂದು ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ
ಕಾಸರಗೋಡು, ಎ. 27 : ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಬೆಳಿಗ್ಗೆ ೧೧ ಗಂಟೆಗೆ ತಿರುವನಂತಪುರದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ಕೆ ಮೊಹಾಂತಿ ಯವರು ಸಾರ್ವಜನಿಕ ಶಿಕ್ಷಣ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ .ಎಸ್ ಸೆಂಥಿಲ್ ರವರಿಗೆ ಹಸ್ತಾಂತರಿಸಿ ಫಲಿತಾಂಶ ಪ್ರಕಟಿಸುವರು.
ಈ ಬಾರಿ ಬೇಗನೆ ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ. ಈ ಬಾರಿ ಮೋಡರೇಶನ್ ಅಂಕ ನೀಡದಿರಲು ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.
ಫಲಿತಾಂಶವು www.results.itschool.gov.in, www.result.itschool.gov.in ಬೆಳಿಗ್ಗೆ ೧೧ ಗಂಟೆಯಿಂದ ವೆಬ್ ಸೈಟ್ ನಿಂದ ಲಭ್ಯವಾಗಲಿದೆ. ಈ ಬಾರಿ ೪.೭೪ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
Next Story