ಲಂಡನ್‌ನ 157 ವರ್ಷದ ಗಡಿಯಾರಕ್ಕೆ ಒಂದು ತಿಂಗಳು ರಜೆ!

ಲಂಡನ್, ಎಪ್ರಿಲ್ 27: ಕಳೆದ 157 ವರ್ಷಗಳಿಂದ ನಿಲ್ಲದೆ ಸಮಯ ತೋರಿಸುತ್ತಿದ್ದ ಸುಪ್ರಸಿದ್ಧ ಬಿಗ್‌ಬೆನ್ ಗಡಿಯಾರದ ಜೋರಾದ ಸದ್ದು ಕೆಲವು ಸಮಯ ಕೇಳುವುದಿಲ್ಲ. ಈ ದೊಡ್ಡ ಗಡಿಯಾರಕ್ಕೆ ಅಗತ್ಯ ರಿಪೇರಿ ಆಗಬೇಕಾದ್ದರಿಂದ ಅದನ್ನು ಬಂದ್ ಮಾಡಲಾಗುವುದೆಂದು ವರದಿಗಳು ತಿಳಿಸಿವೆ. ಇದರ ರಿಪೇರಿಗೆ 290 ಲಕ್ಷ ಪೌಂಡ್ ಅಂದಾಜು ವೆಚ್ಚ ನಿರ್ಧರಿಸಲಾಗಿದೆ. 315 ಅಡಿ ಎತ್ತರದ ಟವರ್‌ನಲ್ಲಿ ಇದನ್ನು ನಿರ್ಮಿಸುವ ಕಾರ್ಯ 1856ರಲ್ಲಿ ಪೂರ್ಣವಾಗಿತ್ತು.
ಗಂಟೆಯ ಮುಂಭಾಗ ಮತ್ತು ಯಂತ್ರರಚನೆ ಹಾಗೂ ಟವರ್‌ನ ಭಾಗಗಳಿಗೆ ಹಾನಿಯಾಗಿದ್ದು ದುರಸ್ತಿಕಾರ್ಯ ಅಗತ್ಯವಿದೆ. ಜೊತೆಗೆ ಗಡಿಯಾರಕ್ಕೆ 19ನೇ ಶತಮಾನದ ಮೂಲ ಬಣ್ಣ ನೀಡುವ ಅಗತ್ಯವೂ ಇದೆ.ಆದ್ದರಿಂದ 334 ಮೆಟ್ಟಿಲಿನ ಅಂದಾಜಿನಲ್ಲಿ ಟವರ್‌ನ ಮೇಲ್ಭಾಗ ತಲುಪಲು ಒಂದು ಲಿಫ್ಟ್ ಮಾಡುವ ಯೋಜನೆ ಕೂಡಾ ಹಾಕಿಕೊಳ್ಳಲಾಗಿದೆ.
ಈ ಟವರ್‌ನ ವಿನ್ಯಾಸವನ್ನು ಆರ್ಕಿಟೆಕ್ ಚಾರ್ಲ್ಸ್ ಬೆರಿ ಮತ್ತು ಆಗಸ್ಟಸ್ ವೆಲ್ಬಿ ಪುಗಿನ್ ಮಾಡಿದ್ದರು ಮತ್ತು ಇದನ್ನು ನಿರ್ಮಿಸಲು 13 ವರ್ಷ ಅವಧಿ ಹಿಡಿದಿತ್ತು. 2012ರಲ್ಲಿ ರಾಣಿಎಲಿಜಬೆತ್ ಗೌರವಾರ್ಥ ಈ ಟವರ್‌ಗೆ ರಾಣಿ ಎಲಿಜಬೆತ್ ಟವರ್ ಎಂದು ಹೆಸರಿಸಲಾಯಿತು. ಮೂರು ವರ್ಷದ ಯೋಜನೆಹಾಕಿಕೊಂಡು ಇದರ ರಿಪೇರಿ ನಡೆಯಲಿದೆ. ಯೋಜನೆ 2017ರಲ್ಲಿ ಪ್ರಾರಂಭಗೊಳ್ಳಲಿದೆ. ಆದರೆ ಗಡಿಯಾರ ಮೂರುವರ್ಷ ಬಂದ್ ಆಗಿರುವುದಿಲ್ಲ. ಬ್ರಿಟನ್ ಹೌಸ್‌ಆಫ್ ಕಾಮನ್ಸ್ ವಕ್ತಾರ ಅಗತ್ಯ ರಿಪೇರಿಗಾಗಿ ಗಡಿಯಾರದ ಯಂತ್ರ ರಚನೆ ದುರಸ್ತಿಗಾಗಿ ಕೆಲವು ತಿಂಗಳು ಅದನ್ನು ನಿಲ್ಲಿಸಲಾಗುವುದು. ಆದ್ದರಿಂದ ಗಡಿಯಾರ ಕೆಲವು ಸಮಯ ಗಂಟೆ ಹೊಡೆಯುವುದಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.







