ಮಂತ್ರವಾದಿ ಕೀಟನಾಶ ಕೊಟ್ಟು ತಂದೆ ತಾಯಿ ಮಗನ ಸಾವು! : ಇಬ್ಬರು ಹೆಮ್ಮಕ್ಕಳು ತಬ್ಬಲಿ!
.jpg)
ಹರ್ದೋಯಿ, ಎಪ್ರಿಲ್ 27: ಒಂದು ಕಡೆಮನುಷ್ಯ ಮಂಗಳ ಗ್ರಹಕ್ಕೆ ಹೋಗುತ್ತಿದ್ದಾನೆ ಇನ್ನೊಂದು ಕಡೆ ಮನುಷ್ಯ ಅಂಧವಿಶ್ವಾಸದ ಗುಂಡಿಗೆ ಬಿದ್ದಿದ್ದಾನೆ. ಇಂತಹ ಅಂಧವಿಶ್ವಾಸದಿಂದಾಗಿ ತಂದೆತಾಯಿಮಗ ಮೂವರು ಸಾವಿನ ದವಡೆಗೆ ತುತ್ತಾದ ಘಟನೆ ಇಲ್ಲಿಗೆ ಸಮೀಪದ ಗ್ರಾಮವೊಂದರಿಂದ ವರದಿಯಾಗಿದೆ. ಮಂತ್ರವಾದಿ ಬಾಬಾ ಸಲಹೆಯಂತೆ ಮನೆಯಜಮಾನ ಪತ್ನಿ ಮಗನಿಗೆ ಕೀಟನಾಶಕ ಕುಡಿಸಿ ತಾನು ಕುಡಿದಿದ್ದಾನೆ. ಹೀಗೆ ಮೂವರು ಸತ್ತಿದ್ದಾರೆ. ಸಲಹೆ ಇತ್ತ ಮಂತ್ರವಾದಿ ಓಡಿಹೋಗಿದ್ದಾನೆ. ಈಘಟನೆಯ ನಂತರ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು ಪೊಲೀಸರು ಮಂತ್ರವಾದಿಯನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್‌ವಾಲಿಶಾಹಬಾದ್ ಗ್ರಾಮದ ಕಕರ್‌ಘಾಟಾದಲ್ಲಿ ರಾಜೇಶ್ ಸಿಂಗ್‌ರ ಕುಟುಂಬ ವಾಸಿಸುತ್ತಿದ್ದು ಅವರಿಗೆ ಪತ್ನಿ ಮಗ ಮತ್ತು ಇಬ್ಬರು ಹೆಮ್ಮಕ್ಕಳು ಇದ್ದಾರೆ. ಬೆಳಗ್ಗೆ ಇಷ್ಟು ತಡವಾಗಿಯೂ ರಾಜೇಶ್ ಸಿಂಗ್ ಮನೆಯವರು ಏಳಲಿಲ್ಲ.ಆಗ ಹೆಮ್ಮಕ್ಕಳು ಹೋಗಿ ನೋಡುವಾಗ ರಾಜೇಶ್ ಸಿಂಗ್(45), ಪತ್ನಿ ಗೀತಾ(42), ಮತ್ತು ಮಗ ರೋಹಿತ್(18) ಪ್ರಜ್ಞೆ ಕಳಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಸಾಮುದಾಯಿಕ ಆಸ್ಪತ್ರೆಗೆ ತಲುಪಿಸಲಾಯಿತು. ರಸ್ತೆಯಲ್ಲಿಯೇ ಪತಿ ಮತ್ತು ಪತ್ನಿ ಸಾವನ್ನಪ್ಪಿದ್ದರೆ ಪುತ್ರ ಚಿಕಿತ್ಸೆಯ ವೇಳೆ ಮೃತನಾಗಿದ್ದ. ಈಗ ಪೊಲೀಸರು ಮಂತ್ರವಾದಿ ಬಾಬಾನನ್ನು ಹುಡುಕುತ್ತಿದ್ದಾರೆ. ರಾಜೇಶ್ ಬಿಳಿ ಕಲೆಯ ರೋಗ ಪೀಡಿತರಾಗಿದ್ದರು. ಬಾಬಾ ಅವರಿಗೆ ಕೀಟನಾಶಕವನ್ನು ಕೊಟ್ಟು ಇದನ್ನು ಕುಡಿದರೆ ಮನೆಯ ಎಲ್ಲರ ಎಲ್ಲ ರೋಗ ಗುಣಮುಖವಾಗುತ್ತದೆ ಎಂದು ಹೇಳಿದ್ದ. ಹೀಗೆ ಮನೆಯಲ್ಲಿ ತಂದೆ ತಾಯಿ, ಮಗ ಈ ಮದ್ದು ಸೇವಿಸಿ ಸತ್ತು ಹೋದರು ಎನ್ನಲಾಗಿದೆ. ಹೀಗೆ ಮಂತ್ರವಾದಿಯ ದುಷ್ಟ ಸಲಹೆಯಿಂದಾಗಿ ಅನ್ಯಾಯವಾಗಿ ಮೂವರ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ದಂಪತಿ ಮತ್ತು ಮಗನ ಸಾವಿನಿಂದಾಗಿ ಈಗ ಇಬ್ಬರು ಹೆಮ್ಮಕ್ಕಳು ಮಾತ್ರ ಈ ಕುಟುಂಬದಲ್ಲಿ ಉಳಿದಿದ್ದಾರೆಂದೂ ವರದಿ ತಿಳಿಸಿದೆ.
.jpg)





