ಭಾರತ್ ಮಾತಾ ಕಿ ಜೈ ಹೇಳಬಹುದು ತೊಂದರೆ ಇಲ್ಲ: ನಜ್ಮಾ ಹೆಫ್ತುಲ್ಲಾ

ಹೊಸದಿಲ್ಲಿ, ಎಪ್ರಿಲ್ 27: ಒಂದು ವೇಳೆ ಜನರು ಫಾರ್ಸಿಭಾಷೆಯಲ್ಲಿ ಮಾದ್ರೆ ವತನ್ ಉಚ್ಚಾರಣೆ ಮಾಡುತ್ತಾರೆಂದಿದ್ದರೆ ನಾವೇಕೆ ಹಿಂದಿಯಲ್ಲಿ ಭಾರತ್ ಮಾತಾ ಕಿಜೈ ಹೇಳಬಾರದು? ಹೀಗೆಂದು ನಜ್ಮಾ ಹೆಫ್ತುಲ್ಲಾ ಹೇಳಿರುವುದಾಗಿ ವರದಿಯಾಗಿದೆ. ಮುಸ್ಲಿಮರಿಗೆ ಭಾರತ್ ಮಾತಾ ಕಿ ಜೈ ಹೇಳುವುದಕ್ಕೆ ಕಿರಿಕಿರಿಯಾಗಬಾರದು. ವಿಭಜನೆಯ ಮುಸ್ಲಿಮರು ಈ ದೇಶವನ್ನು ತಮ್ಮದಾಗಿಸಿಕೊಂಡಿರುವುದರಿಂದಾಗಿ ಮುಸ್ಲಿಮರು ಇಲ್ಲಿನ ಪ್ರತಿಯೊಂದು ಶೈಲಿಯನ್ನು ತಮ್ಮದಾಗಿಸಬೇಕಾಗಿದೆ ಎಂದು ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.
ಆರೆಸ್ಸೆಸ್ ಪ್ರಮುಖ್ ಜೈ ಭಾರತ ಮಾತಾ ಕಿ ಹೇಳಲು ಹೊಸ ತಲೆಮಾರು ಕಲಿಯಬೇಕಾಗಿದೆ ಎಂದಿದ್ದರು. ಆನಂತರ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಬಲವಂತಪಡಿಸಿದರೂ ತಾನು ಭಾರತ್ ಮಾತಾಕಿ ಜೈ ಹೇಳಲಾರೆ ಎಂದು ವಿವಾದಕ್ಕೆ ತುಪ್ಪ ಸುರಿದಿದ್ದರು.
Next Story





