ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಡೆಗೋಡೆಗೆ ಶಿಲಾನ್ಯಾಸ

ಪುತ್ತೂರು: ಶಾಸಕರ ವಿಶೇಷ ಅನುದಾನದಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರೂ.50ಲಕ್ಷ ವೆಚ್ಚದಲ್ಲಿ ತಡೆಗೊಡೆ ರಚನೆಗೆ ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು.
ದೇವಳದ ಸಭಾಭವನದ ಬಳಿಯ ತೋಡಿಗೆ ನಿರ್ಮಾಣವಾಗಲಿರುವ ತಡೆಗೋಡೆ ಪಕ್ಕದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜಯಂತಿ ನಾಯಕ್, ಸದಸ್ಯ ಹೆಚ್. ಮಹಮ್ಮದ್ ಆಲಿ, ಆರ್ಯಾಪು ಸೊಸೈಟಿಯ ಸದಸ್ಯ ಸದಾನಂದ ಶೆಟ್ಟಿ ಕೂರೇಲು, ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್, ಮನಮೋಹನ್, ದೇವಳದ ಕಚೇರಿ ವ್ಯವಸ್ಥಾಪಕ ಜಗದೀಶ್ ಮತ್ತು ಸಣ್ಣನೀರಾವರಿ ಇಲಾಖೆ ಇಂಜಿನಿಯರ್ ಉಪಸ್ಥಿತರಿದ್ದರು.
Next Story





