ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಎ.29ಕ್ಕೆ ನರವಿಜ್ಞಾನ ಸಂಶೋಧನೆ ಹಾಗೂ ಸೇವಾ ಕೇಂದ್ರ ಉದ್ಘಾಟನೆ

ಕೊಣಾಜೆ: ದೇರಳಕಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ನರವಿಜ್ಞಾನ ಸಂಶೋಧನೆ ಹಾಗೂ ಸೇವಾ ಕೇಂದ್ರದ ಉದ್ಘಾಟನೆಯು ಎ.29ರಂದು ನಡೆಯಲಿದೆ.
ಅಮೇರಿಕ ಪಿಟ್ಸ್‌ಬರ್ಗ್‌ನ ಖ್ಯಾತ ಹೃದ್ರೋಗ ತಜ್ಞ ಡಾ,ಕೆ.ನಾರಾಯಣ ಶೆಟ್ಟಿಯವರು ತಮ್ಮ ಪತ್ನಿ ಲೀಲಾ ನಾರಾಯಣ ಶೆಟ್ಟಿಯವರ ಹೆಸರಿನಲ್ಲಿ ಈ ಕೇಂದ್ರವನ್ನು ಪ್ರಾಯೋಜಿಸಿದ್ದು, ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಇಡೀ ದ.ಕ ಜಿಲ್ಲೆ ಹಾಗೂ ಕೇರಳರಾಜ್ಯದ ಕರಾವಳಿಯ ಯಾವ ಕಡೆಯೂ ಇಲ್ಲದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಈ ಕೇಂದ್ರದಲ್ಲಿ ಲಭ್ಯವಾಗಲಿದೆ.
ನಿಟ್ಟೆ ವೈದ್ಯಕೀಯ ಶಿಕ್ಷಣ ಕಾಲೇಜಿನ ಕ್ಯಾಂಪಸ್‌ನಲ್ಲಿ ಎ.29ರ ಸಂಜೆ ಆರು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಡಾ.ನಾರಾಯಣ ಶೆಟ್ಟಿಯವರು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿರುವರು. ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು. ವಿವಿ ಕುಲಾಧಿಪತಿ ಡಾ.ವಿನಯ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





