ಕಾರ್ಕಳ: ಮಿನಿ ಬಸ್ಸು ಮತ್ತು ಸ್ವಿಫ್ಟ್ ಕಾರು ನಡುವೆ ಡಿಕ್ಕಿ ಓರ್ವ ಸಾವು
ಕಾರ್ಕಳ : ಮಿನಿ ಬಸ್ಸು ಮತ್ತು ಸ್ವಿಫ್ಟ್ ಕಾರು ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಪಕ್ಕಿಬೆಟ್ಟು ಎಂಬಲ್ಲಿ ಬುಧವಾರ ನಡೆದಿದೆ.
ಕಾರು ಚಾಲಕ ಉಜಿರೆ ನಿವಾಸಿ ದೀಕ್ಷಿತ್ (26) ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮಹಿಳೆ ಮತ್ತು ಮಗುವಿಗೆ ಗಂಭೀರ ಗಾಯಗೊಂಡಿದ್ದಾರೆ. ಉಜಿರೆಯಿಂದ ಬರುತ್ತಿದ್ದ ಕಾರಿಗೆ ಬಜಗೋಳಿ ಕಡೆ ತೆರಳುತ್ತಿದ್ದ ಮಿನಿ ಬಸ್ಸು ಡಿಕ್ಕಿ ಹೊಡೆದಿದೆ. ಕಾರು ಚಾಲಕ ಅತೀ ವೇಗದ ಚಾಲನೆಯಿಂದ ಓವರ್‌ಟೇಕ್ ಮಾಡಿರುವುದು ಈ ಘಟನೆಗೆ ಕಾರಣ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





