ಸುಡಾದ ಆದೇಶವಲ್ಲ, ರಾಜ್ಯ ಸರಕಾರದ ಹೊಸ ನಿರ್ಧಾರ
ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹ ವಿವಾದ
ಶಿವಮೊಗ್ಗ, ಎ. 27: ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಕಟ್ಟಡ ನಿರ್ಮಾಣಕ್ಕೆ ಲೈಸೈನ್ಸ್ ಪಡೆಯುವ ವೇಳೆ, ಹೊಸದಾಗಿ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುತ್ತಿರುವುದಕ್ಕೆ ಕೆಲ ಕಾರ್ಪೊರೇಟರ್‌ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸುಡಾದ ವಿರುದ್ಧ ಹರಿಹಾಯ್ದಿದು ಟೀಕಾಪ್ರಹಾರ ನಡೆಸಿದ್ದರು. ಅಂದು ಪಾಲಿಕೆ ಸಭೆಯಲ್ಲಿ ಉಪಸ್ಥಿತರಿದ್ದ ಸುಡಾದ ನಗರ ಯೋಜನಾ ಸಮಿತಿ ಸದಸ್ಯ (ಟಿ.ಪಿ.ಎಂ.) ಪ್ರಮೋದ್ ವಾಸು ದೇವ್ ಶೇಟ್‌ರವರ ವಿರುದ್ಧ ಕೆಲ ಕಾರ್ಪೊರೇಟರ್‌ಗಳು ಹರಿಹಾಯ್ದು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಸುಡಾವು ತುಘಲಕ್ ದರ್ಬಾರ್ ನಡೆಸುತ್ತಿದೆ. ನಾವೇಕೆ ಸುಡಾಕ್ಕೆ ಹಣ ಮಾಡಿಕೊಡಬೇಕು ಎಂಬಿತ್ಯಾದಿಯಾಗಿ ತರಾಟೆಗೆ ತೆಗೆದು ಕೊಂಡಿದ್ದರು. ಪ್ರಸ್ತುತ ಸಂಗ್ರಹಿಸುತ್ತಿರುವ ಕೆರೆ ಅಭಿವೃದ್ಧಿ ಶುಲ್ಕವು ಸರಕಾರದ ಆದೇಶವಾಗಿದೆ. ಸುಡಾದ ನಿರ್ಣಯವಲ್ಲ ಎಂದು ಟಿ.ಪಿ.ಎಂ. ಪ್ರಮೋದ್ ವಾಸುದೇವ್ ಶೇಟ್ ಸಭೆಯಲ್ಲಿ ಸ್ಪಷ್ಟನೆ ನೀಡಿದರೂ ಕೆಲ ಸದಸ್ಯರು ಮಾತ್ರ ಸುಡಾದ ವಿರುದ್ಧ ಹರಿಹಾ ಯುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಆದರೆ ಹೊಸದಾಗಿ ಸಂಗ್ರಹಿಸುತ್ತಿರುವ ಕೆರೆ ಅಭಿವೃದ್ಧಿ ಶುಲ್ಕವು ರಾಜ್ಯ ಸರಕಾರದ ಆದೇಶದಂತೆ ಸಂಗ್ರಹಿಸಲಾಗುತ್ತಿದೆಯೇ ಹೊರತು ಸುಡಾದ ನಿರ್ಣಯವಲ್ಲ ಎಂಬುದನ್ನು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಯಲ್ಲ. ಸರ ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಷಯವಾಗಿದೆ ಎಂದು ಹೇಳುತ್ತಾರೆ. ಅನ್ವಯ ಹೇಗೆ?: ಈ ಹಿಂದೆ ಬಡಾವಣೆ ಹಾಗೂ ಇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡುವ ವೇಳೆ ಯಾವುದೇ ರೀತಿ ಯ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿರಲಿಲ್ಲ. ಕಳೆದ ಹಲವು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುವ ಆದೇಶವನ್ನು ಸರಕಾರ ಜಾರಿಗೊಳಿಸಿದೆ. ಪ್ರಸ್ತುತ ಪ್ರತಿ ಎಕರೆಯ ಭೂ ಪರಿವರ್ತನೆಗೆ ಕೆರೆ ಅಭಿವೃದ್ಧಿ ಶುಲ್ಕವೆಂದು 1 ಲಕ್ಷ ರೂ. ಸಂಬಂಧಿಸಿದವರಿಂದ ವಸೂಲಿ ಮಾಡಲಾಗುತ್ತಿದೆ. ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುವ ಆದೇಶ ಬರುವುದಕ್ಕೂ ಮುನ್ನ ರಚನೆಯಾದ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ ಪರವಾನಿಗೆಗೆ ಬಂದಾಗ ಕೆರೆ ಅಭಿವೃದ್ಧಿ ಶುಲ್ಕವೆಂದು ಸಂಗ್ರಹಿಸಲಾಗುತ್ತಿದೆಯೇ ಹೊರತು ಎಲ್ಲ ಬಡಾವಣೆಗಳಿಗೂ ಅನ್ವಯಿಸುತ್ತಿಲ್ಲ. ಬಡಾವಣೆ ರಚನೆ ವೇಳೆ ಕೆರೆ ಅಭಿವೃದ್ಧಿ ಶುಲ್ಕ ಪಾವತಿ ಸಿದ್ದರೆ, ಅಂತಹ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರ ವಾನಿಗೆ ಕೋರಿದಾಗ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಸುಡಾದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ಹೊಸ ಆದೇಶವೇನು?: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ತಿದ್ದುಪಡಿ ಕಾಯ್ದೆ ಸೆಕ್ಷನ್ 18ಕ್ಕೆ ಇತ್ತೀಚೆಗೆ ರಾಜ್ಯ ಸರಕಾರ ತಿ ದ್ದುಪಡಿ ತಂದಿದೆ. ಅದರಂತೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯುವ ವೇಳೆ ಪ್ರತಿ ಚದುರ ಮೀಟರ್‌ಗೆ ಇಂತಿಷ್ಟು ಪ್ರಮಾ ಣದ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಸರಕಾರದ ತಿದ್ದುಪಡಿ ಆದೇಶವನ್ನು ಸುಡಾ ಸಭೆಯಲ್ಲಿಟ್ಟು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಆದೇಶದಂತೆ ಕಟ್ಟಡ ಪರವಾನಿಗೆ ಪಡೆಯುವ ವೇಳೆ ಕೆರೆ ಅಭಿವೃದ್ಧ್ದಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದು ಸುಡಾಕ್ಕೆ ಅನಿವಾರ್ಯ ಕೂಡ ಆಗಿದೆ.
ಸರಕಾರದ ಆದೇಶ ಉಲ್ಲಂಘನೆ ಮಾಡಲು ಆಗುವುದಿಲ್ಲ ಎಂಬುದು ಸುಡಾದ ಅಧಿಕಾರಿಗಳು ಹೇಳುತ್ತಾರೆ. ಪಾಲಿಕೆ ಸದಸ್ಯರಿಗೆ ಮಾಹಿತಿಯ ಕೊರತೆ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ತಿದ್ದುಪಡಿ ಕಾಯ್ದೆ ಸೆಕ್ಷನ್ 18ಕ್ಕೆ ಇತ್ತೀಚೆಗೆ ರಾಜ್ಯ ಸರಕಾರ ತಿದ್ದುಪಡಿ ತಂದಿದೆ. ಅದರಂತೆ ಕಟ್ಟಡ ಪರವಾನಿಗೆ ನೀಡುವ ವೇಳೆ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದು ಸುಡಾದ ಆದೇಶವಲ್ಲ. ಮಾಹಿತಿಯ ಕೊರತೆಯಿಂದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಸುಡಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರಬಹುದು.
<ಎನ್.ರಮೇಶ್, ಸುಡಾ ಅಧ್ಯಕ್ಷ
ಎಲ್ಲ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ
ಈ ಹಿಂದೆ ಬಡಾವಣೆ ಹಾಗೂ ಇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡುವ ವೇಳೆ ಯಾವುದೇ ರೀತಿಯ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿರಲಿಲ್ಲ. ಹಲವು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸುವ ಆದೇಶವನ್ನು ಸರಕಾರ ಜಾರಿಗೊಳಿಸಿದೆ. ಪ್ರಸ್ತುತ ಪ್ರತಿ ಎಕರೆಯ ಭೂ ಪರಿವರ್ತನೆಗೆ ಕೆರೆ ಅಭಿವೃದ್ಧಿ ಶುಲ್ಕವೆಂದು 1 ಲಕ್ಷ ರೂ. ಸಂಗ್ರಹಿಸಲಾಗುತ್ತಿದೆ. ಇಂತಹ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಕೋರಿದಾಗ ಈ ಶುಲ್ಕ ಸಂಗ್ರಹಿಸುವುದಿಲ್ಲ.
<ಪ್ರಮೋದ್ ವಾಸುದೇವ್ ಶೇಟ್, ಸುಡಾದ ನಗರ ಯೋಜನಾ ಸಮಿತಿ ಸದಸ್ಯ







