ವಿದ್ಯಾರ್ಥಿಗಳು ಸಾಧಕರ ಹೋರಾಟಗಳನ್ನು ತಿಳಿದುಕೊಳ್ಳಲಿ: ರವಿ ಡಿ. ಚೆನ್ನಣ್ಣನವರ್

ಶಿವಮೊಗ್ಗ, ಎ. 27: ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಮಾರ್ಪಾಡಾಗಬೇಕು. ಕಲಿಕೆಯ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಹೊರಹೊಮ್ಮಲು ಮಹಾಸಾಧಕರ ಅನುಭವ ಮತ್ತು ಹೋರಾಟಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಬಾಪೂಜಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾ ರೋಪದಲ್ಲಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪಬಾರದು. ಜೀವನವನ್ನು ಪರಿಪೂರ್ಣತೆಗೆ ಕೊಂಡೊಯ್ಯುವ ಶಿಕ್ಷಣದತ್ತ ಹೆಚ್ಚಿನ ಗಮನಹರಿಸಬೇಕು. ಈ ಮೂಲಕ ವಿದ್ಯಾರ್ಥಿ ಜೀವ ನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿ
<
ವಿಮಾತು ಹೇಳಿದರು. ಉತ್ತಮ ಗುಣ, ವೌಲ್ಯ ರೂಢಿಸಿಕೊಳ್ಳಿ. ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ ಬೆಳೆಸಿಕೊಳ್ಳಿ. ಸಮಾಜದಲ್ಲಿ ಜಾಗೃತಿ ಮೂಡಿಸಲು ಸನ್ನದ್ಧರಾಗಿ. ಸಮಾಜದಲ್ಲಿ ಬದ್ಧತೆ ಯುಳ್ಳ, ಜವಾಬ್ದಾರಿ ಪ್ರಜೆಯಾಗಿ ಮಾರ್ಪಾಡಾಗಿ. ಸಿನಿಕತೆಯ ಮನೋಭಾವದಿಂದ ಹೊರಬನ್ನಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳನ್ನು ಸತ್ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕಾಗಿ ಬೋಧನಾ ಕ್ರಮದಲ್ಲಿ ನಿರಂತರವಾಗಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು. ಸನ್ಮಾನ: ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಬಿಸಿಎ ವಿಭಾಗದಲ್ಲಿ ಕಾಲೇಜ್‌ಗೆ ರ್ಯಾಂಕ್ ತಂದ ಪ್ರೀತಿ, ಕಾವ್ಯಾ, ಪದ್ಮಾ, ಸಂದೀಪ್, ನಜ್ಮಬಾನು, ಕ್ರೀಡಾವಿಭಾಗದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಪವರ್ ಲಿಫ್ಟಿಂಗ್‌ನಲ್ಲಿ ಕಾಲೇಜ್‌ಗೆ ಕೀರ್ತಿತಂದ ತೀರ್ಥೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಂ.ಕೆ. ನಾರಾಯಣ ಸ್ವಾಮಿ, ಬೀರೂರಿನ ನಿವೃತ್ತ ಪ್ರಾಚಾರ್ಯ ಎಚ್.ಎಸ್. ಕೃಷ್ಣ ಮೂರ್ತಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇ ಶಕ ಎ.ಎಲ್. ಮುರುಳಿಧರ್, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ತಿಮ್ಮಪ್ಪಯ್ಯ, ಸಾವಿತ್ರಮ್ಮ, ಸುರೇಶ್, ಆಸಿಫ್ ಸೇರಿದಂತೆ ಉಪಸ್ಥಿತರಿದ್ದರು.







