ಸಾವಯವ ಗೊಬ್ಬರದ ಅರಿವು ಕಾರ್ಯಕ್ರಮ

ಚಿಕ್ಕಮಗಳೂರು, ಎ.27: ತಾಲೂಕಿನ ಕೆ.ಆರ್.ಪೇಟೆ ಗ್ರಾಮದ ಪ್ರಗತಿಪರ ರೈತ ಅಣ್ಣಯ್ಯ ಆಚಾರಿ ಅವರ ತೋಟದಲ್ಲಿ ಸಾವಯವ ಗೊಬ್ಬರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನವಭಾರತ ಫರ್ಟಿಲೈಸರ್ಸ್ ಕಂಪೆನಿಯ ವತಿಯಿಂದ ನಡೆಸಲಾಯಿತು.
ಪ್ರಗತಿಪರ ರೈತ ಅಣ್ಣಯ್ಯ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಸಾವಯವ ಗೊಬ್ಬರಗಳಾದ ವಿಜಯ ಗ್ರೊಮಿನ್, ವಿಂಜೈಮ್-ಜಿ, ವಿಜೇತ, ಖಜಾನ ಈ ಸಾವಯವ ಉತ್ಪನ್ನಗಳನ್ನು ಬಳಸುವುದರಿಂದ ತಮ್ಮ ಭೂಮಿಯಲ್ಲಿ ಎರೆಹುಳು ಮತ್ತು ಸೂಕ್ಷ್ಮ ಜೀವಿಗಳ ಸಂತತಿಯನ್ನು ಕಾಪಾಡಲಾಗುತ್ತದೆ ಎಂದು ತಿಳಿಸಿದರು.
ರೈತರು ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಉತ್ತಮವಾದ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ ಭೂಮಿಯ ಫಲವತ್ತತೆಯನ್ನು ಕುಂದಿಸುತ್ತಾ ಅದರ ಸಾರಾಂಶವನ್ನು ರಾಸಾಯನಿಕ ಗೊಬ್ಬರಗಳು ಹಾಳು ಮಾಡುತ್ತಿವೆ. ತಮ್ಮ ಮುಂದಿನ ಪೀಳಿಗೆಗಾಗಿ ಸಾವಯವ ಗೊಬ್ಬರವನ್ನು ಬಳಸೋಣ ಎಂದು ಹೇಳಿದರು.
ಕಂಪೆನಿಯ ಸರ್ವಿಸ್ ಮ್ಯಾನೇಜರ್ ಶ್ರೀಧರ್ ಮಾತನಾಡಿ, ಮುಂದಿನ ಯುವಪೀಳಿಗೆಗಾಗಿ ಅತಿಹೆಚ್ಚಾಗಿ ಸಾವಯವ ಗೊಬ್ಬರ ಗಳನ್ನು ಬಳಸಬೇಕು. ಕಂಪೆನಿಯ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ, ಸಾವಯವ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಎಂದು ರೈತರಿಗೆ ತಿಳಿಸಿದರು.
ಕಂಪೆನಿಯ ಎಂ.ಪಿ.ದಯಾನಂದ, ಲೋಹಿತ್‌ಕುಮಾರ್, ಮಧು, ಗಿರೀಶ್‌ನಾಯ್ಕ, ರೈತರಾದ ತಮ್ಮಣ್ಣಗೌಡ, ಮಹೇಶ್, ಮಂಜಪ್ಪಶೆಟ್ಟಿ, ಕಲ್ಲೇಶ್, ಶಬ್ಬೀರ್‌ಗೆಂಡೇಹಳ್ಳಿ, ಕರಿಯಪ್ಪಗೌಡ, ಯೋಗೀಶ್, ನವನೀತ್, ಲೋಕೇಶ್, ರಾಜು ಮತ್ತಿತರರು ಉಪಸ್ಥಿತರಿದ್ದರು.







