ದಕ್ಷಿಣ-ಪಶ್ಚಿಮ ದಿಲ್ಲಿ ನಗರಪಾಲಿಕೆಗಳ ಮೇಯರ್,ಉಪಮೇಯರ್ ಸ್ಥಾನ ಬಿಜೆಪಿಗೆ
ಹೊಸದಿಲ್ಲಿ, ಎ.27: ಎಸ್‌ಡಿಎಂಸಿ ಹಾಗೂ ಇಡಿಎಂಸಿಗಳ ಮೇಯರ್ ಚುನಾವಣೆಗಳಲ್ಲಿ ಬಿಜೆಪಿ ಕೌನ್ಸಿಲರ್‌ಗಳು ವಿಜಯ ಸಾಧಿಸಿದ್ದಾರೆ.
ಬಿಜೆಪಿಯ ಕೌನ್ಸಿಲರ್ ಶ್ಯಾಂಶರ್ಮ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು 25 ಮತಗಳಿಂದ ಸೋಲಿಸಿ ದಕ್ಷಿಣ ದಿಲ್ಲಿಯ ಮೇಯರ್ ಆಗಿ ಆಯ್ಕೆಯಾದರು
ಪಶ್ಚಿಮ ದಿಲ್ಲಿ ನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಸತ್ಯಾ ಶರ್ಮ 41 ಮತ ಪಡೆದು 18 ಮತ ಗಳಿಸಿದ ಕಾಂಗ್ರೆಸ್ ಎದುರಾಳಿ ತಾಜ್ ಮುಹಮ್ಮದ್‌ರನ್ನು ಸೋಲಿಸಿದರು.
ಈ ಎರಡೂ ನಗರ ಪಾಲಿಕೆಗಳ ಉಪಮೇಯರ್ ಸ್ಥಾನಗಳೂ ಬಿಜೆಪಿ ಕೌನ್ಸಿಲರ್‌ಗಳಿಗೆ ದಕ್ಕಿವೆ.
ಮಧ್ಯ ದಿಲ್ಲಿ ನಗರ ಪಾಲಿಕೆ ಕಳೆದ 10 ವರ್ಷಗಳಿಂದಲೂ ಬಿಜೆಪಿಯ ವಶದಲ್ಲೇ ಇದೆ.
Next Story





