. ನಾಳೆ ನರವಿಜ್ಞಾನ ಸಂಶೋಧನೆ ಹಾಗೂ ಸೇವಾ ಕೇಂದ್ರ ಉದ್ಘಾಟನೆ

ಮಂಗಳೂರು, ಎ.27: ದೇರಳ ಕಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಞಟೇಬಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ನರವಿಜ್ಞಾನ ಸಂಶೋಧನೆ ಹಾಗೂ ಸೇವಾ ಕೇಂದ್ರ ಎ.29ರಂದು ಲೋಕಾರ್ಪಣೆಗೊಳ್ಳಲಿದೆ.
ಅಮೆರಿಕ ಪಿಟ್ಸ್‌ಬರ್ಗ್‌ನ ಖ್ಯಾತ ಹೃದ್ರೋಗ ತಜ್ಞ ಡಾ. ಕೆ.ನಾರಾಯಣ ಶೆಟ್ಟಿ ತಮ್ಮ ಪತ್ನಿ ಲೀಲಾ ನಾರಾಯಣ ಶೆಟ್ಟಿಯ ಹೆಸರಿನಲ್ಲಿ ಈ ಕೇಂದ್ರವನ್ನು ಪ್ರಾಯೋಜಿಸಿದ್ದು, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಕರಾವಳಿಯ ಯಾವ ಕಡೆಯೂ ಇಲ್ಲದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಈ ಕೇಂದ್ರದಲ್ಲಿದೆ.
ನಿಟ್ಟೆ ವೈದ್ಯಕೀಯ ಶಿಕ್ಷಣ ಕಾಲೇಜಿನ ಕ್ಯಾಂಪಸ್‌ನಲ್ಲಿ ಸಂಜೆ 6:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಡಾ.ನಾರಾಯಣ ಶೆಟ್ಟಿ ಕೇಂದ್ರವನ್ನು ಉದ್ಘಾಟಿಸುವರು. ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿರುತ್ತಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು.
ನರ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡಲು ಈ ಕೇಂದ್ರದ ಅತ್ಯಾಧುನಿಕ ತಂತ್ರಜ್ಞಾನ ಪ್ರಯೋಜನಕಾರಿಯಾಗಲಿದೆ. ದೃಷ್ಟಿ ದೋಷಕ್ಕೂ ಕಾರಣವಾಗುವ ಇಂಥ ನರರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಅಮೆರಿಕದ ವಿಇಆರ್‌ಐಎಸ್ ಸೈನ್ಸ್ ಎಂಬ ವಿಶಿಷ್ಟ ಯಂತ್ರ ದೇಶದ ಎಂಟು ಕಡೆಯಲ್ಲಿ ಮಾತ್ರ ಇದ್ದು, ದೃಷ್ಟಿ ಸ್ಪಂದನೆ ಇಮೇಜಿಂಗ್ (ಇಆರ್‌ಜಿ)ಗೆ ಇದು ಬಳಕೆಯಾಗಲಿದೆ. ಹೈಡಲ್‌ಬರ್ಗ್ ಸ್ಪೆಕ್ಟ್ರಲೈಸ್ ಆಪ್ಟಿಕಲ್ ಕೊಹೆರೆನ್ಸ್ ಟೊಮೊಗ್ರಫಿ ಘಟಕ ಇನ್ನೊಂದು ಇಂಥ ವಿಶಿಷ್ಟ ಯಂತ್ರವಾಗಿದ್ದು, ಇದು ಕಣ್ಣಿನ ಸ್ವಯಂಚಾಲಿತ ಟ್ರ್ಯಾಕಿಂಗ್ ಮಾಡುವ ಯಂತ್ರವಾಗಿದೆ. ಕಣ್ಣಿನ ರೆಟಿನಾ ನರದ ಫೈಬರ್ ಪದರದ ವಿಶ್ಲೇಷಣೆ ಮಾಡುವ ಸಾಫ್ಟ್‌ವೇರನ್ನು ಕೂಡಾ ಇದು ಒಳಗೊಂಡಿದೆ.
ಸಂಪೂರ್ಣ ಸ್ವಯಂಚಾಲಿತ ಕಾರ್ಯ ನಿರ್ವಹಣೆ ಮೌಲ್ಯಮಾಪನ ಘಟಕ (ಇಟೆಲಿಯ ಸ್ಪಾರ್ಕ್‌ಬಯೊ ಬೊಲ್‌ಗ್ಲಾ) ಕೂಡಾ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಇಲ್ಲಿ ಆರಂಭವಾಗುತ್ತಿದೆ. ಇದು ರೋಗಿಗಳ ನರವ್ಯೆಹ ನಿಷ್ಕ್ರಿಯತೆಯ ಮೌಲ್ಯ ಮಾಪನಕ್ಕೆ ನೆರವಾಗುತ್ತದೆ. ಅಲ್ಲದೆ ವಿಶಾಲವಾದ ನ್ಯೂರೊ ಪುನರ್ವಸತಿ ಕೇಂದ್ರ ಕೂಡಾ ಇದ್ದು, ಇದರಲ್ಲಿ ಪಾರ್ಶ್ವವಾಯು ಪೀಡಿತ ರೋಗಿಗಳಿಗೆ ವಿಶೇಷ ಆರೈಕೆ ನೀಡಲಾಗುತ್ತದೆ. ಇದರ ಜತೆಗೆ ಪಾರ್ಕಿನ್ಸನ್ ರೋಗ ಹಾಗೂ ಮಲ್ಟಿಪಲ್ ಸ್ಕೆರಾಸಿಸ್ ರೋಗಿಗಳ ಚಿಕಿತ್ಸೆಗೂ ವಿಶೇಷ ಘಟಕ ಇಲ್ಲಿ ಇರುತ್ತದೆ. ಅಮೆರಿಕದ ಬಯೊಡೆಕ್ಸ್ ಎಂಬ ಕಂಪೆನಿಯ ವಿಶೇಷ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇದು ಫ್ರೀಸ್ಟೆಪ್ ಬೆಂಬಲಿತ ಆ್ಯಂಬುಲೇಶನ್ ವ್ಯವಸ್ಥೆಯಾಗಿದ್ದು, ಈ ಯಂತ್ರದ ಮೂಲಕ ರೋಗಿಗಳು ವಿಶಿಷ್ಟವಾದ ಓವರ್‌ಹೆಡ್ ಟ್ರ್ಯಾಕ್‌ನ ನೆರವು ಪಡೆಯಲು ಅನುಕೂಲವಾಗುತ್ತದೆ. ಈ ಕೇಂದ್ರದಲ್ಲಿ ವಿಶೇಷವಾದ ವ





