ಪಾಕಿಸ್ತಾನ: ಭಯೋತ್ಪಾದನೆ ಕೃತ್ಯದಲ್ಲಿ ಭಾರತದ ಹಸ್ತ ಇರುವುದು ಹೊಸ ವಿಷಯವಲ್ಲ: ಮಾಜಿ ವಿದೇಶ ಸಚಿವೆ ಹೀನಾ ರಬ್ಬಾನಿ ಖರ್

ಪ್ಯಾರಿಸ್, ಎಪ್ರಿಲ್ 28: ಪಾಕಿಸ್ತಾನದ ಮಾಜಿ ವಿದೇಶ ಸಚಿವೆ ಹೀನಾ ರಬ್ಬಾನಿ ಖರ್ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲ್ಲಿ ಭಾರತದ ಗುಪ್ತಚರ ಇಲಾಖೆ ರಾದ ಪಾತ್ರ ಇರುವುದು ಹೊಸ ವಿಷಯವಲ್ಲ. ಮತ್ತು ಇದು ನಿರಾಕರಿಸಲು ಸಾಧ್ಯವಿಲ್ಲದ ಒಂದು ವಾಸ್ತವಿಕತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಬಿಬಿಸಿ ಉರ್ದುಟಿವಿಯ ಕಾರ್ಯಕ್ರಮ ಸೈರ್‌ಬೀನ್‌ನಲ್ಲಿ ಅವರು ಪಾಕಿಸ್ತಾನದೊಳಕ್ಕೆ ಭಾರತೀಯರು ನುಸುಳುತ್ತಿರುವ ವಿಚಾರವನ್ನು ಮುಂದಿಟ್ಟಿದ್ದಾರೆ" ಹೆಚ್ಚು ಮಾಹಿತಿ ಗೃಹ ಸಚಿವರ ಬಳಿಯೇ ಇರುತ್ತದೆ. ಆದರೆ ನನಗೆ ಗೊತ್ತಿರುವ ಪ್ರಕಾರ ಬಲೂಚಿಸ್ತಾನ ಮತ್ತು ಅಫ್ಘಾನಿಸ್ತಾನ ಮೂಲಕ ಭಾರತ ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಾಬಂದಿದೆ ಮತ್ತು ಪಾಕಿಸ್ತಾನದಲ್ಲಿ ಆಗುವ ಭಯೋತ್ಪಾದಕ ಘಟನೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅದರ ಪಾತ್ರ ವಿರುವುದು ಕಾಣಿಸುತ್ತಿದೆ. ಇದು ನಿರಾಕರಿಸಲಾಗದಂತಹ ವಾಸ್ತವಿಕತೆಯಾಗಿದೆ ಎಂದು ಹೀನಾ ಹೇಳಿದ್ದಾರೆ. ಅದೇ ವೇಳೆ ಭಾರತ ಕೂಡಾ ಪಾಕಿಸ್ತಾನ ಭಾರತದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನದ ಹಸ್ತವಿದೆ ಎಂದು ಹೇಳುತ್ತಿರುತ್ತದೆ ಎಂದು ಹೀನಾ ಅಭಿಪ್ರಾಯಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸ್ಥಿರ ಶಾಂತಿಯ ಕುರಿತು ಅವರು ಮಾತಾಡುತ್ಥಾ ಒಂದು ವೇಳೆ ಯಾವುದೇ ದೇಶ ಇನ್ನೊಂದು ದೇಶದಲ್ಲಿ ಬೆಂಕಿ ಹಚ್ಚಿದರೆ ತನ್ನ ದೇಶ ಉರಿಯದು ಎಂದು ಭಾವಿಸಿದರೆ ಇದು ತಪ್ಪಾಭಿಪ್ರಾಯವಾಗಿದೆ" ಅವರ ಪ್ರಕಾರ ಇಂತಹ ತಂತ್ರಗಾರಿಕೆ ರಾಷ್ಟ್ರ ಹಿತಕ್ಕೆ ಹಾನಿಕಾರಕವಾಗಿದೆ.
ಸಂಧಿ ಮತ್ತು ಸ್ನೇಹ ವಾಗುತ್ತಿದೆ ಅನಿಸುವಾಗಲೇ ಪರಿಸ್ಥಿತಿ ಹದಗೆಡುವ ಕುರಿತು ಅವರು "ಎರಡು ದೇಶಗಳ ಸರಕಾರಗಳು ಮತ್ತು ಜನರಲ್ಲಿ ಶಾಂತಿಗೆ ಬೇಕಾದಂತಹ ತತ್ವಗಳಿಲ್ಲ. ಅವರು ಸಂಬಂಧವನ್ನು ತಮ್ಮ ವಿಚಾರಧಾರೆಗಳ ಪ್ರಕಾರ ನೋಡುತ್ತಿದ್ದಾರೆ. ಶಾಂತಿಯ ಮಾತು ಆಡಲೇ ಬಾರದು ಎಂಬಂತೆ ಹಲವು ಘಟನೆಗಳು ನಡೆಯುತ್ತವೆ ನಮಗೆ ಒಂದು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೀನಾ ಹೇಳಿರುವುದಾಗಿ ವರದಿಯಾಗಿದೆ.







