ನೀರಿಲ್ಲದೆ ಲಾತೂರ್‌ನಲ್ಲಿ ಫ್ಯಾಕ್ಟರಿಗಳಿಗೆ ಬೀಗ,ಜನರಿಗೆ ನಿರುದ್ಯೋಗ, ಕೋಟ್ಯಂತರ ರೂ. ನಷ್ಟ!

ಲಾತೂರ್, ಎಪ್ರಿಲ್ 28: ಮಹಾರಾಷ್ಟ್ರದ ನೀರಿನ ಬರ ಎಷ್ಟು ಭೀಕರ ಪರಿಣಾಮಕ್ಕೆ ಕಾರಣವಾಗಿದೆ ಎಂಬುದು ಇಂದು ಎಲ್ಲರಿಗೂ ಗೊತ್ತಿದೆ. ಅಲ್ಲೀಗ ಹಲವು ಕಾರ್ಖಾನೆ ಮತ್ತು ಫ್ಯಾಕ್ಟರಿಗಳು ಬೀಗ ಹಾಕಿವೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಎಲೆಲ್ಲಿಂದ ಬಂದು ಇಲ್ಲಿ ಕೆಲಸಮಾಡುತ್ತಿದ್ದವರು ಊರಿಗೆ ಮರಳಿದ್ದಾರೆ. ಸಾವಿರಾರು ಮಂದಿಯ ರಶ್ಶು ಇದ್ದ ಪ್ಯಾಕ್ಟರಿಗಳು ನಿರ್ಜನವಾಗಿದೆ ಎಂದು ವರದಿಯಾಗಿದೆ.
1700 ಮಂದಿಗೆ ಕೆಲಸಕೊಡುತ್ತಿದ್ದ ಲಾತೂರ್‌ನ ಸ್ಟೀಲ್ ಪ್ಲಾಂಟ್ ಮುಚ್ಚಲಾಗಿದೆ. 2011ರವರೆಗೆ ಉಕ್ಕುಕಾರ್ಖಾನೆ ವ್ಯವಹಾರದಲ್ಲಿ ಮಹೇಳ್ ಮಲಂಗ್ ಮಹಾರಾಷ್ಟ್ರದಲ್ಲಿ ಬಹುದೊಡ್ಡ ಕುಳವಾಗಿದ್ದರು. ಮಲಂಗ್‌ರು ನೂರುಕೋಟಿರೂಪಾಯಿ ಬಂಡವಾಳ ಹೂಡಿ ಈ ಪ್ಯಾಕ್ಟರಿಯನ್ನು ತೆರೆದಿದ್ದರು. ಪ್ರತಿದಿನ 300ಟನ್ ಕಬ್ಬಿಣ ಉತ್ಪಾದನೆಯಾಗುತ್ತಿತು. ಇದರಲ್ಲಿ 1700 ಕಾರ್ಮಿಕರು ಇದ್ದರು. ಆದರೆ ಈಗ ಸ್ಟೀಲ್ ಪ್ಲಾಂಟ್ ಮುಚ್ಚುಗಡೆಯಾಗಿದೆ. ನೌಕರರು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಯಾಕೆಂದರೆ ಕುಡಿಯಲು ಅಲ್ಲಿ ನೀರಿಲ್ಲದು ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಈಗ ಇಲ್ಲಿ ಕೇವಲ ಇಬ್ಬರು ಕಾರ್ಮಿಕರು ಉಳಿದುಕೊಂಡಿದ್ದಾರೆ. ಒಬ್ಬರು ಲಾತೂರ್‌ನವರು. ಇನ್ನೊಬ್ಬರು ಮ್ಯಾನೇಜರ್ ಸುಧೀರ್ ವಾಡ್‌ಗಾಂವ್‌ಕರ್. ಇವರಲ್ಲದೆ ಪ್ಲಾಂಟ್‌ನಲ್ಲಿ ಕೆಲಸ ಮಾಡಲು ಇನ್ನು ಯಾರೂ ಇಲ್ಲ ಇಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ನೌಕರರೇ ತುಂಬಿಕೊಂಡಿದ್ದರು. ನೀರಿನ ಸಮಸ್ಯೆ ತಲೆದೋರಿದ್ದೇ ತಡ ಅವರು ಕೆಲಸ ಬಿಟ್ಟು ಹೊರಟು ಹೋಗಿದ್ದಾರೆ. ಲಕ್ಷ್ಮಣ್ ಜಾಧವ್ ಪ್ಲಾಂಟ್‌ನ ಹೊರಗೆ ಕ್ಯಾಂಟಿನ್ ಇಟ್ಟುಕೊಂಡಿದ್ದರು. ಪ್ಲಾಂಟ್‌ನ ನೌಕರರು ಅಲ್ಲಿಗೆ ಊಟ ಮಾಡಲು ಚಾಕುಡಿಯಲು ಬರುತ್ತಿದ್ದರು. ಲಾರಿಡ್ರೈವರ್‌ಗಳು ಹೆಲ್ಪರ್‌ಗಳು ಚಾನಾಷ್ಟಕ್ಕೆ ಅಲ್ಲಿ ನೆರೆಯುತ್ತಿದ್ದರು. ಲಕ್ಷ್ಮಣ ಜಾಧವ್‌ರ ಪ್ರಕಾರ ಹತ್ತು ಹದಿನೈದು ಸಾವಿರ ರೂಪಾಯಿ ವ್ಯವಹಾರವಿತ್ತು. ಈಗ ದಿನದಲ್ಲಿ ಇನ್ನೂರು ಮುನ್ನೂರು ರೂಪಾಯಿ ವ್ಯಾಪಾರಕ್ಕೂ ಕಷ್ಟವಾಗುತ್ತಿದೆ.
ಲಾತೂರ್ ಎಸೋಸಿಯೇಶನ್ ಆಫ್ ಸ್ಮಾಲ್ ಇಂಡಸ್ಟ್ರಿ ಅಧ್ಯಕ್ಷ ಶಿವರಾಜಿ ನರಹಾರೆ ಈ ಸ್ಟೀಲ್ ಫ್ಲಾಂಟ್‌ನ ರೀತಿಯಲ್ಲಿ ಹಲವು ಕೃಷಿ ಆಧಾರಿತ ಕಾರ್ಖಾನೆಗಳು ಮುಚ್ಚಿವೆ. ಕುಡಿಯಲಿಕ್ಕೂ ನೀರು ಸಿಗದಿರುವುದು ಕಾರ್ಖಾನೆಗಗಳುಮುಚ್ಚಿಹೋಗಲು ಕಾರಣವಾಗಿದೆ ಎಂದು ಅವರು ತಿಳಿಸಿದರೆಂದು ವರದಿಯಾಗಿದೆ.





