ಇಲ್ಲಿ ಎರಡನೆ ಮದುವೆಗಾಗಿ ವಧುವಿನ ಮೇಲೆ ಒಂದು ಲೋಟ ಬಿಸಿ ನೀರು ಹಾಕಿ ಪವಿತ್ರಗೊಳಿಸಲಾಗುತ್ತದೆ!

ಛತ್ತೀಸ್‌ಗಢ, ಎಪ್ರಿಲ್ 28: ದೇಶದ ಬೇರೆ ಜನಜಾತಿಗಳ ರೀತಿ ರಿವಾಜುಪರಂಪರೆಗಳು ಬೇರೆ ಬೇರೆಯೇ ಆಗಿದೆ. ಛತ್ತೀಸ್‌ಗಡದಲ್ಲಿ ಅತಿಹೆಚ್ಚು ಆದಿವಾಸಿಗಳು ಕಂಡುಬರುತ್ತಾರೆ. ಈ ರಾಜ್ಯದಲ್ಲಿ ಬೆಂಗ್ ಎಂಬೊಂದು ಆದಿವಾಸಿ ಸಮಾಜ ಇದೆ. ಬಸ್ತರ್‌ನಲ್ಲಿ ಅವರು ವಾಸಿಸುತ್ತಿದ್ದ ಇತರ ಜನಜಾತಿಗಳವರೊಡನೆ ಅವರು ಇಚ್ಛಿಸುವುದಿಲ್ಲ. ಪ್ರತ್ಯೇಕವಾಗಿ ವಾಸಿಸಲು ಬಯಸುವ ಗೋತ್ರವರ್ಗ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ಬೆಂಗ್ ಸಮಾಜದಲ್ಲಿ ಮಹಿಳೆರಿಗೆ ಬಹಳ ಆದರ ನೀಡಲಾಗುತ್ತದೆ. ಇಲ್ಲಿ ಹುಡುಗ-ಹುಡುಗಿಯರು ಪ್ರೇಮವಿವಾಹವಾಗುವುದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಹುಡುಗಿ ತನ್ನ ಜೀವನ ಸಂಗಾತಿಯನ್ನು ಹುಡುಕಿಕೊಳ್ಳುತ್ತಾಳೆ. ಮದುವೆಗೆ ಮೊದಲು ಸಂಬಂಧ ಇರಿಸಿಕೊಳ್ಳುವುದಕ್ಕೂ ಇವರಲ್ಲಿ ಅಡ್ಡಿಯಿಲ್ಲ. ಶಾರೀರಿಕ ಸಂಬಂಧ ಇರಿಸಿಕೊಂಡ ವಿಚಾರ ತಂದೆತಾಯಿಯರಿಗೆ ಗೊತ್ತಾದರೆ ಅವರ ಮದುವೆ ನಡೆಸಿಬಿಡುತ್ತಾರೆ.
ಇಲ್ಲಿ ಹುಡುಗಿ ಎರಡನೆ ವಿವಾಹ ಮಾಡಿಕೊಳ್ಳಲು ಬಯಸಿದರೆ ಅವಳ ಮೇಲೆ ಒಂದು ಲೋಟ ಬಿಸಿ ನೀರು ಹಾಕಿ ಪವಿತ್ರಗೊಳಿಸಲಾಗುತ್ತದೆ. ಹುಡುಗಿಯರು ತಾವು ಇಚ್ಛಿಸಿದ ಹುಡುಗನ ಮನೆಗೆ ಹೋಗಿ ಮದುವೆ ಪ್ರಸ್ತಾಪ ಮಾಡಬಹುದಾಗಿದೆ. ಬೆಂಗ್ ಸಮಾಜದಲ್ಲಿ ಪೂರ್ಣ ವಿವಾಹ ಮತ್ತು ವಿಧವಾ ವಿವಾಹ ಕೂಡಾ ಸಾಮಾನ್ಯವಾಗಿದೆ.
ಮದುವೆ ಆಗಬಯಸುವ ಹುಡುಗಿ ತನ್ನ ಇಚ್ಛೆಯ ಹುಡುಗನ ಮನೆಗೆ ಹೋಗಿ ಅವನ ಮೇಲೆ ಹಳದಿ ಮತ್ತು ಅಕ್ಕಿ ಹಾಕುತ್ತಾಳೆ ಇದರ ಅರ್ಥ ಹುಡುಗನನ್ನು ಅವಳು ಮದುವೆಯಾಗಲು ಬಯಸುತ್ತಿದ್ದಾಳೆ ಎಂದು. ಮದುವೆಯಲ್ಲಿ ಹುಡುಗಿಕಡೆಯವರುಹುಡುಗನ ಕಡೆಯವರಿಂದ ಮುನ್ನೂರು -ನಾನೂರು ರೂಪಾಯಿ ಖರ್ಚಿಗೆ ವಸೂಲುಮಾಡುತ್ತಾರೆ. ಹುಡುಗ ತಂದೆ ಹಣಕೊಡದಿದ್ದರೆ ಹುಡುಗ ತನ್ನ ಮಾವನ ಮನೆಯಲ್ಲಿ ಮೂರು ವರ್ಷದವರೆ ಇರಬೇಕಾಗುತ್ತದೆ. ಒಂದು ವೇಳೆ ಹುಡುಗಿಯ ಕಡೆಯವರು ಹಣ ಕೊಟ್ಟರೆ ವಿವಾಹವನ್ನು ಗಮ್ಮತ್ತಾಗಿ ಮಾಡಿಕೊಳ್ಳುತ್ತಾರೆ.







