Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೊನೆಗೂ ಬಹಿರಂಗ: ಮಾಜಿ ಪ್ರಧಾನಿ...

ಕೊನೆಗೂ ಬಹಿರಂಗ: ಮಾಜಿ ಪ್ರಧಾನಿ ದೇವೇಗೌಡರು ಸದಾ ತೂಕಡಿಸುತ್ತಿದ್ದುದರ ಹಿಂದಿನ ರಹಸ್ಯ!

ವಾರ್ತಾಭಾರತಿವಾರ್ತಾಭಾರತಿ28 April 2016 5:33 PM IST
share
ಕೊನೆಗೂ ಬಹಿರಂಗ: ಮಾಜಿ ಪ್ರಧಾನಿ ದೇವೇಗೌಡರು ಸದಾ ತೂಕಡಿಸುತ್ತಿದ್ದುದರ ಹಿಂದಿನ ರಹಸ್ಯ!

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಸದಾ ತೂಕಡಿಸುತ್ತಿದ್ದುದರ ಹಿಂದಿನ ರಹಸ್ಯ ಕೊನೆಗೂ ಬಯಲಾಗಿದೆ. ವಿಶಿಷ್ಟವಾದ ಗೌಡರ ಅಡುಗೆಯನ್ನು ಪುಷ್ಕಳವಾಗಿ ಮೆಲ್ಲುತ್ತಿದ್ದರೆ ಖಂಡಿತವಾಗಿಯೂ ನೀವು ಕೂಡಾ ತೂಕಡಿಸುತ್ತೀರಿ. ಗೌಡರ ಶೈಲಿಯ ವೈವಿಧ್ಯಮಯ ಊಟ ಸವಿಯುವ ಅವಕಾಶವನ್ನು ಬೆಂಗಳೂರು ಊಟ ಕಂಪನಿ (ಬಿಓಸಿ) ಕಲ್ಪಿಸಿಕೊಟ್ಟಿದೆ. ಮಂಗಳೂರು ಶೈಲಿ ಹಾಗೂ ಗೌಡ ಸಂಪ್ರದಾಯದ ಪಾಕ ವೈವಿಧ್ಯವನ್ನು ಬಾಯಿ ಚಪ್ಪರಿಸುತ್ತಾ ಸವಿಯಬೇಕಾದರೆ ಬಿಓಸಿಗೊಮ್ಮೆ ಭೇಟಿ ಕೊಡಿ,

ಊಟದ ಕೊನೆಗೆ ಅಜ್ಜಿ ಜಾಮೂನು. ಅಮ್ಮಾನಿ ಜಾಮೂನು ಹೆಸರಿನ ಈ ವಿಶಿಷ್ಟ ಖಾದ್ಯದ ಕೈರುಚಿ ಗೌಡರ ಮನೆಯ ಹೆಣ್ಣುಮಕ್ಕಳಿಗಷ್ಟೇ ಸೀಮಿತ. ಇಂಥ ಜಾಮೂನು ಮತ್ತೆಲ್ಲೂ ಸಿಗದು. ಸಿಕ್ಕಿದರೂ ಅದರ ಮಿಶ್ರಣ ಈ ಹದದಲ್ಲಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಿಓಸಿ ಮಾಲಕಿ ದಿವ್ಯಾ ಪ್ರಭಾಕರ್.

ಕೇವಲ ಎರಡು ತಿಂಗಳ ಹಿಂದೆ ಮಂಗಳೂರು ಮೂಲದ ವಿಶಾಲ್ ಶೆಟ್ಟಿ ಜತೆ ಸೇರಿಕೊಂಡು ಆರಂಭಿಸಿದ ಈ ವಿಶಿಷ್ಟ ಪಾಕಶಾಲೆ ಇದೀಗ ಬೆಂಗಳೂರಲ್ಲಿ ಜನಜನಿತ. ಮಂಗಳೂರು ಶೈಲಿ ಜತೆಗೆ ಗೌಡ ಶೈಲಿಯ ಊಟ ಸಿಗುವ ಬೆಂಗಳೂರಿನ ಬೆರಳೆಣಿಕೆ ತಾಣಗಳಲ್ಲಿ ಇದೂ ಒಂದು. ಆತಿಥ್ಯ ಉದ್ಯಮದಲ್ಲಿ ಸಾಕಷ್ಟು ಅನುಭವ ಇರುವ ಇಬ್ಬರೂ, ಪ್ರಾದೇಶಿಕ ಸೊಗಡಿನ ಖಾದ್ಯ ಉಣಬಡಿಸುವ ಉದ್ದೇಶದಿಂದ ಆರಂಭಿಸಿದ ಈ ಆಹಾರೋದ್ಯಮ ಅಲ್ಪ ಅವಧಿಯಲ್ಲೇ ಜನಪ್ರಿಯವಾಗಿದೆ.

ಮೂಲಭೂತವಾಗಿ ಬಿಓಸಿ ಆರಂಭವಾದದ್ದು ಕೇಟರಿಂಗ್ ಸೇವೆಗಾಗಿ. ಕ್ಯಾಂಬ್ರಿಡ್ಜ್ ಲೇಔಟ್‌ನಲ್ಲಿ ಅಗತ್ಯಕ್ಕಿಂತ ದೊಡ್ಡ ಜಾಗ ಸಿಕ್ಕಿದ್ದರಿಂದ ಎರಡು ಹಾಲ್‌ನ ಈ ಭೋಜನಶಾಲೆ ಆರಂಭಿಸುವ ಯೋಚನೆ ಬಂತು ಎಂದು ಶೆಟ್ಟಿ ವಿವರಿಸುತ್ತಾರೆ. ಗೌಡರ ಸಂಪ್ರದಾಯದಂತೆ ತಾವು ಬೆಳೆದದ್ದನ್ನೆಲ್ಲ ತಿನ್ನುವ ಜಾಯಮಾನ ಅವರದ್ದು. ಅದು ಕಾಳು, ತರಕಾರಿ, ಸಾಕು ಪ್ರಾಣಿ ಯಾವುದೂ ಇರಬಹುದು. ಇದನ್ನು ರುಚಿಕರವಾಗಿ ಮಾಡಲು ಈರುಳ್ಳಿ,ಬೆಳ್ಳುಳ್ಳಿ, ಶುಂಠಿ ಹಾಗೂ ದನಿಯಾ ಅಧಿಕವಾಗಿ ಬಳಸುತ್ತೇವೆ ಎಂದು ಪ್ರಭಾಕರ್ ಪಾಕವೈಶಿಷ್ಟ್ಯ ವಿವರಿಸುತ್ತಾರೆ.

ಗೌಡರ ಅಡುಗೆ ಅಂದ ಮೇಲೆ ರಾಗಿ ಮುದ್ದೆ, ಮಟನ್/ ಚಿಕನ್/ ಬಸ್ಸಾರು, ಮಸ್ಸೊಪ್ಪು, ಪಲ್ಯ, ಅನ್ನ, ರಸಂ, ಮೊಸರು, ಬೆಲ್ಲದಿಂದ ತಯಾರಿಸಿದ ಒಂದು ಸಿಹಿ ಖಾದ್ಯ ಕಡ್ಡಾಯ. ಇನ್ನು ಔತಣಕೂಟದ ವಿಶೇಷ ಅಡುಗೆಯ ಮೆನು ಇನ್ನೂ ಬೆಳೆಯುತ್ತದೆ. ಮಸಾಲೆ ಮಜ್ಜಿಗೆ, ಕೋಸಂಬರಿಯೊಂದಿಗೆ ಆರಂಭವಾಗುವ ಖಾದ್ಯವೈವಿಧ್ಯದಲ್ಲಿ ಗೋಳಿಬಜೆ, ಕಾಯಿ ಚಟ್ನಿ, ಮಟನ್ ಕಟ್ಲೇಟ್‌ಯಂಥ ಸ್ಟಾರ್ಟರ್‌ಗಳು, ನೀರ್‌ದೋಸೆ ಅಥವಾ ರೊಟ್ಟಿ ಜತೆಗೆ ಕೋರಿ ಗಸಿ, ಪೋರ್ಕ್ ಬಪತ್, ಸೀರ್ ಫಿಶ್ ಫ್ರೈ, ಮಟನ್ ಸುಕ್ಕಾ, ಮನೋಲಿ, ಬನ್ನೂರು ಮಾಂಸ ಪಲಾವ್, ಪಚಡಿ, ಪುದಿನ ಚಟ್ನಿ, ಬೇಯಿಸಿದ ಮೊಟ್ಟೆ, ಅನ್ನಕ್ಕೆ ಮಂಗಳೂರು ವೈಶಿಷ್ಟ್ಯವಾದ ಮೆಣಸಿನಕಾಯಿ, ಕೊನೆಗೆ ಮೊಸರನ್ನ ಸೇರಿರುತ್ತದೆ.

ಇಷ್ಟನ್ನು ಸವಿದರೆ ದೇವೇಗೌಡರೇನು, ಯಾರಿಗೂ ನಿದ್ರೆ ಬರಲೇಬೇಕು!

ಕೃಪೆ: indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X