10ವರ್ಷದ ಬಾಲಕ ಪೋಸ್ಟರ್ ಹರಿದ ಎಂದು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ತೃಣಮೂಲದ ಗೂಂಡಾಗಳು
ಬಾಲಕ ಆಸ್ಪತ್ರೆಗೆ ದಾಖಲು

ಕೊಲ್ಕತಾ, ಎಪ್ರಿಲ್ 28: ಚುನಾವಣೆಯ ಕಾಲದಲ್ಲಿ ಹಿಂಸಾಗ್ರಸ್ತಘಟನೆಗಳಾಗುವುದು ಸಾಮಾನ್ಯ ಆದರೆ ಐದನೆ ತರಗತಿಯ ಹತ್ತು ವರ್ಷದ ಬಾಲಕನಿಗೆ ಹೊಡೆದವರಿಗೆ ಮಾನವೀಯತೆ ಇದೆ ಎಂದು ಒಪ್ಪಬಹುದಾ? ಪಶ್ಚಿಮಬಂಗಾಳದ ಹರಿಹರಪುರ ಗ್ರಾಮದಲ್ಲಿ ಐದನೆ ತರಗತಿಯ ಒಬ್ಬ ಬಾಲಕ ಮಾರ್ಗದಲ್ಲಿ ಬಿದ್ದಿದ್ದ ಒಂದು ಪೋಸ್ಟರ್‌ನ್ನು ಹೆಕ್ಕಿಗಾಳಿಪಟ ಮಾಡತೊಡಗಿದ್ದ. ಇದನ್ನು ನೋಡಿದ ಕೆಲವರು ಅಲ್ಲಿಗೆ ಬಂದರು. ಏನೂ ವಿಚಾರಿಸದೆ ಮಗುವನ್ನು ಮರಕ್ಕೆ ಕಟ್ಟಿಹಾಕಿ ಹೊಡೆಯಲಾರಂಬಿಸಿದರು. ಮಗುವನ್ನು ಬಿಡಿಸಲು ಯಾರು ಮುಂದೆ ಬರಲಿಲ್ಲ ಎಂದು ವರದಿಗಳೂ ತಿಳಿಸಿವೆ.
ವರದಿಯಾಗಿರುವ ಪ್ರಕಾರ ಹೀಗೆ ಹೊಡೆದವರು ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರಾಗಿದ್ದಾರೆ. ಅವರಿಗೆ ಅವರ ಪಕ್ಷದ ಉಮೇದ್ವಾರನ ಪೋಸ್ಟರ್ ಹರಿದಿದ್ದಾನೆಂದು ಬಾಲಕನಲ್ಲಿ ಕೋಪ ಉಕ್ಕೇರಿತ್ತು. ಮಗುವನ್ನು ಬಳಿಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಮಗುವಿಗೆ ಬ್ರೈನ್ ಹೇಮರೇಜ್ ಆಗಿದೆ ಎನ್ನಲಾಗಿದೆ. ಮಕ್ಕಳ ಮೇಲೆ ಹೀಗೆ ಹಿಂಸೆ ಮಾಡಿದ ಘಟನೆ ಇದಕ್ಕಿಂತ ಮೊದಲು ಪಶ್ಚಿಮಬಂಗಾಳದಿಂದ ವರದಿಯಾಗಿವೆ.
Next Story





