ಹಿರಿಯ ಪತ್ರಕರ್ತ ಜಯಶೀಲರಾವ್ ನಿಧನ

ಬೆಂಗಳೂರು, ಎ.28: ಹಿರಿಯ ಪತ್ರಕರ್ತ ಎಸ್‌ವಿ ಜಯಶೀಲ ರಾವ್ ಇಂದು ನಿಧನರಾದರು.
ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜಯಶೀಲರಾವ್ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಟಿಎಸ್ ಆರ್ ಪ್ರಶಸ್ತಿ ಪುರಸ್ಕೃತ ಜಯಶೀಲರಾವ್ ಮೂಲತ: ಮಂಡ್ಯ ತಾಲೂಕಿನ ಮಳವಳ್ಳಿ ನಿವಾಸಿ .1970ರ ದಶಕದಲ್ಲಿ ದಿನಪತ್ರಿಕೆಯ ವರದಿಗಾರರಾಗಿ, ಮತ್ತು ವಿಧಾನ ಮಂಡಲದ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಎಚ್ ಡಿ ದೇವೇಗೌಡ ಮುಖ್ಯ ಮಂತ್ರಿ ಮತ್ತು ಪ್ರಧಾನಿ ಆಗಿದ್ದಾಗ ಅವರಿಗೆ ಮಾಧ್ಯಮ ಸಲಹೆಗಾರನಾಗಿದ್ದ ಜಯಶೀಲ ರಾವ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದುಡಿದಿದ್ದರು.
Next Story





